ನವದೆಹಲಿ: ಭಾರತದಲ್ಲಿ ಇಲ್ಲಿಯವರೆಗೆ ಒಟ್ಟು 59,524 ಕಿಮೀ ಉದ್ದದ ಬ್ರಾಡ್ ಗೇಜ್ (ಬಿಜಿ) ರೈಲು ಮಾರ್ಗವನ್ನು ವಿದ್ಯುದ್ದೀಕರಿಸಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸಂಸತ್ತಿಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ನಿನ್ನೆ ಲೋಕಸಭೆಯಲ್ಲಿ ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರೈಲು ಮಾರ್ಗದ ವಿದ್ಯುದ್ದೀಕರಣವು ಕಡಿಮೆ ನಿರ್ವಹಣಾ ವೆಚ್ಚ, ಭಾರವಾದ ಸರಕು ರೈಲುಗಳು ಮತ್ತು ದೀರ್ಘ ಪ್ರಯಾಣಿಕ ರೈಲುಗಳ ಸಾಗಣೆಯಂತಹ ಪ್ರಯೋಜನಗಳನ್ನು ನೀಡುತ್ತದೆ ಎಂದು ಹೇಳಿದರು.
ಇದಲ್ಲದೆ, ರೈಲುಗಳ ವೇಗವನ್ನು ಹೆಚ್ಚಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಅವರು ಸದನಕ್ಕೆ ತಿಳಿಸಿದ ಅವರು, ವಿಭಾಗೀಯ ವೇಗವನ್ನು 10,400 ರೂಟ್ ಕಿಮೀಗಳಿಂದ ಗಂಟೆಗೆ 130 ಕಿಮೀಗೆ ಏರಿಸಲಾಗಿದೆ ಎಂದು ಅವರು ಹೇಳಿದರು.
ಪ್ರಸ್ತುತ ನವದೆಹಲಿ-ಮುಂಬೈ (ವಡೋದರಾ-ಅಹಮದಾಬಾದ್ ಸೇರಿದಂತೆ) ಮತ್ತು ನವದೆಹಲಿ-ಹೌರಾ (ಕಾನ್ಪುರ್-ಲಖನೌ ಸೇರಿದಂತೆ) ಮಾರ್ಗಗಳಲ್ಲಿ ವಿಭಾಗೀಯ ವೇಗವನ್ನು ಗಂಟೆಗೆ 160 ಕಿ.ಮೀ.ಗೆ ಹೆಚ್ಚಿಸುವ ಕಾಮಗಾರಿಗಳನ್ನು ಕ್ರಮವಾಗಿ ರೂ. 6806 ಕೋಟಿ ಮತ್ತು ರೂ. 6685 ಕೋಟಿ ವೆಚ್ಚದಲ್ಲಿ ಅನುಮೋದಿಸಲಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.