ಮುಂಬಯಿ: ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ತೋರಲ್ ರಾಸ್ಪುತ್ರ ಅವರ ಜನಪ್ರಿಯ ಟಿವಿ ಧಾರಾವಾಹಿ ’ಬಾಲಿಕಾ ವಧು’ 2000 ಸಂಚಿಕೆಗಳನ್ನು ತಲುಪಿರುವ ಭಾರತದ ಮೊದಲ ಧಾರವಾಹಿ ಎನಿಸಿದೆ. ಕಲರ್ಸ್ನ ಈ ಧಾರಾವಾಹಿಯು ವಿವಿಧ ಸಾಮಾಜಿಕ ಸಮಸ್ಯೆಗಳು, ಬಾಲ್ಯ ವಿವಾಹ, ಕೌಟುಂಬಿಕ ದೌರ್ಜನ್ಯಗಳು, ವೈವಾಹಿಕ ಅತ್ಯಾಚಾರ ಸೇರಿದಂತೆ ಮಹಿಳೆಯರ ಸಬಲೀಕರಣ ಮೊದಲಾದ ಪಾತ್ರಗಳನ್ನು ಒಳಗೊಂಡಿದೆ.
2008ರಲ್ಲಿ ಪ್ರಾರಂಭವಾದ ಈ ಟಿವಿ ಪ್ರದರ್ಶನ ತನ್ನ ಪ್ರಬಲ ಕಥೆ, ಉತ್ತಮ ಅಭಿನಯದಿಂದಾಗಿ ಪ್ರೇಕ್ಷಕರೊಂದಿಗೆ ಒಂದು ಅತ್ಯುತ್ತಮ ಕೊಂಡಿಯನ್ನು ಸೃಷ್ಠಿಸಿದೆ. ಕಲರ್ಸ್ನ ಈ ಧಾರಾವಾಹಿ ಒಂದು ಯಶಸ್ವಿ ಮನೊರಂಜನಾ ಕಾರ್ಯಕ್ರಮವಾಗಿ ಗುರುತಿಸಿಕೊಂಡಿದೆ ಎಂದು ಕಲರ್ಸ್ನ ಸಿಇಒ ರಾಜ್ ನಾಯಕ್ ಹೇಳಿದ್ದಾರೆ.
ತಾಯಿ-ಮಗಳ ನಡುವಿನ ಸಂಬಂಧ ಜೀವನದ ಮುಖ್ಯ ಭಾಗವಾಗಿದ್ದು, ಈ ಧಾರಾವಾಹಿಯಲ್ಲಿ ಆನಂದಿ ಪಾತ್ರದ ಮೂಲಕ ಅದರ ಮಹತ್ವವನ್ನು ಅರಿಯುವಂತೆ ಮಾಡಿದ್ದೇನೆ ಎಂದು ರಾಸ್ಪುತ್ರ ಹೇಳಿದ್ದಾರೆ.
ಕಲರ್ಸ್ ಚಾನೆಲ್ ತಾಯಿ-ಮಗುವಿನ ಸಂಬಂಧದ ಅತ್ಯಂತ ಅಮೂಲ್ಯ ಕ್ಷಣಗಳ ಚಿತ್ರಗಳನ್ನು ವೀಕ್ಷಕರು ಸಾಮಾಜಿಕ ಜಾಲತಾಣಗಳಲಲ್ಲಿ ಹಂಚಿಕೊಳ್ಳಲು ಸಾಧ್ಯವಾಗುವಂತೆ ಅಖಿಲ ಭಾರತ ಛಾಯಾಗ್ರಹಣ ಉಪಕ್ರಮವನ್ನು ರಚಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.