ನವದೆಹಲಿ: ಕಿಸಾನ್ ರೈಲು ಯೋಜನೆ ಆರಂಭವಾದ 2020ರ ಆಗಸ್ಟ್ 7 ರಿಂದ ಭಾರತೀಯ ರೈಲ್ವೆಯು ದೇಶಾದ್ಯಂತ 167 ಮಾರ್ಗಗಳಲ್ಲಿ ಸರಿಸುಮಾರು 2,364 ಕಿಸಾನ್ ರೈಲು ಸೇವೆಗಳನ್ನು ನಿರ್ವಹಿಸಿದೆ.
ಇಂದು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಮಾಹಿತಿ ನೀಡಿದ್ದಾರೆ.
ಕಿಸಾನ್ ರೈಲು ಸೇವೆಗಳನ್ನು ರೈಲ್ವೆಯು ನಿಗದಿತ ಸೇವೆಗಳಾಗಿ ಮತ್ತು ಬೇಡಿಕೆಯ ಆಧಾರದ ಮೇಲೆ ನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.
2020-21 ಮತ್ತು 2021-22ರಲ್ಲಿ ಕಿಸಾನ್ ರೈಲಿನ ಮೂಲಕ ಹಣ್ಣುಗಳು ಮತ್ತು ತರಕಾರಿಗಳ ಸಾಗಣೆಗಾಗಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯವು ಸರಕು ಸಾಗಣೆಯಲ್ಲಿ ಶೇಕಡಾ ಐವತ್ತು ಸಬ್ಸಿಡಿಯನ್ನು ನೀಡಿತು. ಕಳೆದ ವರ್ಷ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಸಚಿವಾಲಯವು ಸಬ್ಸಿಡಿಯನ್ನು ಸ್ಥಗಿತಗೊಳಿಸಿದೆ ಎಂದು ವೈಷ್ಣವ್ ಮಾಹಿತಿ ನೀಡಿದ್ದಾರೆ.
ಆದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 45ರ ದರದಲ್ಲಿ ಸರಕು ಸಾಗಣೆ ಸಬ್ಸಿಡಿಯಾಗಿ ಸುಮಾರು 4 ಕೋಟಿ ರೂಪಾಯಿಗಳನ್ನು ಈ ತಿಂಗಳ 1ರವರೆಗೆ ರೈಲ್ವೆ ವಿತರಿಸಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.