ಶ್ರೀನಗರ: ಸೋಮವಾರ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಜಿ20 ವರ್ಕಿಂಗ್ ಗ್ರೂಪ್ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಭದ್ರತಾ ವ್ಯವಸ್ಥೆಯನ್ನು ಕಲ್ಪಸಲಾಗಿದೆ. ಭೂಮಿಯಿಂದ ಹಿಡಿದು ಆಗಸದವರೆಗೆ ಭದ್ರತಾ ವ್ಯಾಪ್ತಿ ಹರಡಿದ್ದು, ಮೆರೈನ್ ಕಮಾಂಡೋಗಳು ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿಯನ್ನು (ಎನ್ಎಸ್ಜಿ) ಈ ಪ್ರದೇಶದಲ್ಲಿ ನಿಯೋಜಿಸಲಾಗಿದೆ.
G20 ಸಭೆಯ ಸ್ಥಳವಾದ ಶೇರ್-ಎ-ಕಾಶ್ಮೀರ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ (SKICC) ಸುತ್ತಲಿನ ದಾಲ್ ಸರೋವರದ ಭದ್ರತೆಯನ್ನು ಮಾರ್ಕೋಸ್ ಎಂದೂ ಕರೆಯಲ್ಪಡುವ ನೌಕಾಪಡೆಗಳು ವಹಿಸಿಕೊಂಡಿವೆ. NSG ಕಮಾಂಡೋಗಳು ಪೊಲೀಸ್ ಮತ್ತು ಅರೆಸೇನಾ ಪಡೆಗಳೊಂದಿಗೆ ಪ್ರದೇಶದಲ್ಲಿ ಭದ್ರತಾ ವ್ಯಾಯಾಮಗಳನ್ನು ನಡೆಸುತ್ತಿದ್ದಾರೆ. ಗುರುವಾರ ಎನ್ಎಸ್ಜಿ ಲಾಲ್ ಚೌಕ್ನಲ್ಲಿ ಶೋಧ ಕಾರ್ಯಗಳು ನಡೆದಿದೆ.
ಕಾಶ್ಮೀರದಲ್ಲಿ ಜಿ20 ಕಾರ್ಯಕ್ರಮಕ್ಕೆ ಭಯೋತ್ಪಾದಕರು ಅಡ್ಡಿಪಡಿಸಲು ಪ್ರಯತ್ನಿಸಬಹುದು ಎಂಬ ವರದಿಗಳ ಹಿನ್ನೆಲೆಯಲ್ಲಿ ಸೇನೆ, ಗಡಿ ಭದ್ರತಾ ಪಡೆ (ಬಿಎಸ್ಎಫ್), ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್ಪಿಎಫ್), ಸಶಸ್ತ್ರ ಸೀಮಾ ಬಲ್ (ಎಸ್ಎಸ್ಬಿ) ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭದ್ರತಾ ಗ್ರಿಡ್ನ ಭಾಗವಾಗಿವೆ.
“ನಾವು ಮೂರು ಹಂತದ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದೇವೆ. ಎನ್ಎಸ್ಜಿ ಮತ್ತು ಸೇನೆಯ ಸಹಾಯದಿಂದ ಡ್ರೋನ್ ವಿರೋಧಿ ಉಪಕರಣಗಳನ್ನು ನಿಯೋಜಿಸಲಾಗುತ್ತಿದೆ, ದಾಲ್ ಸರೋವರದ ಭದ್ರತೆಗೆ ಪೊಲೀಸರಲ್ಲದೆ ಮಾರ್ಕೋಸ್ ಅನ್ನು ನಿಯೋಜಿಸಲಾಗುತ್ತಿದೆ, ಪೊಲೀಸ್, ಬಿಎಸ್ಎಫ್, ಸಿಆರ್ಪಿಎಫ್ ಮತ್ತು ಎಸ್ಎಸ್ಜಿಯನ್ನು ನಿಯೋಜಿಸಲಾಗುತ್ತಿದೆ. ಅಹಿತಕರ ಘಟನೆ ನಡೆಯದಂತೆ ಎಲ್ಲಾ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವಿಜಯ್ ಕುಮಾರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.