ನವದೆಹಲಿ: ಸಿಖ್ಸ್ ಫಾರ್ ಜಸ್ಟೀಸ್ ನಾಯಕ ಗುರ್ಪತ್ವಂತ್ ಸಿಂಗ್ ಪನ್ನು ಬಿಜೆಪಿಗೆ ಬೆದರಿಕೆ ಹಾಕಿದ ಆಡಿಯೋವನ್ನು ಹಲವಾರು ಮಾಧ್ಯಮ ಸಿಬ್ಬಂದಿಗಳು ಸ್ವೀಕರಿಸಿದ ನಂತರ ಅಸ್ಸಾಂ ಪೊಲೀಸರು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ.
‘ವಾರಿಸ್ ಪಂಜಾಬ್ ದೇ’ ಮುಖ್ಯಸ್ಥ ಮತ್ತು ವಿವಾದಾತ್ಮಕ ಬೋಧಕ ಅಮೃತಪಾಲ್ ಸಿಂಗ್ ಅನ್ನು ಬಂಧಿಸಲು ಭಾರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿರುವ ಸಮಯದಲ್ಲಿ ಈ ಬೆಳವಣಿಗೆ ನಡೆದಿದೆ.
ಅಸ್ಸಾಂ ಡಿಜಿಪಿ ಜಿಪಿ ಸಿಂಗ್ ಅವರು ಬೆದರಿಕೆಯ ಕುರಿತು ರಾಜ್ಯದ ಎಲ್ಲಾ ಎಸ್ಪಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದ್ದಾರೆ. ಆಡಿಯೋ ಬೆದರಿಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
“ಭಾನುವಾರ ಮಧ್ಯಾಹ್ನದ ವೇಳೆಗೆ ಅಸ್ಸಾಂನ ಕೆಲವು ಪತ್ರಕರ್ತರು ಗುರುಪತ್ವಾನ್ ಸಿಂಗ್ ಪನ್ನು ಎಂಬ ಓರ್ವ ಸಂಭಾವಿತ ವ್ಯಕ್ತಿ ಅಸ್ಸಾಂನ ಗೌರವಾನ್ವಿತ ಮುಖ್ಯಮಂತ್ರಿಗೆ ಬೆದರಿಕೆ ಹಾಕಿರುವ ಆಡಿಯೋ ಕ್ಲಿಪ್ ಅನ್ನು ಸ್ವೀಕರಿಸಿದರು, ಅಸ್ಸಾಂನಲ್ಲಿ ಸಿಖ್ ಸಮುದಾಯಕ್ಕೆ ಅನ್ಯಾಯದ ಹಲವಾರು ನಿದರ್ಶನಗಳಿವೆ ಎಂದು ಅದರಲ್ಲಿ ಹೇಳಲಾಗಿದೆ. ನಾವು ಪ್ರಕರಣ ದಾಖಲಿಸಿದ್ದೇವೆ. ಎಸ್ಟಿಎಫ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಮತ್ತು ತನಿಖೆ ಪ್ರಾರಂಭವಾಗಿದೆ. ಇದರ ಹಿಂದಿರುವ ಜನರು ಯಾರು ಎಂಬುದನ್ನು ತಿಳಿಯಲು ನಾವು ಆಳಕ್ಕೆ ಹೋಗಿ ತನಿಖೆ ನಡೆಸುತ್ತೇವೆ ಎಂದು ಅಸ್ಸಾಂ ಡಿಜಿಪಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.