ಇತ್ತೀಚಿಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮ ಮತ್ತು ಕಾಶ್ಮೀರದ ಗಡಿ ಪ್ರದೇಶ ಟೀತ್ವಾಲ್ನಲ್ಲಿ ನಿರ್ಮಾಣವಾಗಿರುವ ಶಾರದಾ ಮಂದಿರವನ್ನು ವರ್ಚುಮಲ್ ಆಗಿ ಉದ್ಘಾಟಿಸಿದರು. ಕಿಶನ್ ಗಂಗಾ ನದಿಯ ಸಮೀಪದಲ್ಲಿ ನಿರ್ಮಾಣವಾಗಿರುವ ಈ ದೇಗುಲ ಭಕ್ತರ ಪಾಲಿಗೆ ಶ್ರದ್ಧೆಯ ಮತ್ತು ಭಾವನಾತ್ಮಕ ಪ್ರತಿಬಿಂಬಿವಾಗಿ ಎದ್ದು ನಿಂತಿದೆ. ಆದರೆ ಈ ದೇಗುಲದ ನಿರ್ಮಾಣಕ್ಕೆ ಪ್ರಮುಖವಾಗಿ ಕಾರಣವಾದವರು “ಸೇವ್ ಶಾರದಾ ಪೀಠ ಸಮಿತಿ” ಸ್ಥಾಪಕ ರವೀಂದ್ರ ಪಂಡಿತ್ ಅವರು. ಶಾರದಾ ದೇವಿಗೆ ತಮ್ಮನ್ನು ಸಮರ್ಪಿಸಿಕೊಂಡು ಸೇವೆ ಮಾಡುತ್ತಿರುವ ಅಪರೂಪದ ವ್ಯಕ್ತಿತ್ವ ಅವರದ್ದು. ದೇಗುಲದ ಅನಾವರಣದ ಮೂಲಕ ರವೀಂದ್ರ ಪಂಡಿತ ಅವರ ಮಿಷನ್ ಶಾರದಾ ಕಾರ್ಯಕ್ಕೆ ಒಂದು ಮಹತ್ವದ ಮೈಲುಗಲ್ಲು ದೊರೆತಿದೆ.
ಶಾರದಾ ಮಿಷನ್ ಮೂಲಕ ತಮ್ಮ ಅವಿರತ ಹೋರಾಟದ ಯಶೋಗಾಥೆಯನ್ನು ಪಂಡಿತ್ ಅವರು ” ಶಾರದಾ ಕ್ವಿಸ್ಟ್ ಫಾರ್ ಶೇರ್ಡ್ ಹೆರಿಟೇಜ್” ಪುಸ್ತಕದಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ಪುಸ್ತಕ ಅವರ ದೃಢಸಂಕಲ್ಪದ ಪ್ರತಿಬಿಂಬವಾಗಿದೆ ಮತ್ತು ದೇವಿ ಶಾರದೆಯ ಭಕ್ತರಿಗೆ ಒಂದು ಪ್ರೇರಣೆಯಾಗಿದೆ. ಎಂಟನೇ ಶತಮಾನದಲ್ಲಿ ಜಗದ್ಗುರು ಆದಿ ಶಂಕರಾಚಾರ್ಯರು ಸ್ಥಾಪಿಸಿದ ಶಾರದಾ ಪೀಠ ಜ್ಞಾನದ ದೇಗುಲವಾಗಿತ್ತು. ಪ್ರಾಚೀನ ಮಹಾಶಕ್ತಿ ಪೀಠಗಳಲ್ಲಿ ಒಂದು. ಆದರೆ ಮತಾಂಧತೆಯ ಕರಿ ನೆರಳಿನಲ್ಲಿ ಭಾರತದ ಅಮೋಘ ಶಕ್ತಿ ಪೀಠವೊಂದು ಅವಸಾನ ಹೊಂದಿತ್ತು. ಆದರೆ ಪಂಡಿತ್ ಅವರ ದೃಢಸಂಕಲ್ಪದ ಫಲವಾಗಿ ಇಂದು ಜಮ್ಮು-ಕಾಶ್ಮೀರದ ಟೀತ್ವಾಲ್ನಲ್ಲಿ ಶಾರದಾ ಪೀಠ ತಲೆ ಎತ್ತಿ ನಿಂತಿದೆ. ಇದು ಪಿಒಕೆಗೆ ತೀರ್ಥಯಾತ್ರೆಯ ಬೇಸ್ ಕ್ಯಾಂಪ್ ಆಗಲಿದೆ.
ಅವರ ಪಯಣದ ಕುರಿತ ವಿಡಿಯೋ ವರದಿ ವೀಕ್ಷಿಸಿ
ಮೂಲ : UNFILTERED with Sakshi
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.