ನವದೆಹಲಿ: ಕಾಫಿ ಟೇಬಲ್ ಬುಕ್ “voice of India-Modi and His Transformative Mann Ki Baat” ಅನ್ನು ಹೊರತಂದಿದ್ದಕ್ಕಾಗಿ ಸಿಎನ್ಎನ್ ನ್ಯೂಸ್ 18 ನೆಟ್ವರ್ಕ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ನಿನ್ನೆ ನವದೆಹಲಿಯಲ್ಲಿ ನಡೆದ ನ್ಯೂಸ್ 18 ರೈಸಿಂಗ್ ಇಂಡಿಯಾ ಶೃಂಗಸಭೆಯಲ್ಲಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಪುಸ್ತಕವನ್ನು ಅನಾವರಣಗೊಳಿಸಿದರು.
ಉಪರಾಷ್ಟ್ರಪತಿ ಮಾಡಿದ ಟ್ವೀಟ್ಗೆ ಉತ್ತರಿಸಿದ ಪ್ರಧಾನಿ, ಮನ್ ಕಿ ಬಾತ್ನ ಅತ್ಯಂತ ಸುಂದರವಾದ ಭಾಗವೆಂದರೆ ಅದು ತಳಮಟ್ಟದ ಬದಲಾವಣೆ ಮಾಡುವವರನ್ನು ಆಚರಿಸುವ ವಿಧಾನವಾಗಿದೆ ಎಂದಿದ್ದಾರೆ.
ಟ್ವೀಟ್ ಮಾಡಿದ್ದ ಉಪ ರಾಷ್ಟ್ರಪತಿ ವಾಯ್ಸ್ ಆಫ್ ಇಂಡಿಯಾ-ಮೋದಿ ಕಾಫಿ ಟೇಬಲ್ ಬುಕ್ ವಿಷಯವು ತುಂಬಾ ಸೂಕ್ತವಾಗಿದೆ. ಮನ್ ಕಿ ಬಾತ್ ಒಂದರ್ಥದಲ್ಲಿ ಜನರ ಕಲ್ಪನೆಯನ್ನು ಪ್ರಭಾವಿತವಾಗಿ ಸೆರೆಹಿಡಿದಿದೆ ಎಂದರು.
ಮುಂದಿನ ತಿಂಗಳಲ್ಲಿ ಮನ್ ಕಿ ಬಾತ್ ತನ್ನ 100ನೇ ಸಂಚಿಕೆಯನ್ನು ಪೂರ್ಣಗೊಳಿಸಲಿದೆ.
The most beautiful part about #MannKiBaat is the manner in which it celebrates grassroots level change makers. As this programme completes hundred episodes, I compliment efforts like the one by @CNNnews18 to acknowledge the people mentioned and the impact they have created. https://t.co/T6egxnw15D
— Narendra Modi (@narendramodi) March 31, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.