ಉಡುಪಿ : ಕರಾವಳಿಯ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಹಲವು ವರ್ಷಗಳಿಂದ ಕ್ರಿಯಾಶೀಲವಾಗಿರುವ ಅಸೋಸಿಯೇಷನ್ ಆಫ್ ಕೋಸ್ಟಲ್ ಟೂರಿಸಂ (ಎಸಿಟಿ-ಆ್ಯಕ್ಟ್) ವಿಶ್ವಪ್ರವಾಸೋದ್ಯಮ ದಿನಾಚರಣೆ ಸೆ. 27 ರಂದು ಉಡುಪಿಯಲ್ಲಿ ಸಾರ್ವಜನಿಕ ಬೈಕ್ ಜಾಥ ಹಮ್ಮಿಕೊಂಡಿದೆ.
ಜಾಥ ಮಣಿಪಾಲದಲ್ಲಿರುವ ಜಿಲ್ಲಾಧಿಧಿಕಾರಿ ಕಚೇರಿಯಿಂದ ಬನ್ನಂಜೆಯ ಹಿಂದಿನ ಜಿಲ್ಲಾಧಿಕಾರಿ ಕಚೇರಿ ವರೆಗೆ ಸಂಚರಿಸಲಿದೆ. ವಿವಿಧ ಬೈಕ್ ಆಸಕ್ತರ ಅಸೋಸಿಯೇಷನ್ಗಳು, ವಿಂಟೇಜ್ ಕಾರ್ ಅಸೋಸಿಯೇಷನ್, ಬುಲೆಟ್-ಬೈಕ್ ಸಂಘಗಳು ಮತ್ತು ಹಲವರ ಸಹಯೋಗದೊಂದಿಗೆ ಜಾಥ ನಡೆಯಲಿದೆ. ಆಸಕ್ತರು ಅಂದು ಬೆಳಗ್ಗೆ 10.30ಕ್ಕೆ ಮಣಿಪಾಲ ಜಿಲ್ಲಾಧಿಧಿಕಾರಿ ಕಚೇರಿಗೆ ಆಗಮಿಸಬೇಕು.
ವಾಜಪೇಯಿ ಸಭಾಂಗಣದಲ್ಲಿ ನಡೆಯುವ ಪ್ರವಾಸೋದ್ಯಮ ದಿನಾಚರಣೆ ಸಭೆ ಬಳಿಕ ಬೈಕ್ ಜಾಥ ಹೊರಡಲಿದೆ. ಸತೀಶ್ ಶೆಟ್ಟಿ, ಪೆನಿನ್ಸುಲರ್ ಗ್ರೂಪ್ ಆಫ್ ಹೊಟೇಲ್ ಮುಂಬೈ, ಪ್ರಕಾಶ್ ಶೆಟ್ಟಿ ಎಂ.ಆರ್.ಜಿ. ಗ್ರೂಪ್ ಬೆಂಗಳೂರು ಮತ್ತು ಇತರ ಗಣ್ಯರು ರ್ಯಾಲಿಯ ಚಾಲನೆ ಸಂದರ್ಭ ಉಪಸ್ಥಿತರಿರುವರು. ಜಾಥಯಲ್ಲಿ ಪಾಲ್ಗೊಳ್ಳುವವರಿಗೆ ಪ್ರಮಾಣಪತ್ರ ನೀಡಲಾಗುವುದು.
ಪ್ರವಾಸೋದ್ಯಮಕ್ಕೆ ಕೊಡುಗೆ : ಕಳೆದ ವರ್ಷಗಳಿಂದ ಇಲ್ಲಿನ ಪ್ರವಾಸೋದ್ಯಮ ಚಟುವಟಿಕೆಗಳಲ್ಲಿ ವಿಶೇಷವಾಗಿ ತೊಡಗಿಸಿಕೊಂಡಿರುವ ಆ್ಯಕ್ಟ್ ಕಳೆದ ಬಾರಿಯೂ ಬೈಕ್ ರ್ಯಾಲಿ ಆಯೋಜಿಸಿತ್ತು. ಜನತೆ, ಸರಕಾರಗಳನ್ನು ಪ್ರವಾಸೋದ್ಯಮದತ್ತ ಸೆಳೆಯುವ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ಕೊಡುಗೆ ನೀಡುವ ಉದ್ದೇಶ ಆ್ಯಕ್ಟ್ನದ್ದಾಗಿದೆ. ಸೈಂಟ್ ಮೇರಿಸ್ ದ್ವೀಪ ಸೇರಿದಂತೆ ಬೀಚ್ಗಳ ಸ್ವತ್ಛತೆ, ಕೋಸ್ಟ್ಗಾರ್ಡ್ಗಳಿಗೆ ರಾಷ್ಟ್ರೀಯ ತರಬೇತುದಾರರಿಂದ ತರಬೇತಿ ಮೊದಲಾದ ರಚನಾತ್ಮಕ ಕೆಲಸಗಳನ್ನು ನಡೆಸುತ್ತಾ ಬಂದಿದೆ ಎಂದು ಆ್ಯಕ್ಟ್ ಅಧ್ಯಕ್ಷ ಮನೋಹರ್ ಶೆಟ್ಟಿ ಮತ್ತು ಜತೆ ಕಾರ್ಯದರ್ಶಿ ನಾಗರಾಜ್ ಹೆಬ್ಟಾರ್ ತಿಳಿಸಿದ್ದಾರೆ.
ಕಳೆದ ವರ್ಷಗಳಿಂದ ಇಲ್ಲಿನ ಪ್ರವಾಸೋದ್ಯಮ ಚಟುವಟಿಕೆಗಳಲ್ಲಿ ವಿಶೇಷವಾಗಿ ತೊಡಗಿಸಿಕೊಂಡಿರುವ ಆ್ಯಕ್ಟ್ ಕಳೆದ ಬಾರಿಯೂ ಬೈಕ್ ಜಾಥ ಆಯೋಜಿಸಿತ್ತು. ಜನತೆ, ಸರಕಾರಗಳನ್ನು ಪ್ರವಾಸೋದ್ಯಮದತ್ತ ಸೆಳೆಯುವ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ಕೊಡುಗೆ ನೀಡುವ ಉದ್ದೇಶ ಆ್ಯಕ್ಟ್ನದ್ದಾಗಿದೆ. ಸೈಂಟ್ ಮೇರಿಸ್ ದ್ವೀಪ ಸೇರಿದಂತೆ ಬೀಚ್ಗಳ ಸ್ವತ್ಛತೆ, ಕೋಸ್ಟ್ಗಾರ್ಡ್ಗಳಿಗೆ ರಾಷ್ಟ್ರೀಯ ತರಬೇತುದಾರರಿಂದ ತರಬೇತಿ ಮೊದಲಾದ ರಚನಾತ್ಮಕ ಕೆಲಸಗಳನ್ನು ನಡೆಸುತ್ತಾ ಬಂದಿದೆ ಎಂದು ಆ್ಯಕ್ಟ್ ಅಧ್ಯಕ್ಷ ಮನೋಹರ್ ಶೆಟ್ಟಿ ಮತ್ತು ಜತೆ ಕಾರ್ಯದರ್ಶಿ ನಾಗರಾಜ್ ಹೆಬ್ಟಾರ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.