ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷಕ್ಕೆ ಮುಜುಗರ ಉಂಟು ಮಾಡಿರುವ ಮಹತ್ವದ ಬೆಳವಣಿಗೆಯೊಂದರಲ್ಲಿ ಜಾರಿ ನಿರ್ದೇಶನಾಲಯವು (ಇಡಿ) ಎಮ್/ಎಸ್ ಉದಯನಿಧಿ ಸ್ಟಾಲಿನ್ ಫೌಂಡೇಶನ್ ಬ್ಯಾಂಕ್ ಖಾತೆಯ ರೂ 34.7 ಲಕ್ಷ ಮೊತ್ತದ ಹಣವನ್ನು ಜಪ್ತಿ ಮಾಡಿದೆ. ಫೌಂಡೇಶನ್ ಒಟ್ಟು 1 ಕೋಟಿ ರೂಪಾಯಿ ಅಪರಾಧದ ಆದಾಯವನ್ನು ಪಡೆದಿದೆ ಎಂದು ಇಡಿ ಆರೋಪಿಸಿದೆ. ಈ ಫೌಂಡೇಶನ್ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಅವರ ಪುತ್ರ ಉದಯನಿಧಿ ಸ್ಟಾಲಿನ್ಗೆ ಸಂಬಂಧಿಸಿದೆ ಎಂಬುದು ಗಮನಿಸಬೇಕಾದ ಸಂಗತಿ. ಉದಯನಿಧಿ ಸ್ಟಾಲಿನ್ ಅವರು ಕ್ರೀಡಾ ಸಚಿವರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ವಿವಿಧ ಸೆಕ್ಷನ್ ಅಡಿಯಲ್ಲಿ ಕಲ್ಲಾಲ್ ಗ್ರೂಪ್, ಯುಕೆ ಮೂಲದ ಲೈಕಾ ಗ್ರೂಪ್ ಮತ್ತು ಅದರ ಭಾರತೀಯ ಕಂಪನಿಗಳಾದ ಲೈಕಾ ಪ್ರೊಡಕ್ಷನ್ಸ್ ಮತ್ತು ಲೈಕಾ ಹೋಟೆಲ್ಗಳ ವಿರುದ್ಧ ತನಿಖೆ ನಡೆಸಲಾಗುತ್ತಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ಲೈಕಾ ಪ್ರೊಡಕ್ಷನ್ಸ್ ತಮಿಳು ಮತ್ತು ಹಿಂದಿ ಚಲನಚಿತ್ರಗಳ ನಿರ್ಮಾಣ ಮತ್ತು ವಿತರಣೆಯಲ್ಲಿ ತೊಡಗಿರುವ ಮನರಂಜನಾ ಕಂಪನಿಯಾಗಿದೆ ಮತ್ತು ಇದು ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ 1 ಮತ್ತು ಪೊನ್ನಿಯಿನ್ ಸೆಲ್ವನ್: II ಚಿತ್ರಗಳಿಂದಾಗಿ ಸುದ್ದಿಯಲ್ಲಿತ್ತು.
ಏಪ್ರಿಲ್ ಮತ್ತು ಈ ತಿಂಗಳ ಆರಂಭದಲ್ಲಿ ಎರಡು ಸಂಸ್ಥೆಗಳಲ್ಲಿ ಇಡಿ ಶೋಧ ಕಾರ್ಯಾಚರಣೆ ನಡೆಸಿತ್ತು. ಚೆನ್ನೈನ ಸೆಂಟ್ರಲ್ ಕ್ರೈಮ್ ನಿಂದ ದಾಖಲಿಸಲಾದ ಎಫ್ ಐಆರ್ ಆಧಾರದ ಮೇಲೆ ತನಿಖೆ ನಡೆಸಲಾಗುತಿತ್ತು. ಕಲ್ಲಾಲ್ ಗ್ರೂಪ್ ಮತ್ತು ಅದರ ನಿರ್ದೇಶಕರು, ಸಂಸ್ಥಾಪಕರಾದ ಸರವಣನ್ ಪಳನಿಯಪ್ಪನ್, ವಿಜಯಕುಮಾರನ್, ಅರವಿಂತ್ ರಾಜ್ ಮತ್ತು ವಿಜಯ್ ಅನಂತ್ ಅವರು 114.37 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ದೂರುದಾರ ಪೆಟ್ಟಿಗೋ ಕಮರ್ಷಿಯೋ ಇಂಟರ್ ನ್ಯಾಷನಲ್ ಎಲ್ಡಿಎ ನಿರ್ದೇಶಕ ಗೌರವ್ ಚರ್ಚಾ ಆರೋಪಿದ್ದರು ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.
ತನಿಖೆಯಡಿ ಮೇ 25 ರಂದು ಇಡಿ ತಮಿಳುನಾಡಿನಾದ್ಯಂತ 36.3 ಕೋಟಿ ರೂಪಾಯಿ ಮೌಲ್ಯದ ವಿವಿಧ ಸ್ಥಿರಾಸ್ತಿ ಮತ್ತು ಉದಯನಿಧಿ ಸ್ಟಾಲಿನ್ ಫೌಂಡೇಶನ್ ಅವರ ಬ್ಯಾಂಕ್ ಖಾತೆಯಲ್ಲಿ ಲಭ್ಯವಿದ್ದ 34.7 ಲಕ್ಷ ರೂಪಾಯಿ ಜಪ್ತಿ ಮಾಡಲಾಗಿದೆ ಎಂದು ತನಿಖಾ ಏಜೆನ್ಸಿ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.