ನವದೆಹಲಿ: ಭಾರತಕ್ಕೆ ಆಗಮಿಸಿರುವ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು ಕಳೆದ ರಾತ್ರಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಔತಣಕೂಟ ಮತ್ತು ಮಾತುಕತೆಯನ್ನು ನಡೆಸಿದ್ದಾರೆ.
ಬಳಿಕ ಟ್ವಿಟ್ ಮಾಡಿರುವ ಬಿಡೆನ್, ಜಿ20 ಶೃಂಗಸಭೆಯ ಸಮಯದಲ್ಲಿ ಭಾರತ ಮತ್ತು ಯುಎಸ್ ತಮ್ಮ ಪಾಲುದಾರಿಕೆ ಹಿಂದೆಂದಿಗಿಂತಲೂ ಬಲವಾಗಿದೆ ಎಂಬುದನ್ನು ದೃಢಪಡಿಸುತ್ತದೆ ಎಂದು ಹೇಳಿದ್ದಾರೆ.
“ನಿಮ್ಮನ್ನು ನೋಡಿ ಸಂತೋಷವಾಯಿತು ಪ್ರಧಾನಿಮಂತ್ರಿಗಳೇ. ಇಂದು ಮತ್ತು ಜಿ20ಯಾದ್ಯಂತ, ನಾವು ಯುನೈಟೆಡ್ ಸ್ಟೇಟ್ಸ್-ಭಾರತದ ಪಾಲುದಾರಿಕೆಯು ಹಿಂದೆಂದಿಗಿಂತಲೂ ಪ್ರಬಲವಾಗಿದೆ, ಹತ್ತಿರವಾಗಿದೆ ಮತ್ತು ಹೆಚ್ಚು ಕ್ರಿಯಾತ್ಮಕವಾಗಿದೆ ಎಂದು ದೃಢೀಕರಿಸುತ್ತೇವೆ” ಎಂದು X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜಿ20 ಶೃಂಗಸಭೆಗಾಗಿ ಬಿಡೆನ್ ನಿನ್ನೆ ಸಂಜೆ 7 ಗಂಟೆಗೆ ದೆಹಲಿಗೆ ಬಂದಿಳಿದರು. ಇಳಿದ ಸ್ವಲ್ಪ ಸಮಯದ ನಂತರ, ಯುಎಸ್ ಅಧ್ಯಕ್ಷರು ಖಾಸಗಿ ಭೋಜನ ಮತ್ತು ದ್ವಿಪಕ್ಷೀಯ ಮಾತುಕತೆಗಾಗಿ ಪ್ರಧಾನ ಮಂತ್ರಿಯ ನಿವಾಸಕ್ಕೆ ತೆರಳಿದರು. ಮಾತುಕತೆಯ ಕೊನೆಯಲ್ಲಿ ಬಿಡುಗಡೆಯಾದ ಜಂಟಿ ಹೇಳಿಕೆಯಲ್ಲಿ ಅಧ್ಯಕ್ಷ ಬಿಡೆನ್ ಅವರು ಭಾರತವನ್ನು ಖಾಯಂ ಸದಸ್ಯರಾಗಿ ಸುಧಾರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸೇರ್ಪಡೆಗೊಳಿಸಲು ತಮ್ಮ ಬೆಂಬಲವನ್ನು ಪುನರುಚ್ಚರಿಸಿದ್ದಾರೆ.
ಪರಮಾಣು ಶಕ್ತಿಯಲ್ಲಿ ಸಹಕಾರ, 6G ಮತ್ತು ಕೃತಕ ಬುದ್ಧಿಮತ್ತೆಯಂತಹ ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ಗಳನ್ನು ಮರುರೂಪಿಸುವ ಮಾರ್ಗಗಳ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ.
Great seeing you, Mr. Prime Minister.
Today, and throughout the G20, we'll affirm that the United States-India partnership is stronger, closer, and more dynamic than any time in history. pic.twitter.com/bEW2tPrNXr
— President Biden (@POTUS) September 8, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.