ನವದೆಹಲಿ: ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯು ಎಂಟು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಭಾನುವಾರ ಟ್ವಿಟ್ ಮಾಡಿರುವ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರ, ಸ್ಮಾರ್ಟ್ ಸಿಟಿ ಮಿಷನ್ ಅನ್ನು ಶ್ಲಾಘಿಸಿದರು ಮತ್ತು ಇದು ಎಂಟು ವರ್ಷಗಳನ್ನು ಪೂರೈಸಿದಕ್ಕೆ ಹರ್ಷ ವ್ಯಕ್ತಪಡಿಸಿದರು.
ಟ್ವೀಟ್ನಲ್ಲಿ ಸಚಿವರು ಜನರನ್ನು ಅಭಿನಂದಿಸಿದ್ದಾರೆ ಮತ್ತು ಪ್ರಧಾನ ಮಂತ್ರಿಗಳ ಹೆಗ್ಗುರುತು ಯೋಜನೆಯು ಒಂದು ಪ್ರಮುಖ ನಗರ ವಲಯದ ಮಿಷನ್ ಆಗಿದ್ದು, ಒಟ್ಟು ಯೋಜನಾ ಗಾತ್ರ 1,80,000 ಕೋಟಿ ರೂ. ಆಗಿದೆ ಎಂದರು.
5800 ಕ್ಕೂ ಹೆಚ್ಚು ಪೂರ್ಣಗೊಂಡ ಯೋಜನೆಗಳು ನಗರ ಪ್ರದೇಶಗಳನ್ನು ಪರಿವರ್ತಿಸಿವೆ ಮತ್ತು ದೇಶದ ನಾಗರಿಕರ ಬದುಕನ್ನು ಸುಲಭವಾಗಿಸಿದೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 25, 2015 ರಂದು ಸ್ಮಾರ್ಟ್ ಸಿಟಿ ಮಿಷನ್ ಅನ್ನು ಪ್ರಾರಂಭಿಸಿದರು.
ಸ್ಮಾರ್ಟ್ ಸಿಟೀಸ್ ಮಿಷನ್ನ ಉದ್ದೇಶವು ಪ್ರಮುಖ ಮೂಲಸೌಕರ್ಯಗಳನ್ನು ಒದಗಿಸುವ ನಗರಗಳನ್ನು ಉತ್ತೇಜಿಸುವುದು ಮತ್ತು ‘ಸ್ಮಾರ್ಟ್’ ಪರಿಹಾರಗಳ ಅನ್ವಯದ ಮೂಲಕ ಸ್ವಚ್ಛ ಮತ್ತು ಸುಸ್ಥಿರ ಪರಿಸರದೊಂದಿಗೆ ಅದರ ನಾಗರಿಕರಿಗೆ ಯೋಗ್ಯ ಗುಣಮಟ್ಟದ ಜೀವನವನ್ನು ನೀಡುವುದಾಗಿದೆ.
On this day in 2015, PM @narendramodi launched the Smart Cities Mission.
Here's how India transformed massively within nine years: @PMOIndia @SmartCities_HUA @MoHUA_India pic.twitter.com/LJi1tOgwtY
— DD News (@DDNewslive) June 25, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.