ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಭಾರತ-ಕೆನಡಾ ಉದ್ವಿಗ್ನತೆಯ ಬಗ್ಗೆ ಅನವಶ್ಯಕವಾಗಿ ಟ್ವಿಟ್ ಮಾಡಿರುವ ಅಮೆರಿಕಾದ ಸಂಸದೆಗೆ ಶಿವಸೇನಾ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತ ವಿರೋಧಿ ನಿಲುವಿಗೆ ಹೆಸರುವಾಸಿಯಾದ ಯುಎಸ್ ಕಾಂಗ್ರೆಸ್ ಸದಸ್ಯೆ ಇಲ್ಹಾನ್ ಒಮರ್ ಅವರು ಟ್ವಿಟ್ ಮಾಡಿ, “ಕೆನಡಾ ನಾಗರಿಕ ನಿಜ್ಜರ್ ಹತ್ಯೆಯಲ್ಲಿ ಭಾರತವು ಭಾಗಿಯಾಗಿರುವ ಕುರಿತು ಕೆನಡಾದ ತನಿಖೆಯನ್ನು ಯುನೈಟೆಡ್ ಸ್ಟೇಟ್ಸ್ ಸಂಪೂರ್ಣವಾಗಿ ಬೆಂಬಲಿಸುವ ಅಗತ್ಯವಿದೆ. ಯುನೈಟೆಡ್ ಸ್ಟೇಟ್ಸ್ನಲ್ಲೂ ಇದೇ ರೀತಿಯ ಕಾರ್ಯಾಚರಣೆಗಳು ಇವೆಯೇ ಎಂಬ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ” ಎಂದಿದ್ದಾರೆ.
ಒಮರ್ ಅವರ ಪೋಸ್ಟ್ ಅನ್ನು ಮರುಟ್ವೀಟ್ ಮಾಡಿದ ಚತುರ್ವೇದಿ, “ಮೇಡಂ ಪ್ರತಿನಿಧಿಗಳೇ ಸಿಟ್ ಡೌನ್. ಒಬ್ಬಳು ಭಾರತೀಯ ಸಂಸದೆಯಾಗಿ ನಾನು ಯುಎಸ್ ಚುನಾಯಿತ ಪ್ರತಿನಿಧಿಯೊಬ್ಬರು ಪಾಕ್ ಅನುದಾನದಡಿ ಜಮ್ಮು ಮತ್ತು ಕಾಶ್ಮೀರದ ಪಿಒಕೆಗೆ ಭೇಟಿ ನೀಡುವ ಮೂಲಕ ಒಂದು ದೇಶದ ಶಾಂತಿಗೆ ಹೇಗೆ ಭಂಗ ತರುತ್ತಿದ್ದಾರೆ ಎಂಬುದರ ಕುರಿತು ತನಿಖೆಯನ್ನು ಪ್ರಾರಂಭಿಸಲು ಭಾರತದ ವಿದೇಶಾಂಗ ಸಚಿವಾಲಯವನ್ನು ನಾನು ಒತ್ತಾಯಿಸುತ್ತೇನೆ” ಎಂದಿದ್ದಾರೆ.
2022 ರಲ್ಲಿ, ಇಲ್ಹಾನ್ ಒಮರ್ ಪಾಕಿಸ್ತಾನಕ್ಕೆ ಭೇಟಿ ನೀಡಿ ಶೆಹಬಾಜ್ ಷರೀಫ್ ಮತ್ತು ಇಮ್ರಾನ್ ಖಾನ್ ಅವರನ್ನು ಭೇಟಿಯಾದರು ಮತ್ತು ಪಿಒಕೆ ಯಲ್ಲಿ ಮುಜಾಫರ್ಬಾದ್ಗೆ ಭೇಟಿ ನೀಡಿದರು. ಭಾರತ ಇದನ್ನು ‘ಸಂಕುಚಿತ ಮನಸ್ಸಿನ ರಾಜಕೀಯ’ ಎಂದು ಕರೆದಿತ್ತು ಮತ್ತು ಭೇಟಿಯನ್ನು ಖಂಡಿಸಿತ್ತು. ಇತ್ತೀಚಿನ ವರದಿಯೊಂದರಲ್ಲಿ, ಇಲ್ಹಾನ್ ಒಮರ್ ಅವರ ಭೇಟಿಯನ್ನು ಪಾಕಿಸ್ತಾನ ಸರ್ಕಾರ ಪ್ರಾಯೋಜಿಸಿದ್ದು, ಅವರ ವಸತಿ ಮತ್ತು ಆಹಾರ ಸೇರಿದಂತೆ ಎಲ್ಲದಕ್ಕೂ ಪಾಕಿಸ್ಥಾನ ಪಾವತಿಸಿದೆ ಎಂಬುದು ತಿಳಿದುಬಂದಿದೆ.
Sit down Madam Representative.
Such be the case, as an Indian Parliamentarian I urge @MEAIndia to start an enquiry into how an elected representative in USA is interfering in the peace of Jammu&Kashmir via Pakistan funded PoK visit. https://t.co/cYV08xt0sD— Priyanka Chaturvedi🇮🇳 (@priyankac19) September 27, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.