ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಮಂಡಲ ಅಧಿವೇಶನ ಇಂದು ಆರಂಭವಾಗಿದ್ದು, ಜುಲೈ 14ರವರೆಗೆ ನಡೆಯಲಿದೆ. ಇಂದು ಮಧ್ಯಾಹ್ನ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಿದ್ದಾರೆ.
“ಹೊಸ ಸರ್ಕಾರವೊಂದನ್ನು ಆರಿಸುವಾಗ ಜನರ ನಿರೀಕ್ಷೆಗಳೂ ಹೊಸತಾಗಿರುತ್ತವೆ. ಹಳೆಯದಕ್ಕಿಂತ ಭಿನ್ನವಾದ ಮತ್ತು ತಮ್ಮ ಆಶೋತ್ತರಗಳನ್ನು ಪ್ರತಿಬಿಂಬಿಸುವ ಅಡಳಿತವೊಂದನ್ನೇ ಅವರು ನಿರೀಕ್ಷಿಸುತ್ತಿರುತ್ತಾರೆ. ಕಳೆದ 34 ವರ್ಷಗಳಲ್ಲಿ ಯಾರಿಗೂ ನೀಡದ ಬಹುಮತದೊಂದಿಗೆ ಈ ಸರ್ಕಾರವನ್ನು ಜನರು ಆಯ್ಕೆ ಮಾಡಿದ್ದಾರೆ. ಅವರ ನಿರೀಕ್ಷೆ ಹುಸಿಮಾಡದೆ ಇರಲು ಬಸವಣ್ಣನವರ ‘ನುಡಿದಂತೆ ನಡೆಯಬೇಕು’ ಎಂಬುದನ್ನು ಸರಕಾರ ಅಳವಡಿಸಿಕೊಂಡಿದೆ” ಎಂದು ಗೆಹ್ಲೋಟ್ ನೀಡಿದ್ದಾರೆ.
“ಮುಂದಿನ ಐದು ವರ್ಷಗಳಲ್ಲಿ ನನ್ನ ಸರಕಾರವು ಜನಕೇಂದ್ರಿತವಾದ ಆರ್ಥಿಕತೆಗೆ ಒತ್ತು ನೀಡುತ್ತದೆ. ಇದರ ಮೂಲಕ ಸಾಮಾಜಿಕವಾಗಿ ಎಲ್ಲರನ್ನೂ ಒಳಗೊಳ್ಳುವ ಮತ್ತು ಸಾಂಸ್ಕೃತಿಕವಾಗಿ ಚೈತನ್ಯರೂಪಿಯಾದ ಆರ್ಥಿಕ ಶಕ್ತಿಯಾಗಿ ಕರ್ನಾಟಕ ಹೊರ ಹೊಮ್ಮುವಂತೆ ಮಾಡುವುದು ನನ್ನ ಸರ್ಕಾರದ ಗುರಿಯಾಗಿದೆ” ಎಂದು ರಾಜ್ಯಪಾಲರು ಭಾಷಣದಲ್ಲಿ ಹೇಳಿದ್ದಾರೆ.
“ಸಾರ್ವಜನಿಕವಾಗಿ ಸಂವಿಧಾನಬದ್ಧವಾದ, ಶಾಂತಿ ಮತ್ತು ಪ್ರೇಮಭಾವದಿಂದ ಇರಲು ಬೇಕಾದ ಮನೋಭಾವವನ್ನು ಎಲ್ಲರಲ್ಲೂ ತರಲು ನಾವು ಪುಯತ್ನಿಸುತ್ತೇವೆ. ಮುಂದಿನ ಐದು ವರ್ಷಗಳಲ್ಲಿ ಬುದ್ಧ, ಬಸವ, ನಾರಾಯಣಗುರು, ಬಾಬಾಸಾಹೇಬ್ ಅಂಬೇಡ್ಕರ್, ಕುವೆಂಪುರವರಂತಹವರು ಕನಸು ಕಂಡಿದ್ದ ಸಮ ಸಮಾಜ ನಿರ್ಮಾಣ ಮಾಡುವುದಕ್ಕೆ ನಾವು ಪ್ರಾಮಾಣಿಕ ಪುಯತ್ನ ಮಾಡುತ್ತೇವೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.