ನವದೆಹಲಿ: ಜಮ್ಮು-ಕಾಶ್ಮೀರದ ರಜೌರಿಯಲ್ಲಿ ನಿನ್ನೆ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಸೇನಾ ಯೋಧನನ್ನು ಕಾಪಾಡುವ ಸಲುವಾಗಿ ಸೇನೆಯ ಸಾಹಸಿ ಶ್ವಾನ ಕೆಂಟ್ ತನ್ನ ಪ್ರಾಣಾರ್ಪಣೆ ಮಾಡಿದೆ. ಕೆಂಟ್ ತ್ಯಾಗಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಇಂದು ಶ್ರದ್ಧಾಂಜಲಿಯ ಮಹಾಪೂರವೇ ಹರಿದು ಬರುತ್ತಿದೆ.
ಮಂಗಳವಾರ, ಆರು ವರ್ಷದ ಲ್ಯಾಬ್ರಡಾರ್ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಶೋಧ ಕಾರ್ಯಾಚರಣೆಯ ವೇಳೆ ಸೈನಿಕರ ಗುಂಪನ್ನು ಮುನ್ನಡೆಸುತ್ತಿತ್ತು, ಈ ವೇಳೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡೇಟಿನಿಂದ ತನ್ನ ಹ್ಯಾಂಡ್ಲರ್ ಅನ್ನು ರಕ್ಷಿಸಲು ಕೆಂಟ್ ತನ್ನ ಪ್ರಾಣವನ್ನು ತ್ಯಜಿಸಿದಳು ಎಂದು ವರದಿಗಳು ತಿಳಿಸಿವೆ.
ಆಕೆಯ ಅಂತಿಮ ತ್ಯಾಗವನ್ನು ಸ್ಮರಿಸುವುದಕ್ಕಾಗಿ ಭಾರತೀಯ ಸೇನೆಯು ಕರ್ತವ್ಯದಲ್ಲಿರುವ ಸಂದರ್ಭದಲ್ಲಿನ ಆಕೆಯ ವೀಡಿಯೊವನ್ನು ಹಂಚಿಕೊಂಡಿದೆ, ಅವಳು ಏನು ಮಾಡಲು ತರಬೇತಿ ನೀಡಿದ್ದಳೋ ಅದನ್ನು ಮಾಡುತ್ತಾ, ಸೈನಿಕರನ್ನು ಶೋಧ ಕಾರ್ಯದಲ್ಲಿ ಮುನ್ನಡೆಸಿದಳು ಎಂದಿದೆ.
ಕೆಚ್ಚೆದೆಯ ಶ್ವಾನದ ಸಾವಿನ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ ಮತ್ತು ಅನೇಕರು ಅದರ ಉನ್ನತ ತ್ಯಾಗ ಮತ್ತು ಸಮರ್ಪಣೆಗೆ ನಮಿಸುತ್ತಿದ್ದಾರೆ.
Sad news coming in-
Brave Canine Warrior KENT of 21 Army Dog Unit laid down her life serving in ongoing OP SUJALIGALA at Rajouri, J&K earlier today – 12 September 2023.
The six year old female Labrador was leading a column of soldiers on the trail of fleeing terrorists. The… pic.twitter.com/L5j7MDZNiX
— LestWeForgetIndia🇮🇳 (@LestWeForgetIN) September 12, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.