ಬೆಳ್ತಂಗಡಿ : ಧರ್ಮಸ್ಥಳ-ಮಂಗಳೂರು ಮಾರ್ಗದ ಸರಕಾರಿ ಬಸ್ಗಳ ಅವ್ಯವಸ್ಥೆಯಿಂದ ಆಗುತ್ತಿರುವ ಅನಾನೂಕುಗಳ ಬಗ್ಗೆ ನಿತ್ಯಪ್ರಯಾಣಿಕರು ಪ್ರತಿಭಟಿಸಿದ ವಿದ್ಯಮಾನ ಬೆಳ್ತಂಗಡಿಯಲ್ಲಿ ಭಾನುವಾರ ನಡೆಯಿತು.
ಮಂಗಳೂರು ತೃತೀಯ ಡಿಪೋದ ಗುಜರಿಬಸ್ಗಳ ಬದಲಿಗೆ ಧರ್ಮಸ್ಥಳದ ಡಿಪೋದಲ್ಲಿನ ಬಸ್ಗಳನ್ನು ಓಡಿಸಬೇಕು. ಸೀಮಿತ ನಿಲುಗಡೆಯ ಹೆಸರಿನಲ್ಲಿಓಡುವ ಬಸ್ಗಳಿಗೆ ಬೇಕಾಬಿಟ್ಟಿಯಾಗಿಕೊಡುವ ನಿಲುಗಡೆಗಳನ್ನು ನಿಲ್ಲಿಸಬೇಕು ಮತ್ತು ಇದರಲ್ಲಿ ವಿದ್ಯಾರ್ಥಿ ಪಾಸ್ಗಳಿಗೆ ಅವಕಾಶ ನೀಡಬಾರದು.ವೇಗದೂತ ಬಸ್ ಸೇವೆ ಪ್ರಾರಂಭಿಸಬೇಕು. ಬಿ.ಸಿ.ರೋಡ್ ಮತ್ತು ಪುತ್ತೂರುಕಡೆಗೆ ಹೋಗುವ ಪ್ರಯಾಣಿಕರ ದೈನಂದಿನ ಪಾಸ್ಗಳಿಗೆ ಮಂಗಳೂರು-ಧರ್ಮಸ್ಥಳ ಬಸ್ಗಳಲ್ಲಿ ಅವಕಾಶ ನೀಡಬಾರದು. ಬಸ್ ಮತ್ತು ನಿಲ್ದಾಣಗಳಲ್ಲಿ ಸಮಯಸೂಚಿಯನ್ನು ಪ್ರದರ್ಶಿಸಬೇಕು. ತನಿಖಾಧಿಕಾರಿಗಳು ಸಮವಸ್ತ್ರ ಮತ್ತು ಗುರುತು ಚೀಟಿಯನ್ನು ಕಡ್ಡಾಯವಾಗಿ ಹಾಕುವಂತಾಗಬೇಕು.
ಮಹಿಳಾ ಸೀಟುಗಳು ಖಾಲಿ ಇದ್ದರೂ ಮಹಿಳೆಯರು ಇತರ ಸ್ಥಳದಲ್ಲಿ ಕುಳಿತುಕೊಂಡಿದ್ದಲ್ಲಿ ಈ ಬಗ್ಗೆ ನಿರ್ವಾಹಕರು ಅವರನ್ನು ಎಚ್ಚರಿಸಬೇಕು ಮತ್ತು ಉಜಿರೆ ಮತ್ತು ಬೆಳ್ತಂಗಡಿಯ ಸಂಚಾರ ನಿಯಂತ್ರಕರು ಪ್ರಯಾಣಿಕ ಸ್ನೇಹಿಯಾಗಿರಬೇಕು ಎಂಬಿತ್ಯಾದಿ ಬೇಡಿಗಳನ್ನು ಮುಂದಿಟ್ಟು ಕೊಂಡು ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿರುವ ಸಂಚಾರ ನಿಯಂತ್ರಕ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮಂಗಳೂರು ಡಿಪೋದ ಅಧಿಕಾರಿಯವರು ಬರಬೇಕೆಂದು ಪಟ್ಟು ಹಿಡಿದ ನಿತ್ಯಪ್ರಯಾಣಿಕರು ಬೆಳಿಗ್ಗೆಯಿಂದ ಸಂಜೆತನಕ ಊಟ ಬಿಟ್ಟುಕೂತರು. ಕೊನೆಗೆ ಬಂದ`ಅಧಿಕಾರಿ ಮನವಿಯನ್ನು ಸ್ವೀಕರಿಸಿದರು. ಸಮಸ್ಯೆ ಇತ್ಯರ್ಥಕ್ಕೆ ಪ್ರಯಾಣಿಕರು ಅವರಿಗೆ 15 ದಿನಗಳ ಅವಧಿ ನೀಡಿದರು. ಧರ್ಮಸ್ಥಳ ಡಿಪೋದ ಪ್ರಬಂಧಕರೂ ಆಗಮಿಸಿ ಸಮಸ್ಯೆ ಆಲಿಸಿದರು.
ಪ್ರತಿಭಟನೆಯ ನೇತೃತ್ವವನ್ನು ನಿತ್ಯಪ್ರಯಾಣಿಕ ರಾದಚಂದ್ರಮೋಹನ ಮರಾಠೆ, ನವೀನ್ ಬೆಳಾಲು, ಗಫೂರ್, ಗಣೇಶ್ ಶೆಟ್ಟಿ, ಮುತ್ತಪ್ಪ, ಹರ್ಷಕೋಟ್ಯಾನ್ ಮತ್ತಿತರರು ವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.