ನವದೆಹಲಿ: ಇಂದು ವಿಶ್ವ ಸಂಸ್ಕೃತ ದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನರಿಗೆ ವಿಶ್ವ ಸಂಸ್ಕೃತ ದಿನದ ಶುಭಾಶಯಗಳನ್ನು ಕೋರಿದ್ದಾರೆ. ಅಲ್ಲದೇ ಪ್ರಾಚೀನ ಭಾಷೆಯ ಶ್ರೇಷ್ಠತೆಯನ್ನು ಆಚರಿಸಲು ಒಂದು ವಾಕ್ಯವನ್ನು ಹಂಚಿಕೊಳ್ಳುವಂತೆ ಜನರನ್ನು ಒತ್ತಾಯಿಸಿದರು.
“ವಿಶ್ವ ಸಂಸ್ಕೃತ ದಿನದ ಶುಭಾಶಯಗಳು. ಅದರ ಬಗ್ಗೆ ಆಸಕ್ತಿ ಹೊಂದಿರುವ ಎಲ್ಲರಿಗೂ ನಾನು ಶ್ಲಾಘಿಸುತ್ತೇನೆ. ಭಾರತವು ಸಂಸ್ಕೃತದೊಂದಿಗೆ ವಿಶೇಷವಾದ ಸಂಬಂಧವನ್ನು ಹೊಂದಿದೆ. ಈ ಮಹಾನ್ ಭಾಷೆಯನ್ನು ಆಚರಿಸಲು, ಸಂಸ್ಕೃತದಲ್ಲಿ ಒಂದು ವಾಕ್ಯವನ್ನು ಹಂಚಿಕೊಳ್ಳಲು ನಾನು ನಿಮ್ಮೆಲ್ಲರನ್ನು ಒತ್ತಾಯಿಸುತ್ತೇನೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ. CelebratingSanskrit ಹ್ಯಾಶ್ ಟ್ಯಾಗ್ ನೀಡಿದ್ದಾರೆ.
ಅದರ ನಂತರ ಮತ್ತೊಂದು ಟ್ವಿಟ್ ಅನ್ನು ಸಂಸ್ಕೃತದಲ್ಲಿ ಮಾಡಿರುವ ಮೋದಿ, ಮುಂಬರುವ ದಿನಗಳಲ್ಲಿ ಭಾರತವು G20 ಶೃಂಗಸಭೆಯನ್ನು ಆಯೋಜಿಸುವ ಬಗ್ಗೆ, ಜನರು ಇಲ್ಲಿಗೆ ಬಂದು ಅದರ ಶ್ರೇಷ್ಠ ಸಂಸ್ಕೃತಿಯನ್ನು ಕಲಿಯುವ ಬಗ್ಗೆ ಮಾತನಾಡಿದ್ದಾರೆ.
Greetings on World Sanskrit Day. I laud all those who are passionate about it. India has a very special relation with Sanskrit. To celebrate this great language, I urge you all to share one sentence in Sanskrit. In the post below, I will also share a sentence. Don’t forget to use…
— Narendra Modi (@narendramodi) August 31, 2023
अग्रिमदिनेषु भारतं G20 संमेलनस्य आतिथ्यं करिष्यति। संपूर्णविश्वतः जनाः भारतम् आगमिष्यन्ति, अस्माकं श्रेष्ठसंस्कृतिं ज्ञास्यन्ति च। #CelebratingSanskrit
— Narendra Modi (@narendramodi) August 31, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.