ನವದೆಹಲಿ: ಹಿಂಸಾತ್ಮಕ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡುವ ಗಜ್ವಾ-ಎ-ಹಿಂದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ನಡೆಯುತ್ತಿರುವ ತನಿಖೆಯ ಅಡಿ ಎನ್ಐಎ ಇಂದು ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯಪ್ರದೇಶದ ಏಳು ಸ್ಥಳಗಳಲ್ಲಿ ಶೋಧ ನಡೆಸಿದೆ.
ಮಹಾರಾಷ್ಟ್ರದ ನಾಗ್ಪುರ ಮತ್ತು ಗುಜರಾತ್ನಲ್ಲಿ ತಲಾ ಮೂರು ಮತ್ತು ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಒಂದು ಸ್ಥಳವನ್ನು ಎನ್ಐಎ ಶೋಧಿಸಿದೆ.
ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಶಂಕಿತರ ವಸತಿ ಆವರಣಗಳು ಮತ್ತು ಅಡಗುತಾಣಗಳನ್ನು ಈ ವೇಳೆ ಶೋಧಿಸಲಾಗಿದೆ.
ಎನ್ಐಎ ಆರಂಭದಲ್ಲಿ ಗಜ್ವಾ-ಎ-ಹಿಂದ್ ಪ್ರಕರಣವನ್ನು ಕಳೆದ ವರ್ಷ ಜುಲೈ 22 ರಂದು ಬಿಹಾರದ ಫುಲ್ವಾರಿಶರೀಫ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿತ್ತು.
ಫುಲ್ವಾರಿಶರೀಫ್ ತನಿಖೆಯಲ್ಲಿ, ಆರೋಪಿ ಮಾರ್ಗುಬ್ ಅಹ್ಮದ್ ಡ್ಯಾನಿಶ್ ಎಂಬಾತ ರಚಿಸಿದ “ಘಜ್ವಾ-ಎ-ಹಿಂದ್” ಎಂಬ ವಾಟ್ಸಾಪ್ ಗುಂಪಿನಲ್ಲಿ ಹಲವಾರು ವಿದೇಶಿ ಘಟಕಗಳೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಎನ್ಐಎಗೆ ತಿಳಿದು ಬಂದಿದೆ.
ಈ ವರ್ಷ ಜನವರಿ 6 ರಂದು ಎನ್ಐಎ ಆರೋಪಿಯ ವಿರುದ್ಧ ಬಿಹಾರದ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.