ನವದೆಹಲಿ: ‘ನಾರಿ ಶಕ್ತಿ ವಂದನ್ ಅಧಿನಿಯಮ’ (ಮಹಿಳಾ ಮೀಸಲಾತಿ ಮಸೂದೆ) ಅಂಗೀಕಾರಕ್ಕಾಗಿ ಪ್ರಧಾನಿಗೆ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದರು. ಈ ವೇಳೆ ಮೋದಿ ಮಹಿಳೆಯರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದಾರೆ.
ಶುಕ್ರವಾರ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಂಭ್ರಮದ ವಾತಾವರಣದ ನಡುವೆ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿತು. ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದ ಹಿನ್ನೆಲೆಯಲ್ಲಿ ಮಹಿಳೆಯರು ನೃತ್ಯದೊಂದಿಗೆ ಸಂಭ್ರಮಿಸುತ್ತಿರುವ ದೃಶ್ಯಗಳು ಕಂಡುಬಂದವು.
ಈ ವೇಳೆ ಮಾತನಾಡಿದ ಮೋದಿ, ನಾನು ಇಂದು ದೇಶದ ಪ್ರತಿಯೊಬ್ಬ ತಾಯಿ, ಸಹೋದರಿ ಮತ್ತು ಮಗಳನ್ನು ಅಭಿನಂದಿಸುತ್ತೇನೆ. ನಿನ್ನೆ ಮತ್ತು ಮೊನ್ನೆಯ ದಿನ ಹೊಸ ಇತಿಹಾಸ ನಿರ್ಮಾಣವಾಗಿದ್ದನ್ನು ನಾವೆಲ್ಲರೂ ನೋಡಿದ್ದೇವೆ ಮತ್ತು ಈ ಇತಿಹಾಸವನ್ನು ನಿರ್ಮಾಣ ಮಾಡುವ ಅವಕಾಶವನ್ನು ಕೋಟ್ಯಂತರ ಜನರು ಸೇರಿ ನಮಗೆ ನೀಡಿರುವುದು ನಮ್ಮ ಸೌಭಾಗ್ಯ. ಮುಂದಿನ ಹಲವು ತಲೆಮಾರುಗಳವರೆಗೆ ಈ ನಿರ್ಧಾರ ಮತ್ತು ಈ ದಿನದ ಬಗ್ಗೆ ಚರ್ಚೆಗಳು ನಡೆಯುತ್ತಿರುತ್ತವೆ ಎಂದರು.
ಸಂಸತ್ತಿನ ಉಭಯ ಸದನಗಳಲ್ಲಿ ಅತ್ಯಧಿಕ ಬಹುಮತದೊಂದಿಗೆ ‘ನಾರಿ ಶಕ್ತಿ ವಂದನ್ ಕಾಯ್ದೆ’ಯನ್ನು ಅಂಗೀಕರಿಸಿದ್ದಕ್ಕಾಗಿ ನಾನು ಇಡೀ ದೇಶವನ್ನು ಅಭಿನಂದಿಸುತ್ತೇನೆ. ಕೆಲವೊಮ್ಮೆ ಕೆಲವೊಂದು ನಿರ್ಧಾರಗಳಲ್ಲಿ ದೇಶದ ಭವಿಷ್ಯವನ್ನು ಬದಲಾಯಿಸುವ ಸಾಮರ್ಥ್ಯವಿರುತ್ತದೆ. ಇಂದು ನಾವೆಲ್ಲರೂ ಅಂತಹ ಒಂದು ನಿರ್ಧಾರಕ್ಕೆ ಸಾಕ್ಷಿಗಳಾಗಿದ್ದೇವೆ. ಸಂಸತ್ತಿನ ಉಭಯ ಸದನಗಳಲ್ಲಿ ದಾಖಲೆ ಮತಗಳೊಂದಿಗೆ ‘ನಾರಿ ಶಕ್ತಿ ವಂದನ್ ಮಸೂದೆ’ ಅಂಗೀಕಾರವಾಗಿದೆ. ದೇಶ ಯಾವುದಕ್ಕಾಗಿ ಕಳೆದ ಹಲವು ದಶಕಗಳಿಂದ ಕಾಯುತ್ತಿತ್ತೋ, ಆ ಕನಸು ಇಂದು ನನಸಾಗಿದೆ.
#WATCH | Women's Reservation Bill | Women felicitate Prime Minister Narendra Modi at the BJP Headquarters in Delhi; PM bows before them to pay them respect. pic.twitter.com/mBQOkhtHUY
— ANI (@ANI) September 22, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.