ನವದೆಹಲಿ: ಇಂಡಿಯಾ ಹೆಸರನ್ನು ಭಾರತ ಎಂದು ಬದಲಾಯಿಸಲಾಗುತ್ತದೆ ಎಂಬ ಬಗ್ಗೆ ಎದ್ದಿರುವ ಚರ್ಚೆಗಳ ನಡುವೆಯೇ ಇಂದು ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ʼಭಾರತʼ ಎಂಬ ನಾಮಫಲಕವನ್ನು ಹಾಕಲಾಗಿದೆ.
ನವದೆಹಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯ ಹಲವು ಮಹತ್ವದ ಸನ್ನಿವೇಶಗಳಲ್ಲಿ ಇಂಡಿಯಾ ಬದಲು ಭಾರತ ಹೆಸರನ್ನು ನಮೋದಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗಣ್ಯರಿಗೆ ನೀಡಿದ ಆಹ್ವಾನ ಪತ್ರಿಕೆಯಲ್ಲೂ ʼಪ್ರಸಿಡೆಂಡ್ ಆಫ್ ಇಂಡಿಯಾʼ ಬದಲಿಗೆ ‘ಪ್ರಸಿಡೆಂಡ್ ಆಫ್ ಭಾರತ ” ಹೆಸರನ್ನು ಉಲ್ಲೇಖಿಸಲಾಗಿದೆ.
ಇಂದು ಜಿ-20 ಶೃಂಗಸಭೆಯನ್ನುದ್ದೇಶಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದಾಗ ದೇಶದ ಹೆಸರನ್ನು ‘ಭಾರತ” ಎಂದು ಪ್ರದರ್ಶಿಸಲಾಯಿತು. ಮೈಕ್ ನ ನೇಮ್ ಬೋರ್ಡ್ ನಲ್ಲಿಯೂ ಭಾರತ ಎಂದು ಪ್ರದರ್ಶಿಸಲಾಯಿತು.
ತಮ್ಮ ಉದ್ಘಾಟನಾ ಭಾಷಣಕ್ಕೂ ಮುಂಚಿತವಾಗಿ ಪ್ರಧಾನಿ ಮೋದಿ ಜಿ-20 ಶೃಂಗಸಭೆ ಸ್ಥಳವಾದ ಭಾರತ್ ಮಂಟಪದಲ್ಲಿ ಅಮೆರಿಕ ಅಧ್ಯಕ್ಷ ಜೋ- ಬೈಡನ್ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಹಲವು ವಿಶ್ವ ನಾಯಕರನ್ನು ಸ್ವಾಗತಿಸಿದರು.
#WATCH | G 20 in India | Prime Minister Narendra Modi says, "India's G20 presidency has become a symbol of inclusion, of 'sabka saath' both inside and outside the country. This has become people's G20 in India. Crores of Indians are connected to this. In more than 60 cities of… https://t.co/rc2iIO2IGf pic.twitter.com/SgE8r2Nojk
— ANI (@ANI) September 9, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.