ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಕಡಲ ವಾರದ ಶುಭಾಶಯಗಳನ್ನು ಕೋರಿದ್ದಾರೆ. ದೇಶದ ಶ್ರೀಮಂತ ಕಡಲ ಇತಿಹಾಸದೊಂದಿಗೆ ಜನರ ಸಂಪರ್ಕವನ್ನು ಗಾಢವಾಗಿಸಲು ರಾಷ್ಟ್ರೀಯ ಕಡಲ ವಾರವು ಒಂದು ಅವಕಾಶವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೊವಾಲ್ ಅವರ ಟ್ವೀಟ್ಗೆ ಉತ್ತರಿಸಿದ ಪ್ರಧಾನಿ, ‘ಬಂದರು ನೇತೃತ್ವದ ಅಭಿವೃದ್ಧಿ ಮತ್ತು ಆರ್ಥಿಕ ಸಮೃದ್ಧಿಗಾಗಿ ನಮ್ಮ ಕರಾವಳಿಯನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳಿಗೆ ಇದು ಚೈತನ್ಯವನ್ನು ನೀಡಲಿ’ ಎಂದು ಹೇಳಿದರು.
ಕೇಂದ್ರ ಸರ್ಕಾರವು ಏಪ್ರಿಲ್ನಲ್ಲಿ ರಾಷ್ಟ್ರೀಯ ಕಡಲ ದಿನದ ಪೂರ್ವಭಾವಿಯಾಗಿ ರಾಷ್ಟ್ರೀಯ ಕಡಲ ವಾರದ ಭಾಗವಾಗಿ ಕಾರ್ಯಕ್ರಮಗಳ ಸರಣಿಯನ್ನು ಪ್ರಾರಂಭಿಸಿದೆ.
ಪ್ರತಿವರ್ಷ ಏಪ್ರಿಲ್ 5ರಂದು ಭಾರತದಲ್ಲಿ ರಾಷ್ಟ್ರೀಯ ಕಡಲ ದಿನವನ್ನು ಆಚರಿಸಲಾಗುತ್ತದೆ. ಭಾರತೀಯ ಆರ್ಥಿಕತೆ ಅಭಿವೃದ್ಧಿಯಲ್ಲಿ ಕಡಲ ವ್ಯಾಪಾರದ ಪಾತ್ರ ಮತ್ತು ಜಾಗತಿಕ ವ್ಯಾಪಾರದಲ್ಲಿ ಭಾರತದ ಪಾತ್ರ ಮತ್ತು ಅದರ ಕಾರ್ಯತಂತ್ರದ ಸ್ಥಾನಕ್ಕೆ ಸಮರ್ಪಣೆ ತೋರುವುದು ಇದರ ಮುಖ್ಯ ಉದ್ದೇಶ.
May the National Maritime Week serve as an opportunity to deepen our connect with our rich maritime history. May it also add vigour to the ongoing efforts towards port-led development and harnessing our coasts for economic prosperity. https://t.co/O643Pvh4ru
— Narendra Modi (@narendramodi) March 31, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.