ಜಮ್ಮು: ಬಾರ್ಡರ್ ರೋಡ್ ಆರ್ಗನೈಸೇಶನ್ (BRO) ಅಮರನಾಥ ಯಾತ್ರಾ ಮಾರ್ಗದ ಪುನಃಸ್ಥಾಪನೆ ಕಾರ್ಯವನ್ನು ಈ ತಿಂಗಳ 15 ರೊಳಗೆ ಪೂರ್ಣಗೊಳಿಸಲಿದೆ.
ರಕ್ಷಣಾ ಸಚಿವಾಲಯದ ಪ್ರಕಾರ, ಕೆಲಸದ ವ್ಯಾಪ್ತಿಯು ಹಿಮ ತೆರವು, ಮಾರ್ಗ ಅಗಲೀಕರಣ, ಎಲ್ಲಾ ಕಾಲು ಸೇತುವೆಗಳ ಮರುಸ್ಥಾಪನೆ, ಹ್ಯಾಂಡ್ ರೈಲ್ಗಳ ಫಿಕ್ಸಿಂಗ್ ಮತ್ತು ಬ್ರೇಕ್ ವಾಲ್ಗಳ ನಿರ್ಮಾಣವನ್ನು ಒಳಗೊಂಡಿರುತ್ತದೆ. ಈ ವರ್ಷ ಜುಲೈ 1 ರಂದು ಅಮರನಾಥ ಯಾತ್ರೆ ಆರಂಭವಾಗಲಿದೆ.
ಈ ಮೊದಲಿ ಬಾಲ್ಟಾಲ್ನಿಂದ ಪವಿತ್ರ ಗುಹೆಯವರೆಗಿನ ಯಾತ್ರಾ ಟ್ರ್ಯಾಕ್ ಅನ್ನು ಲೋಕೋಪಯೋಗಿ ಇಲಾಖೆ, ಜಮ್ಮು ಮತ್ತು ಕಾಶ್ಮೀರ ಮತ್ತು ಚಂದನ್ವಾರಿಯಿಂದ ಪವಿತ್ರ ಗುಹೆಯವರೆಗಿನ ಮಾರ್ಗವನ್ನು ಪಹಲ್ಗಾಮ್ ಅಭಿವೃದ್ಧಿ ಪ್ರಾಧಿಕಾರವು ನಿರ್ವಹಿಸುತ್ತಿತ್ತು. ಟ್ರ್ಯಾಕ್ಗಳನ್ನು ನಿರ್ವಹಣೆ ಮತ್ತು ಉನ್ನತೀಕರಣಕ್ಕಾಗಿ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಬಿಆರ್ಒಗೆ ಹಸ್ತಾಂತರಿಸಲಾಯಿತು.
ಬಿಆರ್ಓ ಗಡಿ ಪ್ರದೇಶಗಳಲ್ಲಿ ಅತ್ಯಂತ ವೇಗದ ಗತಿಯಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದಕ್ಕಾಗಿ ಅದು ಸದಾ ಶ್ಲಾಘನೆಗಳನ್ನು ಪಡೆಯುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.