ನವದೆಹಲಿ: ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರ ನೇತೃತ್ವದಲ್ಲಿ ಗುರುವಾರ ನವದೆಹಲಿಯಲ್ಲಿ 100ನೇ ಮಿಷನ್ ಒಲಿಂಪಿಕ್ ಸೆಲ್ (ಎಂಒಸಿ) ಸಭೆ ನಡೆದಿದ್ದು, ಈ ವೇಳೆ ಮುಂಬರುವ ಏಷ್ಯನ್ ಗೇಮ್ಸ್ಗೆ ಭಾರತದ ಸಿದ್ಧತೆಯನ್ನು ಪರಿಶೀಲಿಸಲಾಗಿದೆ. ದೆಹಲಿಯ ಡಾ.ಕರ್ಣಿ ಸಿಂಗ್ ಶೂಟಿಂಗ್ ರೇಂಜ್ನಲ್ಲಿ ನಡೆಯುತ್ತಿರುವ ಎರಡು ದಿನಗಳ ಎಂಒಸಿ ಸಭೆಯ ಭಾಗವಾಗಿ ಪರಿಶೀಲನಾ ಸಭೆ ನಡೆಯಿತು.
ಸಭೆಯಲ್ಲಿ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ನ ಜಂಟಿ ಕಾರ್ಯದರ್ಶಿ ಕಲ್ಯಾಣ್ ಚೌಬೆ ಮತ್ತು ಎಎಫ್ಐ ಅಧ್ಯಕ್ಷ ಆದಿಲ್ಲೆ ಸುಮ್ಮರಿವಾಲಾ ಉಪಸ್ಥಿತರಿದ್ದರು. ಗಗನ್ ನಾರಂಗ್, ಅಂಜು ಬಾಬಿ ಜಾರ್ಜ್, ವೀರೆನ್ ರಸ್ಕ್ವಿನ್ಹಾ, ತೃಪ್ತಿ ಮುರ್ಗುಂಡೆ, ಮೊನಾಲಿಸಾ ಮೆಹ್ತಾ ಮತ್ತು ಬೈಚುಂಗ್ ಭುಟಿಯಾ ಸೇರಿದಂತೆ ಎಂಒಸಿಯ ಭಾಗವಾಗಿರುವ ವಿವಿಧ ಖ್ಯಾತ ಕ್ರೀಡಾಪಟುಗಳು ಸಭೆಯಲ್ಲಿ ಭಾಗವಹಿಸಿದ್ದರು.
ಏಷ್ಯನ್ ಗೇಮ್ಸ್ 2022 ಈ ವರ್ಷ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8 ರವರೆಗೆ ಚೀನಾದ ಹ್ಯಾಂಗ್ಝೌನಲ್ಲಿ ನಡೆಯಲಿದೆ.
ಟ್ವೀಟ್ನಲ್ಲಿ ಅನುರಾಗ್ ಸಿಂಗ್ ಠಾಕೂರ್, ಭಾರತವನ್ನು ಕ್ರೀಡಾ ಸೂಪರ್ ಪವರ್ ಮಾಡುವ ಪ್ರಯಾಣದಲ್ಲಿ ತನ್ನ ಕ್ರೀಡಾಪಟುಗಳನ್ನು ಬೆಂಬಲಿಸಲು ಸರ್ಕಾರವು ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಹೇಳಿದ್ದಾರೆ.
Chaired the landmark 100th Mission Olympic Cell (MOC) meeting, a flagship program of @YASMinistry, Government of India today.
Reviewed 🇮🇳's preparation for the upcoming #AsianGames2022 with esteemed MOC members and representatives from MYAS, SAI, and NSFs, including @Adille1… pic.twitter.com/y74u9oDGNJ
— Anurag Thakur (@ianuragthakur) June 8, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.