ನವದೆಹಲಿ: ಇಂದು ಮಿಜೋರಾಂಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2025 ರ ವೇಳೆಗೆ ಈಶಾನ್ಯದ ಎಲ್ಲಾ ಎಂಟು ರಾಜ್ಯಗಳ ರಾಜಧಾನಿಗಳನ್ನು ವಿಮಾನ, ರೈಲು ಮತ್ತು ರಸ್ತೆ ಸಂಪರ್ಕಗಳೊಂದಿಗೆ ಸಂಪರ್ಕಿಸುವ ಯೋಜನೆಯನ್ನು ಘೋಷಿಸಿದರು.
ಮಿಜೋರಾಂ ಭೇಟಿಯ ಸಂದರ್ಭದಲ್ಲಿ ಮಾತನಾಡಿದ ಶಾ, ಭಾರತದ ಪ್ರಜಾಪ್ರಭುತ್ವದ ಒಂದು ಉದಾಹರಣೆಯಾಗಿ ರಾಜ್ಯ ಯಶಸ್ಸು ಸಾಧಿಸುತ್ತಿದೆ, ಝೋರಂತಂಗ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿರುವುದು ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಸಾಕ್ಷಿಯಾಗಿದೆ ಎಂದರು.
“ಈಶಾನ್ಯದ ಎಲ್ಲಾ 8 ರಾಜ್ಯಗಳ ರಾಜಧಾನಿಗಳನ್ನು 2025 ರ ಮೊದಲು ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಸಂಪರ್ಕಿಸಲಾಗುವುದು” ಎಂದು ಶಾ ಹೇಳಿದರು.
“ಒಂದು ಕಾಲದಲ್ಲಿ ಇಲ್ಲಿ ಅಶಾಂತಿ ಮತ್ತು ಹಿಂಸಾಚಾರವಿತ್ತು, ಆದರೆ ಇಂದು ಝೋರಂತಂಗ ಅವರು ಮಿಜೋರಾಂನ ಸಿಎಂ ಆಗಿದ್ದಾರೆ, ಇದು ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಉದಾಹರಣೆಯಾಗಿದೆ. ಇಂದು ಇಲ್ಲಿ ಶಾಂತಿ ಇದೆ. ಈಶಾನ್ಯದ ಎಲ್ಲಾ ಸಶಸ್ತ್ರ ಗುಂಪುಗಳು ಮುಖ್ಯವಾಹಿನಿಗೆ ಸೇರಲು ನಾನು ಮನವಿ ಮಾಡುತ್ತೇನೆ. ಪ್ರಜಾಪ್ರಭುತ್ವ ಪ್ರಕ್ರಿಯೆಯ ಭಾಗವಾಗಿ ಮತ್ತು ಪ್ರದೇಶ ಮತ್ತು ದೇಶದ ಅಭಿವೃದ್ಧಿಯಲ್ಲಿ ತಮ್ಮ ಕೊಡುಗೆಯನ್ನು ನೀಡಿ ಎಂದು ಮನವಿ ಮಾಡುತ್ತೇನೆ”ಎಂದು ಅವರು ಹೇಳಿದರು.
2,415 ಕೋಟಿ ಮೌಲ್ಯದ ಹಲವಾರು ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲು ಶಾ ಐಜ್ವಾಲ್ಗೆ ಬಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.