ಮುಂಬೈ: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಕುರಿತು ರಾಹುಲ್ ಗಾಂಧಿಯವರು ನೀಡಿರುವ ಹೇಳಿಕೆಗಳು ಭಾರೀ ವಿವಾದ ಸೃಷ್ಟಿಸುತ್ತಿದೆ. ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ರಾಹುಲ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದು, ಬೆಳ್ಳಿ ಚಮಚದೊಂದಿಗೆ ಜನಿಸಿದವರು ಸಾವರ್ಕರ್ ಅವರನ್ನು ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
‘ವೀರ್ ಸಾವರ್ಕರ್ ಗೌರವ್ ಯಾತ್ರೆ’ ಉದ್ದೇಶಿಸಿ ಮಾತನಾಡಿದ ಫಡ್ನವೀಸ್, ಸಾವರ್ಕರ್ ಬಗ್ಗೆ ರಾಹುಲ್ ಗಾಂಧಿ ಅವರ ತಿಳುವಳಿಕೆಯನ್ನು ಪ್ರಶ್ನಿಸಿದ್ದಾರೆ. ಅಲ್ಲದೇ ಇಂದಿರಾ ಗಾಂಧಿ ಮತ್ತು ಯಶವಂತರಾವ್ ಚವ್ಹಾಣ್ ಸೇರಿದಂತೆ ಸೇರಿದಂತೆ ಕಾಂಗ್ರೆಸ್ ಉನ್ನತ ನಾಯಕರು ಸಾವರ್ಕರ್ ಅವರನ್ನು ಗೌರವಿಸಿದ್ದಾರೆ ಎಂದು ರಾಹುಲ್ ಗಾಂಧಿಗೆ ನೆನಪಿಸಿಕೊಟ್ಟಿದ್ದಾರೆ.
ಈ ವಿಷಯದಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿಲುವನ್ನು ಟೀಕಿಸಿದ ಫಡ್ನವಿಸ್, ಕೇವಲ ಹೇಳಿಕೆಗಳನ್ನು ನೀಡುವ ಬದಲು ಕ್ರಮ ತೆಗೆದುಕೊಳ್ಳುವಂತೆ ಸವಾಲು ಹಾಕಿದರು. ರಾಹುಲ್ ಗಾಂಧಿ ಅವರು ಸಾವರ್ಕರ್ ಅವರ ಟ್ವೀಟ್ ಅನ್ನು ಏಕೆ ಅಳಿಸಿಲ್ಲ ಮತ್ತು ಟ್ವಿಟ್ ಅನ್ನು ಅಳಿಸಲು ಅವರಿಗೆ ಯಾಕೆ ಒತ್ತಾಯಿಸಲಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.
“ಅಂಡಮಾನ್ನ ಜೈಲಿನಿಂದ ರತ್ನಗಿರಿಗೆ ಮರಳಿದ ನಂತರ ಸಾಮಾಜಿಕ ಸುಧಾರಣೆಗಳನ್ನು ತರಲು ಹಲವಾರು ಚಟುವಟಿಕೆಗಳನ್ನು ಆರಂಭಿಸಿದವರು ಸಾವರ್ಕರ್. ಅಸ್ಪೃಶ್ಯತೆಯನ್ನು ತೊಡೆದುಹಾಕದ ಹೊರತು ನಾವು ಎಂದಿಗೂ ಶ್ರೇಷ್ಠ ರಾಷ್ಟ್ರವಾಗುವುದಿಲ್ಲ ಎಂದು ಸಾವರ್ಕರ್ ಹೇಳಿದ್ದರು. ಆದರೆ ಚಿನ್ನದ ಚಮಚದೊಂದಿಗೆ ಜನಿಸಿದವರು ಅವರನ್ನು ಮಾಫಿವೀರ್ ಎಂದು ಕರೆಯುತ್ತಾರೆ” ಎಂದು ಫಡ್ನವೀಸ್ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
“ವೀರ್ ಸಾವರ್ಕರ್ ಕ್ಷಮೆಯಾಚಿಸಿ ಬ್ರಿಟಿಷರಿಗೆ ಪತ್ರ ಬರೆದಿದ್ದಾರೆ ಎಂದು ನೀವು ಹೇಳಿದ್ದೀರಿ. ಇಲ್ಲ, ಅದು ತಪ್ಪು. ಬ್ರಿಟಿಷರು ತನ್ನನ್ನು ಬಿಡುಗಡೆ ಮಾಡುವುದಿಲ್ಲ ಎಂದು ತಿಳಿದಿದ್ದರಿಂದ ಸಾವರ್ಕರ್ ಪತ್ರ ಬರೆದರು” ಎಂದಿದ್ದಾರೆ.
ಪಶ್ಚಿಮ ಬಂಗಾಳದ ಸದಸ್ಯರೊಬ್ಬರು ಸ್ವಾತಂತ್ರ್ಯೋತ್ತರ ಸಂಸತ್ತಿನಲ್ಲಿ ಸಾವರ್ಕರ್ ಅವರಿಗೆ ಅಭಿನಂದನಾ ನಿರ್ಣಯವನ್ನು ಪ್ರಸ್ತಾಪಿಸಿದರು, ಆದರೆ ಫಿರೋಜ್ ಗಾಂಧಿಯನ್ನು ಹೊರತುಪಡಿಸಿ ಕಾಂಗ್ರೆಸ್ ಪಕ್ಷವು ಅದನ್ನು ವಿರೋಧಿಸಿತು ಎಂದು ಫಡ್ನವಿಸ್ ಹೇಳಿದ್ದಾರೆ. ರಾಹುಲ್ ಗಾಂಧಿ ಅವರು “ನಕಲಿ ಉಪನಾಮ” ಹೊಂದಿದ್ದಾರೆ ಎಂದು ಟೀಕಿಸಿದ ಫಡ್ನವಿಸ್, ಅವರಿಗೆ ಭಾರತದ ಇತಿಹಾಸ ತಿಳಿದಿದೆಯೇ ಎಂದು ಪ್ರಶ್ನಿಸಿದ್ದಾರೆ.
“ಕೆಲವರ ಪಕ್ಷವು ಚೀನಾ ಸರ್ಕಾರ ನೀಡಿದ ಹಣದಿಂದ ನಡೆಯುತ್ತಿದೆ. ಆದರೆ ಅವರು ಸಾವರ್ಕರ್ ಅವರನ್ನು ಮಾಫಿವೀರ್ ಎಂದು ಕರೆಯುತ್ತಾರೆ. ಸಾವರ್ಕರ್ ಅವರು ಅಂಡಮಾನ್ನ ಜೈಲಿನಲ್ಲಿ ಬ್ರಿಟಿಷರಿಂದ ಕಠಿಣ ನೋವು, ಕಳಪೆ ಗುಣಮಟ್ಟದ ಆಹಾರ ಮತ್ತು ಎಲ್ಲಾ ರೀತಿಯ ಕಿರುಕುಳವನ್ನು ಸಹಿಸಿಕೊಂಡರು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.