ನವದೆಹಲಿ: ಭಾರತದ G20 ಪ್ರೆಸಿಡೆನ್ಸಿ ಅಡಿಯಲ್ಲಿ 3ನೇ ಎನರ್ಜಿ ಟ್ರಾನ್ಸಿಶನ್ಸ್ ವರ್ಕಿಂಗ್ ಗ್ರೂಪ್ ಮೀಟಿಂಗ್ (ETWG) ನಿನ್ನೆ ಮುಂಬೈನಲ್ಲಿ ಪ್ರಾರಂಭವಾಯಿತು. ಮೂರು ದಿನಗಳ ಸಭೆಯಲ್ಲಿ G20 ಸದಸ್ಯ ರಾಷ್ಟ್ರಗಳು, ವಿಶೇಷ ಆಹ್ವಾನಿತ ದೇಶಗಳು ಮತ್ತು ಇಂಟರ್ನ್ಯಾಷನಲ್ ಎನರ್ಜಿ ಏಜೆನ್ಸಿ (IEA), ವಿಶ್ವ ಬ್ಯಾಂಕ್ ಮತ್ತು ವರ್ಲ್ಡ್ ಎನರ್ಜಿ ಕೌನ್ಸಿಲ್ ಇಂಡಿಯಾದಂತಹ ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಪ್ರತಿನಿಧಿಸುವ 100ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.
ಭಾರತದ ಪ್ರೆಸಿಡೆನ್ಸಿ ಅಡಿಯಲ್ಲಿ, ನಾಲ್ಕು ETWG ಸಭೆಗಳನ್ನು ಯೋಜಿಸಲಾಗಿದೆ. ಮೊದಲ ಎರಡು ETWG ಸಭೆಗಳು ಬೆಂಗಳೂರು ಮತ್ತು ಗಾಂಧಿನಗರದಲ್ಲಿ ನಡೆದವು. 2030 ರ ವೇಳೆಗೆ ಭಾರತವು ತನ್ನ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು 500 GWಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.
2030ರ ವೇಳೆಗೆ ನವೀಕರಿಸಬಹುದಾದ ಮೂಲಗಳಿಂದ 50 % ಶಕ್ತಿಯ ಅವಶ್ಯಕತೆಗಳನ್ನು ಸಾಧಿಸುವ ಗುರಿಯನ್ನು ಹೊಂದಲಾಗಿದೆ. ETWG ಸಭೆಯ, ಕಲ್ಲಿದ್ದಲು ಕಾರ್ಯದರ್ಶಿ ಅಮೃತ್ ಲಾಲ್ ಮೀನಾ ಅವರ ಮಾರ್ಗದರ್ಶನದಲ್ಲಿ ಕೇಂದ್ರ ಕಲ್ಲಿದ್ದಲು ಸಚಿವಾಲಯವು ಜಸ್ಟ್ ಟ್ರಾನ್ಸಿಶನ್ ರೋಡ್ಮ್ಯಾಪ್ ಕುರಿತು ಸೆಮಿನಾರ್ ಆಯೋಜಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.