ನವದೆಹಲಿ: ಸ್ನಾತಕೋತ್ತರ ಪದವಿ ಪಡೆಯಲು ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದ ಭಾರತೀಯ ಮಹಿಳೆಯೊಬ್ಬರು ಚಿಕಾಗೋದ ರಸ್ತೆಯಲ್ಲಿ ದಾರುಣ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹೈದರಾಬಾದ್ಗೆ ಸೇರಿದ ಮಹಿಳೆ ಡೆಟ್ರಾಯಿಟ್ನ ಟ್ರೈನ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಎಂದು ವರದಿಯಾಗಿದೆ. ಆಕೆಯ ತಾಯಿ ಇದೀಗ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರಿಗೆ ಭಾವನಾತ್ಮಕ ಮನವಿ ಮಾಡಿದ್ದು, ಮಧ್ಯಪ್ರವೇಶಿಸಿ ತನ್ನ ಮಗಳನ್ನು ಆದಷ್ಟು ಬೇಗ ಭಾರತಕ್ಕೆ ಕರೆತರುವಂತೆ ಒತ್ತಾಯಿಸಿದ್ದಾರೆ.
ಡೆಟ್ರಾಯಿಟ್ನ TRINE ವಿಶ್ವವಿದ್ಯಾನಿಲಯದಲ್ಲಿ ಮಾಹಿತಿ ವಿಜ್ಞಾನದ ವಿದ್ಯಾರ್ಥಿಯಾಗಿರುವ 37 ವರ್ಷದ ಸೈದಾ ಲುಲು ಮಿನ್ಹಾಜ್ ಜೈದಿ ದಾರುಣ ಸ್ಥಿತಿಯಲ್ಲಿದ್ದಾರೆ ಎಂದು ಗುರುತಿಸಲಾಗಿದ್ದು, ಮಹಿಳೆ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿದೆ, ಅದುವೇ ಅವರ ಪ್ರಸ್ತುತ ಪರಿಸ್ಥಿತಿಗೆ ಕಾರಣವಾಗಿದೆ. ಮಿನ್ಹಾಜ್ ಜೈದಿಯ ತಾಯಿ ಸೈಯದಾ ವಹಾಜ್ ಫಾತಿಮಾ ಅವರ ಪ್ರಕಾರ, ಅವರ ಮಗಳು ಆಗಸ್ಟ್ 2021 ರಲ್ಲಿ ಯುಎಸ್ಗೆ ತೆರಳಿದ್ದಾಳೆ, ಆದರೆ ಅವಳ ಕುಟುಂಬವು ಎರಡು ತಿಂಗಳ ಹಿಂದೆ ಅವಳೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿದೆ.
ತನ್ನ ಮಗಳು ತೀವ್ರ ಖಿನ್ನತೆಯಿಂದ ಬಳಲುತ್ತಿದ್ದಾಳೆ ಮತ್ತು ಆಕೆಯ ಸಾಮಾನುಗಳನ್ನು ಕದ್ದು ಆಕೆಯನ್ನು ಹಸಿವಿನ ಅಂಚಿನಲ್ಲಿ ಬಿಟ್ಟು ಚಿಕಾಗೋದ ಬೀದಿಗಳಲ್ಲಿ ಅಲೆದಾಡುವಂತೆ ಮಾಡಲಾಗಿದೆ ಎಂದು ದುಃಖಿತ ತಾಯಿ ಭಾರತೀಯ ವಿದೇಶಾಂಗ ಸಚಿವರಿಗೆ ಪತ್ರ ಬರೆದಿದ್ದಾರೆ.
ಮಜ್ಲಿಸ್ ಬಚಾವೋ ತೆಹ್ರೀಕ್ (MBT) ನಾಯಕ ಅಮ್ಜೆದುಲ್ಲಾ ಖಾನ್ ಅವರು ಮಿನ್ಹಾಜ್ ಜೈದಿ ಅವರ ಹೃದಯ ವಿದ್ರಾವಕ ವೀಡಿಯೊವನ್ನು ಪತ್ರವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
Syeda Lulu Minhaj Zaidi from Hyd went to persue MS from TRINE University, Detroit was found in a very bad condition in Chicago, her mother appealed @DrSJaishankar to bring back her daughter.@HelplinePBSK @IndiainChicago @IndianEmbassyUS @sushilrTOI @meaMADAD pic.twitter.com/GIhJGaBA7a
— Amjed Ullah Khan MBT (@amjedmbt) July 25, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.