ನವದೆಹಲಿ: ಇನ್ವಾಯ್ಸ್ (ಸರಕುಪಟ್ಟಿ) ಪ್ರೋತ್ಸಾಹಕ ಯೋಜನೆ – ಮೇರಾ ಬಿಲ್ ಮೇರಾ ಅಧಿಕಾರ್ ಇಂದಿನಿಂದ ಪ್ರಾರಂಭವಾಗುತ್ತಿದೆ. ಸಾರ್ವಜನಿಕರಲ್ಲಿ ಹಕ್ಕಿನಿಂದ ಬಿಲ್ ಕೇಳುವ ಸಂಸ್ಕೃತಿ ಮತ್ತು ನಡವಳಿಕೆಯ ತರುವುದು ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯನ್ನು ಆರಂಭದಲ್ಲಿ ಅಸ್ಸಾಂ, ಗುಜರಾತ್ ಮತ್ತು ಹರಿಯಾಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ, ದಾದ್ರಾ ನಗರ ಹವೇಲಿ ಮತ್ತು ದಮನ್ ಮತ್ತು ದಿಯುಗಳಲ್ಲಿ ಪ್ರಾಯೋಗಿಕವಾಗಿ ಪ್ರಾರಂಭವಾಗಲಿದೆ.
ಹಣಕಾಸಿನ ವಹಿವಾಟುಗಳಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ಮತ್ತು ಗ್ರಾಹಕರನ್ನು ಸಬಲೀಕರಣಗೊಳಿಸುವ ಮಹತ್ವದ ಗುರಿಯನ್ನು ಈ ಯೋಜನೆ ಹೊಂದಿದೆ. ಈ ಯೋಜನೆಯು ಗ್ರಾಹಕರಿಗೆ ಒಂದು ಕೋಟಿ ರೂಪಾಯಿಗಳ ಆಕರ್ಷಕ ಬಹುಮಾನವನ್ನು ನೀಡುತ್ತದೆ.
ಖರೀದಿಗಳನ್ನು ಮಾಡುವಾಗ ಗ್ರಾಹಕರಲ್ಲಿ ವಿಶ್ವಾಸ ಮತ್ತು ಭರವಸೆಯನ್ನು ಮೂಡಿಸಲು ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ವ್ಯಾಪಾರದಿಂದ ಗ್ರಾಹಕ ವಹಿವಾಟುಗಳಿಗೆ ನಿಜವಾದ ಇನ್ವಾಯ್ಸ್ಗಳನ್ನು ಪಡೆಯುವ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಯೋಜನೆಯು ಸಜ್ಜಾಗಿದೆ, ಹೆಚ್ಚು ಪಾರದರ್ಶಕ ಆರ್ಥಿಕತೆಯನ್ನು ಇದು ಉತ್ತೇಜಿಸಲಿದೆ.
ಲಕ್ಕಿ ಡ್ರಾ ಯೋಜನೆಯಡಿ ಇದ್ದು, ಲಕ್ಕಿ ಡ್ರಾಗೆ ಪರಿಗಣಿಸಬೇಕಾದ ಇನ್ವಾಯ್ಸ್ಗಳ ಕನಿಷ್ಠ ಮೌಲ್ಯವನ್ನು ಇನ್ನೂರು ರೂಪಾಯಿಗಳಲ್ಲಿ ಇರಿಸಲಾಗಿದೆ. ಇದಕ್ಕಾಗಿ ವ್ಯಕ್ತಿಗಳು ಮೊಬೈಲ್ ಅಪ್ಲಿಕೇಶನ್ ಮೇರಾ ಬಿಲ್ ಮೇರಾ ಅಧಿಕಾರ್ ಮತ್ತು merabill.gst.gov.in ವೆಬ್ ಪೋರ್ಟಲ್ನಲ್ಲಿ ಇನ್ವಾಯ್ಸ್ಗಳನ್ನು ಅಪ್ಲೋಡ್ ಮಾಡಬೇಕು. ಭಾರತದ ಎಲ್ಲಾ ನಿವಾಸಿಗಳು ಇದರಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಲಕ್ಕಿ ಡ್ರಾಗೆ ಪರಿಗಣಿಸಲು ಗರಿಷ್ಠ 25 ಇನ್ವಾಯ್ಸ್ಗಳನ್ನು ಒಬ್ಬ ವ್ಯಕ್ತಿಯು ಒಂದು ತಿಂಗಳಲ್ಲಿ ಅಪ್ಲೋಡ್ ಮಾಡಬಹುದು. ಈ ಯೋಜನೆಯಲ್ಲಿ, ಸರ್ಕಾರವು ಪ್ರತಿ ತಿಂಗಳು 800 ಜನರನ್ನು ಆಯ್ಕೆ ಮಾಡುತ್ತದೆ, ಅವರು ಹತ್ತು ಸಾವಿರ ರೂಪಾಯಿಗಳನ್ನು ಬಹುಮಾನವಾಗಿ ಪಡೆಯುತ್ತಾರೆ. ತ್ರೈಮಾಸಿಕದಲ್ಲಿ ನಡೆಯುವ ಬಂಪರ್ ಡ್ರಾದಲ್ಲಿ ಇಬ್ಬರಿಗೆ ಒಂದು ಕೋಟಿ ರೂಪಾಯಿ ಬಹುಮಾನ ಸಿಗಲಿದೆ. ಈ ಪ್ರಾಯೋಗಿಕ ಯೋಜನೆಯು 12 ತಿಂಗಳ ಅವಧಿಯವರೆಗೆ ಕಾರ್ಯನಿರ್ವಹಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.