ಇಂಫಾಲ್: ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ಅನ್ನು ಪರಿಚಯಿಸಲು ತಮ್ಮ ಸರ್ಕಾರ ಸಿದ್ಧವಾಗಿದೆ ಆದರೆ ಇದಕ್ಕೆ ಕೇಂದ್ರದ ಅನುಮೋದನೆ ಅಗತ್ಯವಿದೆ ಎಂದು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಹೇಳಿದ್ದಾರೆ.
ಮಣಿಪುರದ ಇಂಫಾಲದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ ಸಿಎಂ, “ಎನ್ಆರ್ಸಿಯನ್ನು ರಾಜ್ಯ ಸರ್ಕಾರ ಮಾತ್ರ ಪರಿಚಯಿಸಲು ಸಾಧ್ಯವಿಲ್ಲ, ಇದಕ್ಕೆ ಕೇಂದ್ರದ ಅನುಮೋದನೆ ಅಗತ್ಯವಿದೆ” ಎಂದರು.
ಮಣಿಪುರ ರಾಜ್ಯ ಜನಸಂಖ್ಯಾ ಆಯೋಗ (ಎಂಎಸ್ಪಿಸಿ) ಕುರಿತು ಮಾತನಾಡಿದ ಸಿಎಂ ಸಿಂಗ್, ರಾಜ್ಯ ಸರ್ಕಾರವು ಈಗಾಗಲೇ ಮಣಿಪುರ ರಾಜ್ಯ ಜನಸಂಖ್ಯಾ ಆಯೋಗವನ್ನು (ಎಂಎಸ್ಪಿಸಿ) ರಚಿಸಿದೆ, ಸದಸ್ಯರನ್ನೂ ನೇಮಕ ಮಾಡಲಾಗಿದೆ ಮತ್ತು ಇದರ ಮೂಲಕ ರಾಜ್ಯದಲ್ಲಿ ವಲಸಿಗರನ್ನು ಗುರುತಿಸಲಾಗುತ್ತದೆ ಎಂದು ಹೇಳಿದರು.
ಇಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು ಗುರುತಿಸುವ ಕಾರ್ಯಕ್ಕಾಗಿ ಶೀಘ್ರದಲ್ಲಿಯೇ ಮನೆ ಮನೆ ಸಮೀಕ್ಷೆ ಆರಂಭವಾಗಲಿದೆ ಎಂದು ಅವರು ತಿಳಿಸಿದರು.
ಮಣಿಪುರದಲ್ಲಿ ವಲಸಿಗರ ಜನಸಂಖ್ಯೆಯಲ್ಲಿ ಅನಿಯಂತ್ರಿತ ಹೆಚ್ಚಳದ ಹಿನ್ನೆಲೆಯಲ್ಲಿ ವಿವಿಧ ನಾಗರಿಕ ಸಮಾಜ ಸಂಘಟನೆಗಳು, ವಿಶೇಷವಾಗಿ ವಿದ್ಯಾರ್ಥಿ ಸಂಘಟನೆಗಳು ರಾಜ್ಯದಲ್ಲಿ ಎನ್ಆರ್ಸಿ ಅನುಷ್ಠಾನಕ್ಕೆ ಒತ್ತಾಯಿಸುತ್ತಿವೆ. ಮೊನ್ನೆಯಷ್ಟೇ ಬೇಡಿಕೆಯನ್ನು ಮುಂದಿಟ್ಟುಕೊಂಡು, ಆರು ವಿದ್ಯಾರ್ಥಿ ಸಂಘಟನೆಗಳು – AMSU, MSF, DESAM, KSA, SUK ಮತ್ತು AIM – ರಾಜಧಾನಿ ನಗರದ ಹೃದಯಭಾಗದಲ್ಲಿರುವ ವ್ಯಾಪಾರ ಕೇಂದ್ರವಾದ ಇಂಫಾಲ್ನ ಖ್ವೈರಾಂಬಂಡ್ ಕೀಥೆಲ್ನಲ್ಲಿ ಪ್ರತಿಭಟನೆಯನ್ನು ಕೂಡ ನಡೆಸಿವೆ.
#WATCH | House-to-house survey will be done soon to identify illegal immigrants…If we want to do NRC, we can't do it alone,we need approval from the Centre. We've already constituted a population commission &now through it,we'll identify (illegal immigrants): Manipur CM (31.03) pic.twitter.com/7mytF7eanx
— ANI (@ANI) April 1, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.