ನವದೆಹಲಿ: “ಭಾರತವು ಜಿ20 ಶೃಂಗಸಭೆಯನ್ನು ಜನರ G20ಯನ್ನಾಗಿ ಪರಿವರ್ತಿಸಿದೆ. ಕೋಟ್ಯಂತರ ಜನರು ಅಧ್ಯಕ್ಷತೆಯೊಂದಿಗೆ ಬೆಸೆದುಕೊಂಡಿದ್ದಾರೆ, ಸುಮಾರು 200 ಸಭೆಗಳನ್ನು 60ಕ್ಕೂ ಅಧಿಕ ನಗರಗಳಲ್ಲಿ ನಡೆಸಲಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಜಿ20 ಶೃಂಗಸಭೆ ʼಒಂದು ಭೂಮಿ” ಅಧಿವೇಶನದಲ್ಲಿ ಹೇಳಿದ್ದಾರೆ.
“21ನೇ ಶತಮಾನದ ಈ ಸಮಯ ಸಂಪೂರ್ಣ ಜಗತ್ತಿಗೆ ಹೊಸ ದಿಕ್ಕು ತೋರಿಸುವ ಒಂದು ಮಹತ್ವಪೂರ್ಣ ಸಮಯವಾಗಿದೆ. ಹಲವು ವರ್ಷಗಳಷ್ಟು ಹಿಂದಿನ ಸವಾಲುಗಳು ನಮ್ಮಿಂದ ಹೊಸ ಪರಿಹಾರಗಳನ್ನು ಬಯಸುತ್ತಿರುವ ಸಮಯ ಇದಾಗಿದೆ. ಹೀಗಾಗಿ ನಾವು ಮಾನವ ಕೇಂದ್ರಿತ ವಿಧಾನದೊಂದಿಗೆ ನಮ್ಮ ಹೊಣೆಗಾರಿಕೆಯನ್ನು ನಿಭಾಯಿಸುತ್ತಾ ಮುನ್ನಡೆಯಬೇಕಾಗಿದೆ” ಎಂದಿದ್ದಾರೆ.
“ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ಏರಿಳಿತಗಳಿದ್ದರೂ, ಉತ್ತರ ಮತ್ತು ದಕ್ಷಿಣದ ವಿಭಜನೆಗಳಿದ್ದರೂ, ಪೂರ್ವ ಮತ್ತು ಪಶ್ಚಿಮದ ದೂರವಿದ್ದರೂ, ಆಹಾರ, ಇಂಧನ ಮತ್ತು ರಸಗೊಬ್ಬರಗಳ ನಿರ್ವಹಣೆ, ಭಯೋತ್ಪಾದನೆ ಮತ್ತು ಸೈಬರ್ ಸುರಕ್ಷತೆ, ಆರೋಗ್ಯ, ಇಂಧನ ಮತ್ತು ಜಲ ಸುರಕ್ಷತೆಗೆ ಸಂಬಂಧಿಸಿದಂತೆ ವರ್ತಮಾನದೊಂದಿಗೆ ಮುಂಬರುವ ತಲೆಮಾರಿಗಾಗಿ ನಾವು ಸವಾಲುಗಳಿಗೆ ಸಮಗ್ರ ಪರಿಹಾರ ಕಂಡುಕೊಳ್ಳುವತ್ತ ಸಾಗಬೇಕಿದೆ” ಎಂದಿದ್ದಾರೆ.
ಭಾರತದ G20 ಅಧ್ಯಕ್ಷತೆಯು ದೇಶದ ಒಳಗೆ ಮತ್ತು ಹೊರಗಡೆ ಸೇರ್ಪಡೆ ಮತ್ತು ಒಗ್ಗೂಡುವಿಕೆಯ ಪ್ರತೀಕವಾಗಿದೆ. ಭಾರತವು ಇದನ್ನು ಜನರ G20 ಯನ್ನಾಗಿ ಪರಿವರ್ತಿಸಿದೆ ಎಂದರು.
ಎಲ್ಲರ ಒಗ್ಗೂಡುವಿಕೆಯ ಭಾವನೆಯೊಂದಿಗೆಯೇ ಆಫ್ರಿಕನ್ ಯೂನಿಯನ್ಗೆ G20 ಯ ಖಾಯಂ ಸದಸ್ಯತ್ವವನ್ನು ನೀಡಬೇಕೆಂಬ ಪ್ರಸ್ತಾಪವನ್ನು ಭಾರತ ಮುಂದಿಟ್ಟಿದೆ. ಈ ಪ್ರಸ್ತಾಪಕ್ಕೆ ಎಲ್ಲರ ಸಹಮತವಿದೆ ಎಂಬ ವಿಶ್ವಾಸ ನನಗಿದೆ. ನಿಮ್ಮೆಲ್ಲರ ಅನುಮತಿಯೊಂದಿಗೆ ನಾನು ಆಫ್ರಿಕನ್ ಯೂನಿಯನ್ ಅಧ್ಯಕ್ಷರನ್ನು G20ಯ ಸ್ಥಾಯಿ ಸದಸ್ಯರ ರೂಪದಲ್ಲಿ ತಮ್ಮ ಸ್ಥಾನವನ್ನು ಅಲಂಕರಿಸುವಂತೆ ಆಮಂತ್ರಿಸುತ್ತೇನೆ ಎಂದಿದ್ದಾರೆ.
#WATCH | G 20 in India | PM Modi at the G 20 Summit says "Today, as the president of G 20, India calls upon the world together to transform the global trust deficit into one of trust and reliance. This is the time for all of us to move together. In this time, the mantra of 'Sabka… pic.twitter.com/vMWd9ph5nY
— ANI (@ANI) September 9, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.