ಬೆಂಗಳೂರು : ಸೊಷಿಯಲ್ ಮಿಡಿಯಾದಲ್ಲಿ ಪೋಸ್ಟೊಂದು ವೈರಲ್ ಆಗಿದೆ. ಮಾನ್ಯ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗೇ ಪುಸ್ತಕವೊಂದನ್ನು ಬರೆದು, ಅದರ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಂಡಿದ್ದಾರೆ ಎಂಬ ಪೋಸ್ಟರ್ ಅದು. ಪುಸ್ತಕದ ಟೈಟಲ್ ‘ಬಿಟ್ಟಿ ಭಾಗ್ಯಕ್ಕೆ ದಿನಕ್ಕೊಂದು ಕಂಡಿಷನ್ಗಳು’ ಅಂತ.
ಚುನಾವಣೆಗೆ ಮುನ್ನ ಕಾಂಗ್ರೆಸ್ ಗ್ಯಾರಂಟಿ ಅಂತ ಬಿಟ್ಟಿ ಭಾಗ್ಯಗಳನ್ನು ಘೋಷಿಸಿದ ಸರ್ಕಾರ, ಅದರ ಆಧಾರದ ಮೇಲೆ ಬಹುಮತ ಪಡೆದು ಅಧಿಕಾರಕ್ಕೆ ಬಂದಿದೆ. ತಾವು ಅಧಿಕಾರಕ್ಕೆ ಬರಲ್ಲ ಎನ್ನುವ ಭರವಸೆಯ ಮೇಲೆ ಸಿಕ್ಕ-ಸಿಕ್ಕ ಭಾಗ್ಯಗಳನ್ನೆಲ್ಲ ಘೋಷಣೆ ಮಾಡಿ, ಈಗ ಸರ್ಕಾರ ಕಾದ ಕಾವಲಿಯ ಮೇಲೆ ಕೂತಿದೆ ಅಂದರೆ ತಪ್ಪಾಗಲಾರದು. ಚುನಾವಣೆಗೆ ಮುನ್ನ ‘ನಿಂಗೂ ಫ್ರೀ, ನಂಗೂ ಫ್ರೀ, ಏಯ್! ಮಹಾಲಿಂಗಪ್ಪ ನಿಂಗೂ ಫ್ರೀ’ ಅಂದ ಸಿದ್ದರಾಮಯ್ಯನವರು ಈಗ ದಿನಕ್ಕೊಂದರಂತೆ ಭಾಗ್ಯಗಳ ಮೇಲೆ ಕಂಡಿಷನ್ ಅಪ್ಲೈ ಆಗತ್ತೆ ಅಂತಿದ್ದಾರೆ. ಮನೆಯೊಡತಿಗೆ 2000 ರೂಪಾಯಿ ಅಂದವರು, ಅಧಿಕಾರಕ್ಕೆ ಬಂದ ಮರುದಿನ ಅತ್ತೆ-ಸೊಸೆ ಇಬ್ಬರಿಗೂ ಇಲ್ಲ ಅಂದ್ರು. ಮೊನ್ನೆ ಗಂಡ ತೆರಿಗೆ ಪಾವತಿ ಮಾಡಿದರೆ ದುಡ್ಡು ಕೊಡಲ್ಲ ಅಂದ್ರು, ನಿನ್ನೆ ಮಗ ತೆರಿಗೆ ಪಾವತಿ ಮಾಡ್ತಿದ್ರೆ ಕೊಡಲ್ಲ ಅಂದ್ರು. ಹೀಗೆ ಅವರ ಕಂಡಿಷನ್ ಮುಗಿತನೇ ಇಲ್ಲ.
ಇದರಿಂದ ಬೇಸತ್ತವರು ಈ ಪೋಸ್ಟರ್ ಅನ್ನ ವೈರಲ್ ಮಾಡಿದ್ದಾರೆ ಅನ್ನೋದು ಅಭಿಪ್ರಾಯ. ಆದರೆ ಗಮನಿಸಬೇಕಾದ ಅಂಶ ಅತಿಥಿಗಳು ಡಿ.ಕೆ ಶಿವಕುಮಾರ್ ಮತ್ತು 40 ಮಂದಿ ಇತರರು ಅಂತಿದೆ. ಅಂದ್ರೆ ಇದು ಆಲಿಬಾಬ ಮತ್ತು 40 ಮಂದಿ ಕಳ್ಳರು ಅಂತ ನಾವೆಲ್ಲ ಚಿಕ್ಕಂದಿನಲ್ಲಿ ಓದುತ್ತೇವಲ್ಲ, ಅದರ ಕಲ್ಪನೆಯಾ!?
ಈ ಬಿಟ್ಟಿಭಾಗ್ಯಗಳನ್ನು ನಂಬಿಕೊಂಡು ಮತಹಾಕಿದ ನಾವು ಕೋಡಂಗಿಗಳಾದ್ವಿ ಅನ್ನೋ ನೋವಿನಲ್ಲಿಯೇ ಸಿದ್ದರಾಮಯ್ಯನ ಅಭಿಮಾನಿಯೊಬ್ಬ ಇದನ್ನು ಮಾಡಿರೋ ಸಾಧ್ಯತೆ ಕೂಡ ಇದೆ. ಸಿದ್ದರಾಮಯ್ಯನವರು ಕಳೆದ ಬಾರಿ ಅಧಿಕಾರಕ್ಕೆ ಬಂದಾಗ ಪಿಎಫ್ಐನ ಕೊಲೆಗಡುಕರ ಮೇಲಿದ್ದ 150ಕ್ಕೂ ಹೆಚ್ಚು ಕೇಸುಗಳನ್ನು ಖುಲಾಸ್ ಮಾಡಿಸಿದ್ರು. ಆ ನೋವು ಸದಾ ಇದ್ದೇ ಇದೆ. ಅವರು ತಾವು ಅಲ್ಪಸಂಖ್ಯಾತರ ಪರ ಅನ್ನೋದನ್ನ ತೋರಿಸಿಕೊಳ್ಳುವ ಎಲ್ಲ ಪ್ರಯತ್ನ ಮಾಡುತ್ತಲೇ ಇರ್ತಾರೆ. ಅದಕ್ಕಾಗಿ ಅಲ್ಪಸಂಖ್ಯಾತರ ಭವನದಲ್ಲೇ ಕಾರ್ಯಕ್ರಮ ಮಾಡ್ತಿರೋದು ಅನ್ನೋ ಅರ್ಥ ಇರಬಹುದಾ!
ಕೊನೆಗೆ, ಸರ್ಕಾರ ಬಂದ ಮರುದಿನವೇ ಶಿಕ್ಷಕರೊಬ್ಬರು ಪೋಸ್ಟ್ ಹಾಕಿದ್ರು ಎನ್ನುವ ಕಾರಣಕ್ಕೆ ಅಮಾನತು ಮಾಡಿದ್ದು, ಸಿದ್ರಾಮುಲ್ಲಾಖಾನ್ ಎಂದಿದ್ದಕ್ಕೆ ಬೀದಿಯಲ್ಲಿ ನಿಲ್ಲಿಸಿ ಹೊಡೆದದ್ದು, ಮೈಸೂರಲ್ಲಿ ಆಯೋಜನೆಗೊಂಡಿದ್ದ ಸಾವರ್ಕರ್ ಕಾರ್ಯಕ್ರಮವನ್ನು ರದ್ದುಗೊಳಿಸೋಕೆ ಶತಪ್ರಯತ್ನ ಮಾಡಿದ್ದು, ಸರ್ಕಾರದ ವಿರುದ್ಧ ಮಾತಾಡಿದ್ರೆ ಜೈಲಿಗೆ ಹಾಕ್ತಿನಿ ಅಂದದ್ದೆಲ್ಲವೂ ತಮ್ಮ ವಿರುದ್ಧ ದನಿಯೇ ಇರಬಾರದೆಂಬ ಕಾರಣಕ್ಕೆ. ಅಂದರೆ ಥೇಟು ಹಿಟ್ಲರ್ನಂತೆ ಈ ಸರ್ಕಾರ ದಬ್ಬಾಳಿಕೆ ಮಾಡ್ತಿದೆ. ಹಾಗಾಗಿ ಹಿಟ್ಲರ್ ಸರ್ಕಾರ ಪ್ರಕಾಶನದಿಂದ ಪುಸ್ತಕ ಹೊರಬಂದಿದೆ ಎನ್ನುವ ಅಭಿಪ್ರಾಯ.
ವೈರಲ್ ಆಗಿರುವ ಈ ಪೋಸ್ಟರ್ ಬಿಟ್ಟಿಭಾಗ್ಯವನ್ನು ನಂಬಿಕೊಂಡು ವೋಟು ಹಾಕಿದ ಜನಸಾಮಾನ್ಯರ ಮಾತನ್ನು ಪ್ರತಿಧ್ವನಿಸುತ್ತಿದೆ.
ಇದೇ ರೀತಿ ಬಿಜೆಪಿ ಕರ್ನಾಟಕ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಜನಾಭಿಪ್ರಾಯಗಳನ್ನು ಹಂಚಿಕೊಂಡು ರಾಜ್ಯದಲ್ಲಿ ಗ್ಯಾರಂಟಿ ಭಾಗ್ಯಗಳ ಬಗ್ಗೆ ಜನರು ಆಕ್ರೋಶವನ್ನು ಮತ್ತು ನಿರಾಸೆಯನ್ನು ವ್ಯಕ್ತಪಡಿಸುತ್ತಿರುವುದನ್ನು ಟ್ವೀಟ್ ಮುಖಾಂತರ ಹಂಚಿಕೊಂಡಿದೆ.
#ConditionsApplyGovt ನ ಮಾನ್ಯ @siddaramaiah ಹಾಗೂ @DKShivakumar ಅವರೇ, ನೀವು ನಿಮ್ಮ ಕಿವಿ ಮೇಲೆ ಹೂ ಇಟ್ಟುಕೊಂಡರೆ ಅದು ನಿಮ್ಮ ಪ್ರಾರಬ್ಧ!
ಆದರೆ ಜನರ ಕಿವಿ ಮೇಲೆ, ರಾಜ್ಯದ ಮಹಿಳೆಯರ ಕಿವಿ ಮೇಲೆ ಹೂ ಇಟ್ಟರೆ ಜನಾಕ್ರೋಶ ಎದುರಿಸಬೇಕಾಗುತ್ತದೆ. ಎಚ್ಚರವಿರಲಿ! pic.twitter.com/R0ZS7m2qV3
— BJP Karnataka (@BJP4Karnataka) June 8, 2023
ಗ್ಯಾರಂಟಿ ಎಂದು ವಿಶ್ವಾಸ ಮೂಡಿಸಿ ಗೆದ್ದು ಬಂದು #ConditionsApplyGovt ಬಗೆದಿರುವ ವಿಶ್ವಾಸದ್ರೋಹ ಬಗ್ಗೆ ಜನರ ಆಕ್ರೋಶದ ಮಾತು ಕೇಳಿ!
ಹತ್ತಿದ ಏಣಿಯನ್ನು ಈಗಾಗಲೇ ತುಳಿದಿರುವ @siddaramaiah ಮತ್ತು @DKShivakumar ಅವರಿಗೆ ಈ ಮಾತುಗಳು ಈಗ ಕೇಳಿಸುವುದು ಕಷ್ಟ.
ಆದರೆ, ಕಪಟನಿದ್ರೆಯ ನಾಟಕವಾಡುತ್ತಿರುವ ಅವರುಗಳನ್ನು ಅತಿಶೀಘ್ರದಲ್ಲಿಯೇ… pic.twitter.com/r7Y8pBLr52
— BJP Karnataka (@BJP4Karnataka) June 9, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.