ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ದಿವಗಂತ ಎಂ.ಪಿ. ಪ್ರಕಾಶ್ ಇವರ ಪುತ್ರಿ, ಮೊಮ್ಮಗ ಮತ್ತು ಬೆಂಬಲಿಗರು ಇಂದು ಬಿಜೆಪಿ ಸೇರಿದರು.
ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಇವರ ಪುತ್ರಿ ಶ್ರೀಮತಿ ಎಂ.ಪಿ. ಸುಮಾ ವಿಜಯ, ಮೊಮ್ಮಗ ಸಾತ್ವಿಕ್ ವಿಜಯಕುಮಾರ್ ಹಿರೇಮಠ, ಅಳಿಯ ವಿಜಯಕುಮಾರ್ ಬಸವಣ್ಣಯ್ಯ ಹಿರೇಮಠ ಅವರು ಇಂದು ಬಿಜೆಪಿ ಸೇರಿದರು.
ಇವರಲ್ಲದೆ, ಪುರಸಭೆ ಮಾಜಿ ಅಧ್ಯಕ್ಷರಾದ ಹಣ್ಣಿ ವೀರಮ್ಮ, ಪವಿತ್ರಾ ರಾಮಸ್ವಾಮಿ, ಯಮುನಪ್ಪ, ಕೋಡಿಹಳ್ಳಿ ಕೊಟ್ರೇಶ್, ಪುರಸಭೆ ಮಾಜಿ ಸದಸ್ಯ ರಾಮಸ್ವಾಮಿ ಚೈತನ್ಯ, ಟಿ.ಎ.ಪಿ.ಸಿ.ಎಂ.ಎಸ್. ಮಾಜಿ ಸದಸ್ಯ ಎಸ್. ಯಮುನೂರಪ್ಪ, ಗ್ರಾಮ ಪಂಚಾಯತಿ ಸದಸ್ಯ ಬಿ.ಎಂ. ಅಭಿಷೇಕ್, ಮುಖಂಡರಾದ ಸುದರ್ಶನ ಶಿಲ್ಪಿ, ಹನುಮಂತು, ಸುರೇಶ್ ಕಾಯಣ್ಣನವರ, ಗ್ರಾಮ ಪಂಚಾಯತಿ ಮಾಜಿ ಸದಸ್ಯ ಕಿರಣ್ ಕುಮಾರ್ ಲಿಂಗದಹಳ್ಳಿ, ಪತ್ರಕರ್ತೆ ಎಂ.ಪಿ.ಅರುಣ ಮತ್ತು ಸಮಾಜಸೇವಕಿ ಗೀತಾ ದೇಸಾಯಿ ಅವರು ಪಕ್ಷಕ್ಕೆ ಸೇರ್ಪಡೆಯಾದರು.
ನಗರದ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಈ ಸೇರ್ಪಡೆ ಕಾರ್ಯಕ್ರಮ ಜರುಗಿತು. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್, ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರು ಹಾಗೂ ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ, ರಾಜ್ಯ ವಕ್ತಾರರು ಮತ್ತು ವಿಧಾನಪರಿಷತ್ ಸದಸ್ಯೆ ಡಾ. ತೇಜಸ್ವಿನಿ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಅವರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.