ನವದೆಹಲಿ: ಚಲನಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ದಿ ಕಾಶ್ಮೀರ್ ಫೈಲ್ಸ್ ಮತ್ತು ದಿ ತಾಷ್ಕೆಂಟ್ ಫೈಲ್ಸ್ನಂತಹ ಚಲನಚಿತ್ರಗಳನ್ನು ನಿರ್ಮಿಸಿ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ, ಅವರು ಮತ್ತೊಂದು ಯೋಜನೆಯನ್ನು ಪ್ರಕಟಿಸಿದ್ದು, ಇದು 1990 ರ ದಶಕದಲ್ಲಿ ಕಾಶ್ಮೀರದಲ್ಲಿನ ನಿರ್ಗಮನವನ್ನು ಆಧರಿಸಿದ ಡಾಕ್ಯು-ಡ್ರಾಮಾವಾಗಿದ್ದು, ದಿ ಕಾಶ್ಮೀರ್ ಫೈಲ್ಸ್ ಅನ್ರಿಪೋರ್ಟ್ಡ್ ಎಂಬ ಶೀರ್ಷಿಕೆಯನ್ನು ಹೊಂದಿದೆ.
ಈ ವಾರದ ಆರಂಭದಲ್ಲಿ, ಅವರು ತಮ್ಮ ಮುಂಬರುವ ಯೋಜನೆಯ ಟೀಸರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟರು. ಜುಲೈ 21ರಂದು ಮತ್ತೊಂದು ಟ್ವೀಟ್ನಲ್ಲಿ, ಕಾಶ್ಮೀರಿ ಪಂಡಿತರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಅವರು ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಒಬ್ಬ ಮಣಿಪುರ ರಾಜ್ಯದಲ್ಲಿನ ಹಿಂಸಾಚಾರವನ್ನು ಆಧರಿಸಿದ “ʼದಿ ಮಣಿಪುರ ಫೈಲ್ಸ್” ಎಂಬ ಚಲನಚಿತ್ರವನ್ನು ಮಾಡುವಂತೆ ಹೇಳಿದ್ದಾನೆ.
ವಿವೇಕ್ ಅಗ್ನಿಹೋತ್ರಿ ಅವರು, “ಭಾರತೀಯ ನ್ಯಾಯಾಂಗವು ಕಾಶ್ಮೀರಿ ಹಿಂದೂ ನರಮೇಧಕ್ಕೆ ಕುರುಡು ಮತ್ತು ಮೂಕವಾಗಿ ನಿಂತಿದೆ. ನಮ್ಮ ಸಂವಿಧಾನದಲ್ಲಿ ಭರವಸೆ ನೀಡಿದಂತೆ ಕಾಶ್ಮೀರಿ ಹಿಂದೂಗಳ ರೈಟ್ ಟು ಲೈಫ್ ಅನ್ನು ರಕ್ಷಿಸುವಲ್ಲಿ ಅದು ವಿಫಲವಾಗಿದೆ” ಎಂದಿದ್ದಾರೆ.
ಟ್ವೀಟ್ಗೆ ಪ್ರತಿಕ್ರಿಯಿಸಿದ ಬಳಕೆದಾರರೊಬ್ಬರು, “ಸಮಯವನ್ನು ವ್ಯರ್ಥ ಮಾಡಬೇಡಿ ಮತ್ತು ನೀವು ಮನುಷ್ಯರಾಗಿದ್ದರೆ ‘ಮಣಿಪುರ ಫೈಲ್ಸ್’ ಚಲನಚಿತ್ರವನ್ನು ಮಾಡಿ” ಎಂದು ಬರೆದಿದ್ದಾರೆ. ಆದರೆ, ವಿವೇಕ್ ಬಳಕೆದಾರರಿಗೆ ತಕ್ಕ ಉತ್ತರ ನೀಡಿದ್ದಾರೆ. “ನನ್ನ ಮೇಲೆ ತುಂಬಾ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು. ಆದರೆ, ಎಲ್ಲಾ ಚಿತ್ರಗಳನ್ನು ನಾನೇ ಮಾಡಬೇಕೆಂದು ನೀವು ಬಯಸುತ್ತೀರಾ. ನಿಮ್ಮ ಟೀಮ್ ಇಂಡಿಯಾʼದಲ್ಲಿ ಬೇರೆ ಯಾರೂ ಮನುಷ್ಯರು ಇಲ್ಲವೇ?” ಎಂದಿದ್ದಾರೆ.
Thanks for having so much faith in me. Par saari films mujhse hi banwaoge kya yaar? Tumhari ‘Team India’ mein koi ‘man enough’ filmmaker nahin hai kya? https://t.co/35U9FMf32G
— Vivek Ranjan Agnihotri (@vivekagnihotri) July 21, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.