ನಿಯಾಮಿ: ನೈಜರ್ನಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯ ನಡುವೆ ಸುಮಾರು 300 ಭಾರತೀಯರು ರಾಜಧಾನಿ ನಿಯಾಮಿಯಲ್ಲಿ ಸಿಲುಕಿಕೊಂಡಿದ್ದಾರೆ. ಭಾರತ ಸರ್ಕಾರ ತಮ್ಮನ್ನು ಸ್ಥಳಾಂತರ ಮಾಡಲಿ ಎಂಬ ನಿರೀಕ್ಷೆಯಲ್ಲಿ ಅವರು ಕಾಯುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಸಿಲುಕಿಕೊಂಡಿರುವ ಭಾರತೀಯರು ನೈಜರ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಪದೇ ಪದೇ ಮನವಿಗಳನ್ನು ಕಳುಹಿಸಿದ್ದಾರೆ. ರಾಯಭಾರ ಕಚೇರಿಯಿಂದ ಸ್ಥಳಾಂತರಿಸುವ ಕಾರ್ಯಾಚರಣೆಯ ಕುರಿತು ಯಾವುದೇ ಪ್ರತಿಕ್ರಿಯೆ ಅಥವಾ ಸ್ಪಷ್ಟತೆ ಸಿಗದ ಕಾರಣ, ಎಂಟು ಕೇರಳೀಯರನ್ನು ಒಳಗೊಂಡಿರುವ ಒಂದು ಗುಂಪು ರಾಜಧಾನಿ ನಿಯಾಮಿಯನ್ನು ತೊರೆದು ರಸ್ತೆಯ ಮೂಲಕ ಗಡಿಯನ್ನು ದಾಟಲು ಮುಂದಾಗಿದ್ದಾರೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಗುಂಪು ಬುಧವಾರ ಬೆಳಿಗ್ಗೆ ಬೆನಿನ್ ಗಡಿಯನ್ನು ತಲುಪಿದೆ. ಭಾರತದ ರಾಯಭಾರ ಕಚೇರಿಯಿಂದ ಹೊರಡಿಸಲಾದ ಪತ್ರವು ರಾಜಧಾನಿಯ ಗಡಿಯನ್ನು ದಾಟಲು ಅವರಿಗೆ ಸೂಚಿಸಿರುವ ಕಾರಣ ಅವರು ಗಡಿ ದಾಟುವ ಸವಾಲನ್ನು ಕೈಗೊಂಡಿದ್ದಾರೆ ಎಂದು ಗುಂಪಿನ ಸದಸ್ಯರಲ್ಲಿ ಒಬ್ಬರು ಹೇಳಿದ್ದಾರೆ. ಬೆನಿನ್ ಗಡಿಯಲ್ಲಿ ನೈಜರ್ ಮಿಲಿಟರಿ ಈ ಗುಂಪನ್ನು ನಿಲ್ಲಿಸಿ ಹತ್ತಿರದ ಕಟ್ಟಡದಲ್ಲಿ ಆಶ್ರಯ ಪಡೆಯಲು ಅವರನ್ನು ಒತ್ತಾಯಿಸಿದೆ. ಆದೆರ ಪದೇ ಪದೇ ವಿನಂತಿಸಿದ ನಂತರ, ನಿನ್ನೆ ಗಡಿ ದಾಟಲು ಅವರಿಗೆ ಅವಕಾಶ ನೀಡಲಾಗಿದೆ. ಅವರ ಪಾಸ್ಪೋರ್ಟ್ಗಳಿಗೆ ಅಧಿಕಾರಿಗಳು ಬೆನಿನ್ಗೆ ನಿರ್ಗಮನ ಮತ್ತು ಪ್ರವೇಶದ ಮುದ್ರೆ ಹಾಕಿದ್ದಾರೆ. ಗುಂಪು ಇಂದು ರಾಜಧಾನಿ ಪೋರ್ಟೊ-ನೊವೊ ತಲುಪಲಿದೆ. ಸದಸ್ಯರು ಅಲ್ಲಿಂದ ತಾವಾಗಿಯೇ ಭಾರತಕ್ಕೆ ವಿಮಾನದಲ್ಲಿ ಹೋಗಬೇಕಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.