ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಮುಕ್ತಾಯವಾದ ಬಳಿಕ ಜೋ ಬಿಡೆನ್ ಅವರು ಭಾರತದೊಂದಿಗಿನ ಸಂಬಂಧವನ್ನು ಶ್ಲಾಘಿಸಿದ್ದು, ಉಭಯ ರಾಷ್ಟ್ರಗಳ ನಡುವಿನ ಸ್ನೇಹವು “ವಿಶ್ವದ ಅತ್ಯಂತ ಪರಿಣಾಮಕಾರಿ ಸ್ನೇಹ” ಎಂದು ಬಣ್ಣಿಸಿದ್ದಾರೆ.
ಭಾನುವಾರ ಟ್ವಿಟ್ ಮಾಡಿರುವ ಬಿಡೆನ್, “ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತದ ನಡುವಿನ ಸ್ನೇಹವು ಪ್ರಪಂಚದಲ್ಲೇ ಅತ್ಯಂತ ಪರಿಣಾಮಕಾರಿಯಾಗಿದೆ ಮತ್ತು ಇದು ಹಿಂದೆಂದಿಗಿಂತಲೂ ಬಲವಾದ, ಹತ್ತಿರ ಮತ್ತು ಹೆಚ್ಚು ಕ್ರಿಯಾತ್ಮಕವಾಗಿದೆ” ಎಂದಿದ್ದಾರೆ. ಬಿಡೆನ್ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, ಭಾರತ ಮತ್ತು ಯುಎಸ್ ನಡುವಿನ ಸ್ನೇಹವು ಜಾಗತಿಕ ಒಳಿತಿಗಾಗಿ ಒಂದು ಶಕ್ತಿಯಾಗಿದೆ ಎಂದರು.
“ನಾನು ನಿಮ್ಮ ಮಾತನ್ನು ಒಪ್ಪುತ್ತೇನೆ, ನಮ್ಮ ದೇಶಗಳ ನಡುವಿನ ಸ್ನೇಹವು ಜಾಗತಿಕ ಒಳಿತಿನ ಶಕ್ತಿಯಾಗಿದೆ. ಇದು ಜಗತ್ತನ್ನು ಉತ್ತಮ ಮತ್ತು ಹೆಚ್ಚು ಸಮರ್ಥನೀಯವಾಗಿಸುತ್ತದೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. “ನನ್ನ ಇತ್ತೀಚಿನ ಭೇಟಿ ನಮ್ಮ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುತ್ತದೆ” ಎಂದು ಅವರು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಜೂನ್ 20-25 ರಿಂದ ಯುಎಸ್ ಮತ್ತು ಈಜಿಪ್ಟ್ಗೆ ಭೇಟಿ ನೀಡಿದ್ದಾರೆ. ಅವರು ಜೂನ್ 24 ರಂದು ಯುಎಸ್ ಪ್ರವಾಸವನ್ನು ಮುಗಿಸಿ ಅಲ್ಲಿಂದ ಕೈರೋಗೆ ತೆರಳಿದರು. ತಮ್ಮ ಅಮೇರಿಕಾ ಭೇಟಿಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು ಮತ್ತು ಭಾರತೀಯ ಮತ್ತು ಅಮೆರಿಕದ ಪ್ರಮುಖ ಸಿಇಒಗಳನ್ನು ಭೇಟಿ ಮಾಡಿದರು. ಶ್ವೇತಭವನದಲ್ಲಿ ಅವರಿಗೆ ಔಪಚಾರಿಕ ಸ್ವಾಗತ ಮತ್ತು ಗೌರವ ರಕ್ಷೆಯನ್ನು ನೀಡಲಾಯಿತು.
I fully agree with you, @POTUS @JoeBiden! Friendship between our countries is a force of global good. It will make a planet better and more sustainable. The ground covered in my recent visit will strengthen our bond even more. 🇮🇳 🇺🇸 https://t.co/iEEhBIYG17
— Narendra Modi (@narendramodi) June 25, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.