ಮಂಗಳೂರು: ಉಡುಪಿಯ ನೇತ್ರ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಂದೂ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ಶೌಚಾಲಯದಲ್ಲಿ ಕ್ಯಾಮೆರಾವನ್ನು ಇಟ್ಟು ಚಿತ್ರೀಕರಿಸಿದ ಘಟನೆ ತಲ್ಲಣವನ್ನು ಸೃಷ್ಟಿಸಿದೆ. ಆದರೆ ಘಟನೆಯ ಬಗ್ಗೆ ಸೂಕ್ಷ್ಮತೆಯಿಂದ ವರ್ತಿಸಿ ನಿಜವನ್ನು ಹೊರತೆಗೆಯಬೇಕಾಗಿದ್ದ ಪೊಲೀಸ್ ಇಲಾಖೆ ಪ್ರಕರಣದ ಒಳಹೊಕ್ಕು ಸತ್ಯಾಂಶ ಹೊರತೆಗೆಯಲು ಆಸಕ್ತಿ ತೋರಿಸುತ್ತಿಲ್ಲ. ಚಿಕ್ಕ ಚಿಕ್ಕ ವಿಷಯವನ್ನು ವೈಭವೀಕರಿಸುವ ಮುಖ್ಯ ವಾಹಿನಿಯ ಮಾಧ್ಯಮಗಳೂ ಇದನ್ನು ಸಣ್ಣದಾಗಿ ಸುದ್ದಿ ಮಾಡಿ ಸುಮ್ಮನಾಗಿವೆ.
ವಿಡಿಯೋ ಚಿತ್ರೀಕರಿಸಿದ್ದ ವಿದ್ಯಾರ್ಥಿನಿಯರನ್ನು ವಿಚಾರಣೆಗೊಳಪಡಿಸಬೇಕಿದ್ದ ಪೊಲೀಸರು, ಘಟನೆಯನ್ನು ಖಂಡಿಸಿ ಹಿಂದೂ ವಿದ್ಯಾರ್ಥಿನಿಯರ ಪರವಾಗಿ ಟ್ವಿಟ್ ಮಾಡಿದ್ದ ರಶ್ಮಿ ಸಾಮಂತ್ ಎಂಬುವವರನ್ನು ವಿಚಾರಣೆಗೊಳಪಡಿಸುವ ಪ್ರಯತ್ನ ನಡೆಸಿದೆ. ಪೊಲೀಸರು ರಾತೋರಾತ್ರಿ ಸಾಮಂತ್ ಮನೆಗೆ ತೆರಳಿ ಅವರು ಇಲ್ಲದ ಕಾರಣ ಅವರ ತಂದೆ-ತಾಯಿಯರನ್ನು ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ. ಸಾಮಂತ್ ಅವರ ಟ್ವಿಟ್ ಈ ಘಟನೆಯನ್ನು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುವಂತೆ ಮಾಡಿದೆ ಎನ್ನುವ ಕಾರಣಕ್ಕೆ ಪೊಲೀಸರು ಈ ರೀತಿ ವರ್ತಿಸಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ ಅನೇಕ ನೆಟ್ಟಿಗರು ಸಾಮಂತ್ ಪರ ನಿಂತಿದ್ದಾರೆ. ಹೀಗಾಗಿ ಪ್ರಕರಣ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಒಳಗಾಗುತ್ತಿದೆ. ಹೀಗಾಗಿ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.
ಇನ್ನೊಂದೆಡೆ ಘಟನೆಯನ್ನು ಖಂಡಿಸಿ ಟ್ವಿಟ್ ಮಾಡಿರುವ ಹಿಂದೂ ಮಹಿಳೆಯರ ವಿರುದ್ಧ ಆಲ್ಟ್ ನ್ಯೂಸ್ನ ಜುಬೇರ್ ಅಭಿಯಾನ ನಡೆಸಿದ್ದಾನೆ. ಕರ್ನಾಟಕದ ಗೃಹಸಚಿವರು, ಉಪ ಮುಖ್ಯಮಂತ್ರಿಗಳಿಗೆ ಇವರ ಖಂಡನಾ ಟ್ವೀಟ್ ಅನ್ನು ಟ್ಯಾಗ್ ಮಾಡಿ ಕ್ರಮಕೈಗೊಳ್ಳುವಂತೆ ಕೇಳಿಕೊಂಡಿದ್ದಾನೆ. ಈತನ ಟ್ವೀಟ್ ನೋಡಿಯೇ ಪೊಲೀಸರು ರಶ್ಮಿ ಸಾಮಂತ್ ಮನೆಗೆ ಲಗ್ಗೆ ಇಟ್ಟಂತಿದೆ.
ಪೊಲೀಸರ ಕ್ರಮಕ್ಕೆ ರಾಜ್ಯವ್ಯಾಪಿ ಖಂಡನೆಗಳು ವ್ಯಕ್ತವಾಗಿದೆ. ಈ ಬಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೀಂದ್ರ ಅವರು ಹೇಳಿಕೆ ನೀಡಿ, ಹಿಡನ್ ಕ್ಯಾಮರಾ ಮೂಲಕ ವಿಡಿಯೋ ಚಿತ್ರೀಕರಿಸಿದ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ಬ್ಲ್ಯಾಕ್ಮೇಲ್ ಬಗ್ಗೆ ವಿಡಿಯೋ ಹರಿದಾಡಿದ ಬಗ್ಗೆ ಗಮನ ಹರಿಸಿದ್ದೇವೆ. ಬೇರೆ ಬೇರೆ ವಿಡಿಯೋ ಶೇರ್ ಆಗುತ್ತಿದೆ, ವಾಯ್ಸ್ ಎಡಿಟ್ ಮಾಡಲಾಗಿದೆ. ಸತ್ಯಾಸತ್ಯತೆ ಗೊತ್ತಿಲ್ಲದೆ ವಿಡಿಯೋ ಶೇರ್ ಮಾಡಿದ್ರೆ ತಪ್ಪಾಗುತ್ತದೆ. ವೈರಲ್ ಆಗಿರುವ ಬಗ್ಗೆ ಫೇಸ್ ಬುಕ್, ವಾಟ್ಸಾಪ್ ಮೇಲೆ ನಿಗಾ ಇರಿಸಲಾಗಿದೆ. ರಶ್ಮಿ ಸಾವಂತ್ ಹೆಸರಿನಲ್ಲಿ ಟ್ವೀಟ್ ಕುರಿತು ಅಕೌಂಟ್ ಪರಿಶೀಲಿಸಿದ್ದೇವೆ. ಇದೇ ವಿಚಾರದಲ್ಲಿ ಅವರ ಮನೆಯವರ ಬಳಿ ಮಾತನಾಡಿದ್ದೇವೆ ಎಂದಿದ್ದಾರೆ.
We ALL know what that creep @zoo_bear did to unleash violent mobs against @NupurSharmaBJP and @kajal_jaihind. Now he is targeting @RashmiDVS and me for talking about an incident in Udupi that is widely reported in the media. Zubair is clearly a medieval misogynist who hates Hindu… pic.twitter.com/puxEGOOJVE
— Shefali Vaidya. 🇮🇳 (@ShefVaidya) July 25, 2023
Classic @zoo_bear trying to incite mobs against the Hindu women @ShefVaidya like he did to Nupur Sharma. Udupi is my home and I will not be intimidated into silence by the misinformation you peddle in the name of fact-checking. Now I don’t have the time to teach you Kannada. https://t.co/8W4mPqHUhQ pic.twitter.com/LyrWZFEcJC
— Rashmi Samant (@RashmiDVS) July 24, 2023
I just spoke to @RashmiDVS , & she informed me that policemen were sent to her house in Udupi as she raised her voice for the Hindu girls. I am shocked to know that the Congress government is using intimidatory tactics to silence her.
I urge all to stand with her! pic.twitter.com/tWFnsosTT9— Pradeep Bhandari(प्रदीप भंडारी)🇮🇳 (@pradip103) July 24, 2023
The hounding of @RashmiDVS and her parents, questioned repeatedly at night, by the Karnataka Police is unacceptable and borders on intimidation. Besides, the Supreme court has clearly directed that a woman cannot be arrested after sunset.
I stand with Rashmi. And so should you.
— Anand Ranganathan (@ARanganathan72) July 25, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.