ನವದೆಹಲಿ: ಮಾಜಿ ಸೈನಿಕರ ಕಲ್ಯಾಣ ಯೋಜನೆಗಳ ಮೊತ್ತವನ್ನು ಹೆಚ್ಚಿಸುವ ಸರ್ಕಾರದ ಇತ್ತೀಚಿನ ಕ್ರಮವು ಅವರ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿದ ಪ್ರಧಾನಿ, ನಮ್ಮ ದೇಶವನ್ನು ರಕ್ಷಿಸಿದ ವೀರ ಮಾಜಿ ಸೈನಿಕರ ಬಗ್ಗೆ ಭಾರತ ಹೆಮ್ಮೆಪಡುತ್ತದೆ ಎಂದರು.
ಮಾಜಿ ಸೈನಿಕರ ಕಲ್ಯಾಣ ಮತ್ತು ಸುಲಭ ಜೀವನ ನೀತಿಯ ಅನುಸಾರವಾಗಿ ಮಾಜಿ ಸೈನಿಕರ ವಿವಿಧ ಕಲ್ಯಾಣ ಯೋಜನೆಗಳ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದು ರಾಜನಾಥ್ ಸಿಂಗ್ ಮಾಹಿತಿ ನೀಡಿದರು.
ಮಾಜಿ ಸೈನಿಕರ ವಿಧವೆಯರಿಗೆ ವೃತ್ತಿ ತರಬೇತಿ ಅನುದಾನ ಯೋಜನೆಯಡಿ ಧನಸಹಾಯವನ್ನು 20,000ದಿಂದ 50,oooಕ್ಕೆ ಹೆಚ್ಚಿಸಲಾಗಿದೆ. ಪಿಂಚಣಿದಾರರಲ್ಲದ ಮಾಜಿ ಸೈನಿಕರು ಅಥವಾ ಅವರ ವಿಧವೆಯರು ಹೆಚ್ಚಿದ ವೈದ್ಯಕೀಯ ಅನುದಾನ ಪಡೆಯಲಿದ್ದಾರೆ, ಅದರ ಮೊತ್ತವನ್ನು 30,000ದಿಂದ 50,000 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಪಿಂಚಣಿದಾರರಲ್ಲದ ಮಾಜಿ ಸೈನಿಕರು ಅಥವಾ ಅವರ ವಿಧವೆಯರಿಗೆ ಗಂಭೀರ ರೋಗಗಳ ಅನುದಾನವನ್ನು ಒಂದು ಲಕ್ಷ 25 ಸಾವಿರದಿಂದ ಒಂದು ಲಕ್ಷ 50 ಸಾವಿರಕ್ಕೆ ಹೆಚ್ಚಿಸಲಾಗಿದೆ.
India is proud of the valiant Ex-Servicemen who have defended our nation. The welfare schemes which have been enhanced for them will greatly improve their quality of life. https://t.co/vtGMVpbEGg
— Narendra Modi (@narendramodi) August 11, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.