ಬಹುರಾಷ್ಟ್ರೀಯ ಕಂಪನಿಗಳು, ಯುಕೆ ಕಾನ್ಸುಲೇಟ್ಗಳು ಮತ್ತು ಹೈದರಾಬಾದ್ನಲ್ಲಿರುವ ಸರ್ಕಾರೇತರ ಸಂಸ್ಥೆಗಳು (NGOಗಳು) LGBTQ+ ಬ್ಯಾನರ್ನ ಅಡಿಯಲ್ಲಿ ಯುವಜನರಲ್ಲಿ”Woke Culture” ಯನ್ನು ಹೆಚ್ಚೆಚ್ಚು ಹೇರುತ್ತಿವೆ.
ಜೂನ್ನಲ್ಲಿ, ಹಲವಾರು ಯುಎಸ್ ಮೂಲದ MNC ಗಳಾದ Amazon, P&G, ಮತ್ತು ಫ್ಯಾಕ್ಸೆಟ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಸಂವಾದಾತ್ಮಕ ಸೆಷನ್ಗಳಲ್ಲಿ ಭಾಗವಹಿಸಲು ಆಹ್ವಾನಿಸಿದ್ದವು. ಇದರಲ್ಲಿ ಸುಪ್ರೀಂಕೋರ್ಟ್ನಲ್ಲಿ ಸಲಿಂಗಕಾಮಿ ವಿವಾಹಗಳನ್ನು ಕಾನೂನುಬದ್ಧಗೊಳಿಸುವಂತೆ ಪ್ರತಿಪಾದಿಸಿ ಅರ್ಜಿ ಸಲ್ಲಿಸಿರುವ ಸುಪ್ರಿಯೋ ಚಕ್ರವರ್ತಿ ಅವರು ಮುಖ್ಯ ಭಾಷಣಕಾರರಾಗಿದ್ದರು. ಈ ಸೆಷನ್ಗಳು Woke Culture ಸಂಸ್ಕೃತಿಯನ್ನು ಉತ್ತೇಜಿಸಲು ಒಂದು ಸೂಕ್ಷ್ಮವಾದ ಮಾರ್ಗವಾಗಿ ಕಾರ್ಯನಿರ್ವಹಿಸಲು ರೂಪಿಸಲ್ಪಟ್ಟವು, ಸಾಂಪ್ರದಾಯಿಕ ರೂಢಿಗಳಿಂದ ವಿಮುಖರಾಗಿ ವಿಲಕ್ಷಣ ಸಂಸ್ಕೃತಿಯಡೆಗೆ ಸಮಾಜವನ್ನು ಮರುರೂಪಿಸುವ ಉದ್ದೇಶವನ್ನು ಇದು ಹೊಂದಿವೆ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.
ಜೂನ್ 17 ರಂದು, ತೆಲಂಗಾಣ ಮತ್ತು ಆಂಧ್ರಪ್ರದೇಶದ ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ಅವರ ಕಚೇರಿಯು ತನ್ನ ಆವರಣದಲ್ಲಿ Woke Culture ಅನ್ನು ಉತ್ತೇಜಿಸುವ ಕಾರ್ಯಕ್ರಮವನ್ನು ಆಯೋಜಿಸಿತು. ಈ ಸಮಾರಂಭದಲ್ಲಿ ತೆಲಂಗಾಣ ಸರ್ಕಾರದ ಕೈಗಾರಿಕೆಗಳು ಮತ್ತು ವಾಣಿಜ್ಯಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಇಲಾಖೆಗಳ ಪ್ರಧಾನ ಕಾರ್ಯದರ್ಶಿ ಜಯೇಶ್ ರಂಜನ್ ಉಪಸ್ಥಿತರಿದ್ದರು.
ಅಸ್ತಿತ್ವಂ ಫೌಂಡೇಶನ್ ಎಂಬ ಹೈದರಾಬಾದ್ ಮೂಲದ ಎನ್ಜಿಒ ಸಹ LGBTQ+ ಅನ್ನು ಉತ್ತೇಜಿಸುವಲ್ಲಿ ದೊಡ್ಡ ಮಟ್ಟದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅದು ಕ್ವೀರ್ ಆರ್ಟ್ ಸ್ಪರ್ಧೆಯ ಪ್ರದರ್ಶನದಂತಹ ಕಾರ್ಯಕ್ರಮಗಳನ್ನು ನಡೆಸಿದೆ, ಇದರಲ್ಲಿ ಕಲೆ ಮತ್ತು ಕ್ರಿಯಾಶೀಲತೆಯ ಕ್ಷೇತ್ರದ ಪ್ರಮುಖರು ಭಾಗವಹಿಸಿದ್ದಾರೆ. 2022 ರಲ್ಲಿ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪುರಸ್ಕೃತರಾದ ಮಾನಸ ಯೆಂಡ್ಲೂರಿ, ಹೈದರಾಬಾದ್ನಲ್ಲಿರುವ ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನ್ನಲ್ಲಿ ಪತ್ರಿಕಾ ಸಂವಹನದ ಮುಖ್ಯಸ್ಥ ಪದ್ಮಜಾ ಕೋನಿಸೆಟ್ಟಿ ಮತ್ತು ಇನ್ನೂ ಹಲವಾರು ಪ್ರಮುಖ ಭಾಗವಹಿಸಿದ್ದಾರೆ.
ತೆಲಂಗಾಣದ ಮತ್ತೊಬ್ಬ ಪ್ರಭಾವಿ ಕಾರ್ಯಕರ್ತೆ ರಚನಾ ರುದ್ರಬೋಯಿನಾ ಅವರು ತೆಲಂಗಾಣ ರಾಜ್ಯ ತೃತೀಯಲಿಂಗಿ ಕಲ್ಯಾಣ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರುದ್ರಬೋಯಿನಾ ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳೊಂದಿಗೆ ಕೈಜೋಡಿಸಿದ್ದಾರೆ. ಅವರು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (NALSA) ಮತ್ತು ಭಾರತದಲ್ಲಿನ ನ್ಯಾಶನಲ್ ಕೌನ್ಸಿಲ್ ಆಫ್ ಚರ್ಚುಗಳಲ್ಲಿ ಪ್ರಮುಖ ಸದಸ್ಯತ್ವ ಸ್ಥಾನಗಳನ್ನು ಹೊಂದಿದ್ದಾರೆ. ಈ ಸಂಬಂಧಗಳು ಮತ್ತಷ್ಟು ಪ್ರಭಾವವನ್ನು ಒದಗಿಸುತ್ತವೆ ಮತ್ತು Woke Culture ಅನ್ನು ಉತ್ತೇಜಿಸುತ್ತವೆ ಎಂಬುದರಲ್ಲಿ ಅನುಮಾನವೇ ಇಲ್ಲ.
ಆರಂಭದಲ್ಲಿ, ಈ ರೀತಿಯ ಘಟನೆಗಳನ್ನು ಸಾರ್ವಜನಿಕರು ಗಮನಿಸದೇ ಹೋಗಬಹುದು, ಆದರೆ ಇಂತಹ ಕಾರ್ಯಕ್ರಮಗಳು woke culture ಸಂಸ್ಕೃತಿಯನ್ನು ಸಾಮಾನ್ಯಗೊಳಿಸುವ ಕಾರ್ಯಸೂಚಿಯನ್ನು ಹೊಂದಿದೆ. ಈ ಸಿದ್ಧಾಂತವು ಸಮಾಜ ಮತ್ತು ಕುಟುಂಬ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರಬಹುದು ಎಂಬುದು ಸ್ಪಷ್ಟ. ವ್ಯಕ್ತಿಗಳು, ವಿಶೇಷವಾಗಿ ಯುವಕರು, ಇದರತ್ತ ಆಕರ್ಷಿತರಾಗುತ್ತಾರೆ, ನಮ್ಮ ನಂಬಿಕೆಗಳು ಮತ್ತು ದೃಷ್ಟಿಕೋನಗಳನ್ನು ನಿರ್ಲಲ್ಷ್ಯ ಮಾಡಿ ವಿಲಕ್ಷಣವಾದುದಕ್ಕೆ ಆದ್ಯತೆ ನೀಡಲು ಪ್ರಾರಂಭಿಸುತ್ತಾರೆ. ಮುಕ್ತ ಚರ್ಚೆಗಳು, ವಿಮರ್ಶಾತ್ಮಕ ಚಿಂತನೆ ಮತ್ತು ವಿಚಾರಗಳ ಮುಕ್ತ ವಿನಿಮಯವನ್ನು ನಿರ್ಲಕ್ಷ್ಯ ಮಾಡುತ್ತಾರೆ. ನಮ್ಮ ಸಹಜ ಸಂಸ್ಕೃತಿಯೊಂದಿಗೆ ತೊಡಗಿಸಿಕೊಳ್ಳಲು ಉತ್ತೇಜಿಸಿದರೆ, ಈ woke culture ಬಲಿಪಶುಗಳ ನಿರೂಪಣೆಯನ್ನು ಮುಂದಿಡುತ್ತದೆ.ವ್ಯವಸ್ಥಿತ ದಬ್ಬಾಳಿಕೆಯನ್ನು ಮಾಡಲಾಗುತ್ತಿದೆ ಎಂದು ನಂಬುವಂತೆ ಮಾಡುತ್ತದೆ.
As part of #PrideMonth , we hosted an open house discussion on enhancing employment and employability, safeguarding rights and empowerment for the LGBTQ+ community. #PrideMatters pic.twitter.com/DXgNhszFb9
— Gareth Wynn Owen (@UKinHyderabad) June 17, 2023
ಈ woke culture ಸಂಸ್ಕೃತಿಯು “all-or-nothing” ಮನಸ್ಥಿತಿಯನ್ನು ಉತ್ತೇಜಿಸುತ್ತದೆ, ಅಲ್ಲಿ ಅಂಗೀಕರಿಸಲ್ಪಟ್ಟ ನಿರೂಪಣೆಯಿಂದ ಸಣ್ಣ ವಿಚಲನಗಳನ್ನು ಸಹ ಸ್ವೀಕಾರಾರ್ಹವಲ್ಲವೆಂದು ನೋಡುತ್ತದೆ. ಇದು ಯುವ ಪೀಳಿಗೆಯಲ್ಲಿ ಗಂಭೀರ ತೊಂದರೆಗೆ ಕಾರಣವಾಗಬಹುದು.
ಈ ಹಸ್ತಕ್ಷೇಪವನ್ನು “White-man’s burden” ತತ್ವದ ಮುಂದುವರಿಕೆಯಾಗಿ ಕಾಣಬಹುದು. ಈ ತತ್ವದಡಿ ಜಾಗತಿಕ ಘಟಕಗಳು ತಮ್ಮ ಸ್ವಂತ ಮೌಲ್ಯಗಳ ಪ್ರಕಾರ ಸಮಾಜಗಳನ್ನು ನಾಗರಿಕಗೊಳಿಸಲು ಮತ್ತು ಮರುರೂಪಿಸಲು ಪ್ರಯತ್ನಿಸುತ್ತವೆ. ಇದು ಸಾಂಸ್ಕೃತಿಕ ಮೌಲ್ಯಗಳ ಸವೆತ ಮತ್ತು ಸ್ಥಳೀಯ ಜನಸಂಖ್ಯೆಯ ಮೇಲೆ ವಿದೇಶಿ ಸಿದ್ಧಾಂತಗಳನ್ನು ಹೇರುವ ಅಪಾಯವನ್ನು ಹೊಂದಿದೆ.
ಮೂಲ ಲೇಖನ : Arise Bharat
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.