ಆವಿಷ್ಕಾರ ಯೋಗ ಬಿಜೈ ಹಾಗೂ ಲಿಟಿಲ್ ಎಲಿ ಪ್ಲೆ ಸ್ಕೂಲ್ ಅಶೋಕನಗರ ಇದರ ಸಹಯೋಗದಲ್ಲಿ ಬೆಳಿಗ್ಗೆ 6-15 ರಿಂದ 7-30ರ ವರೆಗೆ ಮತ್ತು ಸಂಜೆ 4 ರಿಂದ 8 ರವರೆಗೆ ಲಿಟಿಲ್ ಎಲಿ ಪ್ಲೆ ಸ್ಕೂಲ್ ಅಶೋಕನಗರ & ಚಂದ್ರಲೀಲಾ, ಗಾಂಧಿನಗರ ಕಾವೂರು ಇಲ್ಲಿ ಸೆ 29 ರಿಂದ ಅ03 ರ ವರೆಗೆ ಉಚಿತ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಶಿಬಿರವು ಅಂತರಾಷ್ಟ್ರೀಯ ಯೋಗ ದಿನದ ಆಯುಷ್ ಇಲಾಖೆಯ ಪಠ್ಯಕ್ರಮದ ಕ್ರಿಯೆ, ಯೋಗಾಸನ, ಪ್ರಾಣಾಯಾಮ ವಿಶ್ರಾಂತಿ ಹಾಗೂ ಧ್ಯಾನದ ತರಬೇತಿ ನೀಡಲಾಗುವುದು. ಶಿಬಿರದ ಅವಧಿಯಲ್ಲಿ ಯೋಗ ಚಿಕತ್ಸೆ ಮಾರ್ಗದರ್ಶನ ನೀಡಲಾಗುವುದು. ಶಿಬಿರದ ಅವಧಿಯಲ್ಲಿ ಆರೋಗ್ಯ, ಜೀವನಶೈಲಿ, ಆಹಾರ, ಅಷ್ಟಾಂಗ ಯೋಗ ಹಾಗೂ ಯೋಗ ಚಿಕಿತ್ಸೆಯ ಮಾರ್ಗದರ್ಶನ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
ಯೋಗ ಶಿಬಿರಕ್ಕೆ ಆಸಕ್ತರು ಈ ಕೆಳಗಿನ ವಿಳಾಸ : ಕುಶಾಲಪ್ಪ ಗೌಡ. ಎನ್. ಯೋಗ ಚಿಕಿತ್ಸಕರು, ಆವಿಷ್ಕಾರ ಯೋಗ, ಗುರುಪ್ಲಾಜಾ, ೪ನೇ ಮಹಡಿ, ಬಿಜೈ, ಮಂಗಳೂರು, ಮೊ : 9845588740 ,9591130105 ಲಿಟಿಲ್ ಎಲಿ ಪ್ಲೆ ಸ್ಕೂಲ್, ಡೊಮೆನಿಕ್ ಚರ್ಚ್ ಬಳಿ, ಅಶೋಕನಗರ, ಉರ್ವ, ಮೊ:9343836799
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.