ಬೆಂಗಳೂರು: ಇಂದಿನಿಂದ ನಂದಿನಿ ಹಾಲಿನ ದರ ಹೆಚ್ಚಳ ಜಾರಿಗೆ ಬರುತ್ತಿದೆ. ಗ್ರಾಹಕರು ಲೀಟರ್ಗೆ 3 ರೂಪಾಯಿ ಹೆಚ್ಚು ಹಣವನ್ನು ನೀಡಿ ಹಾಲು ಖರೀದಿ ಮಾಡಬೇಕಾಗುತ್ತದೆ. ಆಗಸ್ಟ್ 1ರಿಂದ ಪ್ರತಿ ಲೀಟರ್ಗೆ 3 ರೂಪಾಯಿ ದರ ಹೆಚ್ಚಿಸುವಂತೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ದರ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿತ್ತು.
ಹೈನುಗಾರರು ಮಾಡಿದ ಮನವಿ ಹಿನ್ನೆಲೆಯಲ್ಲಿ ದರ ಹೆಚ್ಚಳ ಮಾಡಲಾಗಿದೆ ಎಂದು ಸರ್ಕಾರ ತನ್ನ ಕ್ರಮವನ್ನು ಸಮರ್ಥನೆ ಮಾಡಿಕೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಮವನ್ನು ಸಮರ್ಥಿಸಿಕೊಂಡರು, ಇತರ ರಾಜ್ಯಗಳು ಗಣನೀಯವಾಗಿ ಹೆಚ್ಚಿನ ದರವನ್ನು ವಿಧಿಸುತ್ತಿರುವಾಗ ಕರ್ನಾಟಕವು ಕಡಿಮೆ ಬೆಲೆಗೆ ಹಾಲು ಮಾರಾಟ ಮಾಡುತ್ತಿದೆ ಎಂದು ಪ್ರತಿಪಾದಿಸಿದರು.
ಹಾಲು ಮಾತ್ರವಲ್ಲದೆ ತುಪ್ಪ, ಪನೀರ್, ಮೊಸರಿನ ಬೆಲೆಯೂ ಏರಿಕೆಯಾಗಿದೆ. ತುಪ್ಪಈ ಹಿಂದೆ ಪ್ರತಿ ಕಿಲೋಗ್ರಾಂಗೆ 550 ರೂ.ಗೆ ಮಾರಾಟವಾಗುತ್ತಿತ್ತು, ಇದೀಗ ಕೆಜಿಗೆ 610 ರೂ ದರದಲ್ಲಿ ಮಾರಾಟವಾಗಲಿದೆ.
ಪ್ರತಿ ಕೆಜಿಗೆ 375 ರೂ.ಗೆ ಸಿಗುತ್ತಿದ್ದ ಪನೀರ್ ಈಗ ಪ್ರತಿ ಕೆಜಿಗೆ 425 ರೂ.
ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, “ನಾವು ರೈತರಿಗೆ ಹಣವನ್ನು ನೀಡಬೇಕಾಗಿದೆ, ಇಂದು ಇಡೀ ದೇಶದಲ್ಲಿ ಹಾಲಿಗೆ ಲೀಟರ್ಗೆ 56 ರೂ ಇದೆ. ನಮ್ಮ ರಾಜ್ಯದಲ್ಲಿ ಜನರು ಕಡಿಮೆ ಬೆಲೆಗೆ ಪಡೆಯುತ್ತಿದ್ದಾರೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.