ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ (WHO)ಯ ಜಾಗತಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಬುಧವಾರ ಭಾರತಕ್ಕೆ ಆಗಮಿಸಿದ್ದಾರೆ. ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮೀಯವಾಗಿ ಸ್ವಾಗತಿಸಿದರು.
ಮೋದಿಯವರು ಡಾ. ಟೆಡ್ರೊಸ್ ಅವರನ್ನು ‘ತುಳಸಿ ಭಾಯಿ’ ಎಂಬ ಹೆಸರನ್ನು ಬಳಸಿ ಸಂಬೋಧಿಸಿದ್ದಾರೆ, ಪ್ರಧಾನಮಂತ್ರಿಯವರು ತಮ್ಮ ಕೊನೆಯ ಭೇಟಿಯಲ್ಲಿ ಮಹಾನಿರ್ದೇಶಕರಿಗೆ ಈ ಹೆಸರನ್ನು ಪ್ರಧಾನಿಸಿದ್ದರು.
ಕಳೆದ ಬಾರಿ ಗುಜರಾತಿಗೆ ಅಗಮಿಸಿದ್ದಾಗ ನನಗೊಂದು ಗುಜರಾತಿ ಹೆಸರು ನೀಡುವಂತೆ ಟೆಡ್ರೂಸ್ ಮೋದಿಗೆ ಕೇಳಿಕೊಂಡಿದ್ದರಂತೆ, ಅದರಂತೆ ಮೋದಿ ತುಳಸಿ ಭಾಯ್ ಹೆಸರನ್ನು ಇಟ್ಟಿದ್ದಾರೆ.
ಗುಜರಾತಿನ ಗಾಂಧಿನಗರದಲ್ಲಿ ಇಂದಿನಿಂದ 18ರವರೆಗೆ ನಡೆಯಲಿರುವ ಡಬ್ಲ್ಯುಎಚ್ಒ ಸಾಂಪ್ರದಾಯಿಕ ಔಷಧದ ಜಾಗತಿಕ ಶೃಂಗಸಭೆಯಲ್ಲಿ ಡಾ.ಟೆಡ್ರೊಸ್ ಭಾಗವಹಿಸಲಿದ್ದಾರೆ.
ಆಯುಷ್ ಸಚಿವಾಲಯವು ತನ್ನ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಡಾ ಟೆಡ್ರೊಸ್ ದಾಂಡಿಯಾ ಪ್ರದರ್ಶನ ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದೆ. ಈ ಟ್ವೀಟ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ತಮ್ಮ ಆತ್ಮೀಯ ಸ್ನೇಹಿತೆ ತುಳಸಿ ಭಾಯ್ ನವರಾತ್ರಿಗೆ ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.
My good friend Tulsi Bhai is clearly well prepared for Navratri! Welcome to India, @DrTedros! https://t.co/NSOSe32ElW
— Narendra Modi (@narendramodi) August 16, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.