ನವದೆಹಲಿ: ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಬುಧವಾರ ಕಾನೂನು ಆಯೋಗವು ಏಕರೂಪ ನಾಗರಿಕ ಸಂಹಿತೆಯನ್ನು(ಯುಸಿಸಿ) ಪರಿಶೀಲಿಸಲು ಸಾರ್ವಜನಿಕರು ಮತ್ತು ಮಾನ್ಯತೆ ಪಡೆದ ಧಾರ್ಮಿಕ ಸಂಸ್ಥೆಗಳ ಅಭಿಪ್ರಾಯಗಳನ್ನು ಕೇಳಿದೆ.
ಅಭಿಪ್ರಾಯಗಳನ್ನು ತಿಳಿಸಲು ಆಯೋಗವು 30 ದಿನಗಳ ಕಾಲಾವಕಾಶ ನೀಡಿದೆ. ಇ-ಮೇಲ್ ಮೂಲಕ ಅಭಿಪ್ರಾಯ ತಿಳಿಸಬಹುದಾಗಿದೆ. ಆಸಕ್ತಿಯುಳ್ಳವರು ಅಭಿಪ್ರಾಯ ನೀಡುವಂತೆ ಕಾನೂನು ಆಯೋಗ ಪ್ರಕಟಣೆ ಮೂಲಕ ತಿಳಿಸಿದೆ.
Delhi | The expert committee on Uniform Civil Code, Uttarakhand held a public dialogue today.
The 22nd Law Commission of India has decided again to solicit views and ideas of the public at large and recognized religious organizations about the Uniform Civil Code. pic.twitter.com/gqNtIxaMYC
— ANI (@ANI) June 14, 2023
ಏಕರೂಪ ನಾಗರಿಕ ಸಂಹಿತೆಗೆ ಪರ-ವಿರೋಧಗಳು ಇರುವ ಕಾರಣ 21ನೇ ಕಾನೂನು ಆಯೋಗವು ಸಮಸ್ಯೆ ಪರಿಶೀಲಿಸಿತ್ತು. ಏಕರೂಪ ನಾಗರಿಕ ಸಂಹಿತೆಯ ರಾಜಕೀಯವಾಗಿ ಸೂಕ್ಷ್ಮ ವಿಷಯವಾದ್ದರಿಂದ ಮಧ್ಯಸ್ಥಗಾರರ ಅಭಿಪ್ರಾಯಗಳನ್ನು ಕೇಳಿತ್ತು. ಅದರ ಅಧಿಕಾರಾವಧಿಯು ಆಗಸ್ಟ್ 2018ರಲ್ಲಿ ಕೊನೆಗೊಂಡಿತು. ಮತ್ತೆ 2018ರಲ್ಲಿ ‘ಕುಟುಂಬ ಕಾನೂನಿಗೆ ಸುಧಾರಣೆಗಳು’ ಕುರಿತು ಸಮಾಲೋಚನಾ ಪತ್ರವನ್ನು ಬಿಡುಗಡೆ ಮಾಡಲಾಯಿತು.
22ನೇ ಕಾನೂನು ಆಯೋಗಕ್ಕೆ ಇತ್ತೀಚೆಗೆ ಮೂರು ವರ್ಷಗಳ ವಿಸ್ತರಣೆಯನ್ನು ನೀಡಲಾಗಿದೆ. ಇದು ಕಾನೂನು ಮತ್ತು ನ್ಯಾಯ ಸಚಿವಾಲಯದ ಸಂವಹನದ ನಂತರ ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಲು ಪ್ರಾರಂಭಿಸಿದೆ. ಅದರಂತೆ 22ನೇ ಕಾನೂನು ಆಯೋಗವು ಮತ್ತೊಮ್ಮೆ ಏಕರೂಪ ನಾಗರಿಕ ಸಂಹಿತೆ ಕುರಿತು ಜನ ಮತ್ತು ಮಾನ್ಯತೆ ಪಡೆದ ಧಾರ್ಮಿಕ ಸಂಸ್ಥೆಗಳ ಅಭಿಪ್ರಾಯಗಳನ್ನು ಪಡೆಯಲು ನಿರ್ಧರಿಸಿದೆ.
ಏಕರೂಪ ನಾಗರಿಕ ಸಂಹಿತೆ ಮೂಲಭೂತವಾಗಿ ಎಲ್ಲಾ ನಾಗರಿಕರಿಗೆ ಜಾತಿ, ಧರ್ಮವನ್ನು ಗಣನೆಗೆ ತೆಗೆದುಕೊಳ್ಳದೆ ಸಮಾನವಾದ ಮದುವೆ, ವಿಚ್ಛೇದನ, ದತ್ತು, ಉತ್ತರಾಧಿಕಾರದಂತಹ ವೈಯಕ್ತಿಕ ಕಾನೂನುಗಳನ್ನು ಒದಗಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.