ನವದೆಹಲಿ: ಜೋಹಾನ್ಸ್ಬರ್ಗ್ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಕೆಲವು ವಿಶ್ವ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಉಡುಗೊರೆಯಾಗಿ ಭಾರತೀಯ ಪರಂಪರೆಯನ್ನು ಪ್ರತಿಬಿಂಬಿಸುವ ಕಲಾಕೃತಿಗಳು ಮತ್ತು ಸಾಂಪ್ರದಾಯಿಕ ವಸ್ತುಗಳನ್ನು ನೀಡಿದ್ದಾರೆ.
ಮೋದಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರಿಗೆ ತೆಲಂಗಾಣದಿಂದ ಒಂದು ಜೋಡಿ ಬಿದ್ರಿ ಸುರಾಹಿ (ಹೂದಾನಿ) ಮತ್ತು ಅವರ ಪತ್ನಿ ಮತ್ತು ಆತಿಥೇಯ ದೇಶದ ಪ್ರಥಮ ಮಹಿಳೆಗೆ ನಾಗಾಲ್ಯಾಂಡ್ ಶಾಲು ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೂದಾನಿಯನ್ನು ಬೀದರ್ ಕೋಟೆಯ ವಿಶೇಷ ಮಣ್ಣಿನಿಂದ ತಯಾರಿಸಲಾಗುತ್ತದೆ. ಇದು ಸತು ಮಿಶ್ರಲೋಹವನ್ನು ಹೊಂದಿರುವುದರಿಂದ ಹೊಳಪಿನ ಕಪ್ಪು ಬಣ್ಣಕ್ಕೆ ತಿರುಗಲು ಕಾರಣವಾಗುತ್ತದೆ, ಬೆಳ್ಳಿಯ ಒಳಪದರವು ಕಪ್ಪು ಹಿನ್ನೆಲೆಯೊಂದಿಗೆ ಹೂದಾನಿಗೆ ಮತ್ತಷ್ಟು ಬೆರಗು ತುಂಬುತ್ತದೆ.
“ಪ್ರಧಾನಿ ಮೋದಿ ಅವರು ತೆಲಂಗಾಣದ ಬಿದ್ರಿ ಕಲೆಯ ಜೋಡಿ ಸುರಾಹಿಯನ್ನು ದಕ್ಷಿಣ ಆಫ್ರಿಕಾದ ಅಧ್ಯಕ್ಷರಿಗೆ, ನಾಗಾಲ್ಯಾಂಡ್ ಶಾಲು ದಕ್ಷಿಣ ಆಫ್ರಿಕಾದ ಪ್ರಥಮ ಮಹಿಳೆಗೆ ಮತ್ತು ಮಧ್ಯಪ್ರದೇಶದ ಗೊಂಡ ಪೇಂಟಿಂಗ್ ಅನ್ನು ಬ್ರೆಜಿಲ್ ಅಧ್ಯಕ್ಷರಿಗೆ ಉಡುಗೊರೆಯಾಗಿ ನೀಡಿದರು” ಎಂದು ಮೂಲಗಳು ತಿಳಿಸಿವೆ.
ಉಡುಗೊರೆಯಲ್ಲಿ ಬೆಳ್ಳಿಯ ‘ನಕ್ಕಾಶಿ’ ಕೂಡ ಇತ್ತು, ಅದರ ಮಾದರಿಗಳನ್ನು ಮೊದಲು ಕಾಗದದ ಮೇಲೆ ಚಿತ್ರಿಸಲಾಗುತ್ತದೆ ಮತ್ತು ನಂತರ ಬೆಳ್ಳಿ ಹಾಳೆಗಳ ಮೇಲೆ ವರ್ಗಾಯಿಸಲಾಗುತ್ತದೆ.
PHOTO | PM Modi gifts Bidri work Pair of Surahi from Telangana to South African President, Nagaland Shawl to the first lady of South Africa, and Gond Painting from Madhya Pradesh to Brazilian President.
(Source: Third Party) pic.twitter.com/ZGwqbnKj1m
— Press Trust of India (@PTI_News) August 24, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.