ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ದೆಹಲಿಯಲ್ಲಿ ಶಾಲಾ ಬಾಲಕಿಯರು ರಾಖಿ ಕಟ್ಟಿ ರಕ್ಷಾ ಬಂಧನವನ್ನು ಆಚರಿಸಿದರು. ಪುಟಾಣಿ ಮಕ್ಕಳು ಕೂಡ ಮೋದಿಗೆ ರಕ್ಷೆ ಕಟ್ಟಿ ಸಂಭ್ರಮಿಸಿದರು. ಇದಕ್ಕೂ ಮುನ್ನ ಮೋದಿ ಇಡೀ ದೇಶಕ್ಕೆ ರಕ್ಷಾಬಂಧನ ಶುಭಾಶಯ ಕೋರಿದ್ದು, ಇದನ್ನು ಅವಿನಾಭಾವ ನಂಬಿಕೆಯ ಹಬ್ಬ ಎಂದು ಕರೆದರು.
ಟ್ವಿಟ್ ಮಾಡಿರುವ ಮೋದಿ “ನನ್ನ ಕುಟುಂಬದ ಎಲ್ಲ ಸದಸ್ಯರಿಗೆ ರಕ್ಷಾಬಂಧನದ ಶುಭಾಶಯಗಳು. ಸಹೋದರಿ ಮತ್ತು ಸಹೋದರರ ನಡುವಿನ ಅವಿನಾಭಾವ ನಂಬಿಕೆ ಮತ್ತು ಅಪಾರ ಪ್ರೀತಿಗೆ ಸಮರ್ಪಿತವಾದ ರಕ್ಷಾಬಂಧನದ ಈ ಮಂಗಳಕರ ಹಬ್ಬವು ನಮ್ಮ ಸಂಸ್ಕೃತಿಯ ಪವಿತ್ರ ಪ್ರತಿಬಿಂಬವಾಗಿದೆ. ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ವಾತ್ಸಲ್ಯ, ಸಾಮರಸ್ಯ ಮತ್ತು ಸಾಮರಸ್ಯದ ಭಾವನೆಯನ್ನು ಗಾಢಗೊಳಿಸುತ್ತದೆ ಎಂದು ನಾನು ಬಯಸುತ್ತೇನೆ” ಎಂದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿರುವ ವೀಡಿಯೊದಲ್ಲ ದೆಹಲಿಯ ವಿದ್ಯಾರ್ಥಿನಿಯರು ಮೋದಿ ಕೈಗೆ ರಾಖಿ ಕಟ್ಟುತ್ತಿರುವುದನ್ನು ಮತ್ತು ಪ್ರಧಾನಿ ಮೋದಿ ಕುರ್ಚಿಯಲ್ಲಿ ಕುಳಿತು ಕ್ಷಣಗಳನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಅಲ್ಲದೇ ಮಕ್ಕಳೊಂದಿಗೆ ಮೋದಿ ಸಂವಾದ ನಡೆಸುತ್ತಾ ಪ್ರೀತಿ ತೋರಿಸುತ್ತಿರುವುದನ್ನೂ ಕಾಣಬಹುದು.
#WATCH | School girls tie Rakhi to Prime Minister Narendra Modi in Delhi, as they celebrate the festival of #RakshaBandhan with him. pic.twitter.com/Hhyjx63xgi
— ANI (@ANI) August 30, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.