ಲಂಡನ್: ಯುಕೆಯಲ್ಲಿ ಖಾಲಿಸ್ತಾನ್ ಬೆಂಬಲಿಗರು ಇತ್ತೀಚಿನ ದಿನಗಳಲ್ಲಿ ನಡೆಸುತ್ತಿರುವ ಹಿಂಸಾಚಾರವು ಬ್ರಿಟನ್ಗೆ ಭದ್ರತಾ ಸವಾಲುಗಳನ್ನು ಸೃಷ್ಟಿಸುತ್ತಿದೆ, ಜೊತೆಗೆ ಆ ದೇಶದಲ್ಲಿನ ಸಿಖ್ಖರನ್ನು ತೀವ್ರಗಾಮಿಗೊಳಿಸಲಾಗುತ್ತಿದೆ. ಸಿಖ್ ಉಗ್ರಗಾಮಿಗಳ ಬಣ ಎಂದೇ ಕುಖ್ಯಾತ ಗಳಿಸಿರುವ ಖಲಿಸ್ತಾನ್ ಸಂಘಟನೆಯ ಬೆಂಬಲಿಗರ ಚಟುವಟಿಕೆಗಳಲ್ಲಿ ಬ್ರಿಟನ್ ಇತ್ತೀಚಿಗೆ ಏರಿಕೆಯನ್ನು ಕಾಣುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಹಲವರಿಗೆ ಖಲಿಸ್ತಾನಿಗಳ ಬಗ್ಗೆ ಗೊಂದಲವಿದೆ, ಇದು ಸಾಮಾಜಿಕ ಮತ್ತು ಭದ್ರತೆಯ ಸವಾಲಾಗಿದೆ, ಖಲಿಸ್ತಾನಿಗಳು ಅಂತರಾಷ್ಟ್ರೀಯ ನೆಟ್ವರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಯುರೋಪಿಯನ್ ಐ ಆನ್ ರಾಡಿಕಲೈಸೇಶನ್ ವರದಿ ಹೇಳಿದೆ.
ಖಲಿಸ್ತಾನಿ ಬೆಂಬಲಿಗರು ಪಿತೂರಿ ಸಿದ್ಧಾಂತದ ನಿರೂಪಣೆಗಳನ್ನು ಪ್ರಚಾರ ಮಾಡುತ್ತಿದ್ದಾರೆ, ಬ್ರಿಟನ್ನಲ್ಲಿ ಸಿಖ್ಖರು ನಿರಂತರ ದಾಳಿಗೆ ಒಳಗಾಗಿದ್ದಾರೆ ಎಂದು ನಂಬುವಂತೆ ಮಾಡುತ್ತಿದ್ದಾರೆ, ಹೀಗಾಗಿ ಹಿಂಸಾಚಾರವನ್ನು “ಆತ್ಮರಕ್ಷಣೆ” ಎಂಬಂತೆ ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದರಿಂದ ಸಿಖ್ ಸಮುದಾಯಕ್ಕೆಯೇ ಆಪಾಯವಿದೆ. ಯುವಕರು ಮತ್ತು ಇತರರು ಭಯೋತ್ಪಾದನೆ ಮತ್ತು ಅಪರಾಧದತ್ತ ಮುಖ ಮಾಡುವ ಅಪಾಯವಿದೆ. ವೈವಿಧ್ಯಮಯ ಜನಸಂಖ್ಯೆಯೊಳಗೆ ವಿಭಜನೆಗಳನ್ನು ಸೃಷ್ಟಿಸಿ ಆ ಮೂಲಕ ವಿಶಾಲ ಸಮಾಜಕ್ಕೆ ಅಪಾಯವನ್ನುಂಟುಮಾಡುವ ಆತಂಕವಿದೆ ಎಂದು ವರದಿ ಹೇಳಿದೆ.
Khalistan supporters in UK creating security challenges, radicalising Sikhs – https://t.co/YI7nGehbc1 via @the_newsmill
— TheNewsMill (@The_NewsMill) April 15, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.