ರಿಂತು ಕಲ್ಯಾಣಿ ರಾಥೋಡ್ ಒರ್ವ ಅದ್ಭುತ ಪಾಕ ತಜ್ಞೆ. ವಿವಿಧ ಖಾದ್ಯಗಳನ್ನು ಮಾಡಿ ಹಣ ಮಾಡುವುದಷ್ಟೇ ಇವರ ಕಾಯಕವಲ್ಲ. ಖಾದ್ಯಗಳಲ್ಲಿ ಸೃಜನಶೀಲತೆಯನ್ನು ಪ್ರದರ್ಶಿಸುವ ಇವರು ಅದರ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ.
ಈ ಬಾರಿಯ ಗಣೇಶೋತ್ಸವಕ್ಕೆ 30ಕೆಜಿ ಚಾಕೋಲೇಟ್ನಲ್ಲಿ ಗಣಪನನ್ನು ರಚಿಸಿದ್ದ ಇವರು, ಬಳಿಕ ಅದನ್ನು ಹಾಲಲ್ಲಿ ವಿಸರ್ಜನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಆ ಚಾಕೋಲೇಟ್ ಹಾಲನ್ನು ೧೧೦೦ ಬಡ, ಅನಾಥ ಮಕ್ಕಳಿಗೆ ಪ್ರಸಾದ ರೂಪದಲ್ಲಿ ಹಂಚಿ ಸಾರ್ಥಕತೆ ಮೆರೆದಿದ್ದಾರೆ.
ಮಣ್ಣಿನ ಮೂರ್ತಿಯನ್ನು ಮಾಡಿ ಅದನ್ನು ನೀರಲ್ಲಿ ಮುಳುಗಿಸುವ ಬದಲು ಚಾಕೋಲೇಟ್ನಲ್ಲಿ ಗಣಪನನ್ನು ರಚಿಸಿ ಹಾಲಲ್ಲಿ ಮುಳುಗಿಸಿ ಆ ಹಾಲನ್ನು ಮಕ್ಕಳಿಗೆ ನೀಡಿದ್ದಾರೆ. ಚಾಕೋಲೇಟ್ ತಿನ್ನುವ ಭಾಗ್ಯವೂ ಇಲ್ಲದ ಈ ಮಕ್ಕಳು ಗಣೇಶನ ಹೆಸರಲ್ಲಿ ಚಾಕೋಲೇಟ್ ಹಾಲು ಕುಡಿಯಲಿ ಎಂಬುದು ಇವರ ಉದ್ದೇಶ.
ಖರ್ನ ರಾಮಕೃಷ್ಣ ಮಠದಲ್ಲಿ ೩೦೦ ಕಪ್ಕೇಕ್ ತಯಾರಿಸಿ ಅದಲ್ಲೆ ಗಣೇಶ ರಂಗೋಲಿಯ ರೂಪ ನೀಡಿದ್ದರು.
ಇಷ್ಟೇ ಅಲ್ಲ ಭೂಕಂಪಕ್ಕೆ ತತ್ತರಿಸಿ ಹೋಗಿದ್ದ ನೇಪಾಳಕ್ಕೆ ಸಹಾಯ ಮಾಡುವ ಸಲುವಾಗಿ ವಾಟ್ಸಾಪ್ ಮೂಲಕ ಸುತ್ತಮುತ್ತಲ ಗೃಹಿಣಿಯರನ್ನೆಲ್ಲಾ ಸೇರಿಸಿ 1 ಲಕ್ಷ ತಿಂಡಿಗಳನ್ನು ತಯಾರಿಸಿ ಕಳುಹಿಸಿಕೊಟ್ಟಿದ್ದಾರೆ. ಇವರ ಕಾರ್ಯಕ್ಕೆ ಏರ್ ಇಂಡಿಯಾ ಸಹಾಯ ಮಾಡಿತ್ತು. ಮಹಿಳೆಯರನ್ನು ಸೇರಿಸಿ ಫುಡ್ ಆರ್ಮಿಯನ್ನೇ ಅವರು ಕಟ್ಟಿದ್ದಾರೆ.
ಈ ಮೂಲಕ ಸಂತ್ರಸ್ಥ ಹಸಿವು ನೀಗಿಸಿದ್ದಾರೆ. ಕ್ರಿಸ್ಮಸ್ ಸೇರಿದಂತೆ ವಿವಿಧ ಹಬ್ಬಗಳಲ್ಲಿ ಅನಾಥಾಶ್ರಮಗಳಿಗೆ ಹೋಗಿ ಅವರಿಗೆ ತಾವು ತಯಾರಿಸಿದ ವಿವಿಧ ತಿಂಡಿಗಳನ್ನು ನೀಡಿ ಅವರೊಂದಿಗೆ ಹಬ್ಬವನ್ನು ಆಚರಿಸುತ್ತಾರೆ.
ಪ್ರಧಾನಿ ನರೇಂದ್ರ ಮೋದಿಯವರು ’ಸೆಲ್ಫಿ ವಿದ್ ಡಾಟರ್’ ಅಭಿಯಾನ ನಡೆಸಲು ಕರೆಗೊಟ್ಟಗ ಅದಕ್ಕೆ ಪೂರಕವಾಗಿ ಅನಾಥ ಹೆಣ್ಣುಮಗುವಿನ ಕೇಕ್ ತಯಾರಿಸಿದ್ದರು. ಅದಕ್ಕೆ ’ಹೆಣ್ಣು ಮಗುವನ್ನು ರಕ್ಷಿಸಿ’ ಎಂಬ ಶೀರ್ಷಿಕೆ ನೀಡಿದ್ದರು.
ತಮ್ಮ ಪಾಕ ಪ್ರಾವೀಣ್ಯತೆಯನ್ನು ಸಮಾಜದ ಸೇವೆಗಾಗಿ ಬಳಸುತ್ತಿರುವ ರಿಂತು ಕಲ್ಯಾಣ್ ರಾಥೋಡ್ ಅವರ ಕಾರ್ಯಕ್ಕೆ ನಮ್ಮದೊಂದು ಸಲಾಂ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.