ನವದೆಹಲಿ: ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ 2023-24ರ ಅವಧಿಗೆ 1.18 ಲಕ್ಷ ಕೋಟಿ ಬಜೆಟ್ ಮತ್ತು 2022-23ಕ್ಕೆ ಜಮ್ಮು-ಕಾಶ್ಮೀರದ ಅನುದಾನಕ್ಕಾಗಿ ಪೂರಕ ಬೇಡಿಕೆಗಳನ್ನೂ ಅಂಗೀಕರಿಸಿದೆ,
ವಿರೋಧ ಪಕ್ಷದ ಸದಸ್ಯರು ಅದಾನಿ ವಿವಾದದ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚನೆಗೆ ಒತ್ತಾಯಿಸಿ ನಡೆಸುತ್ತಿದ್ದ ಗದ್ದಲದ ನಡುವೆ ಜಮ್ಮು-ಕಾಶೀರ ಬಜೆಟ್ಗೆ ಅನುಮೋದನೆ ನೀಡಲಾಗಿದೆ.
1.18 ಲಕ್ಷ ಕೋಟಿ ಬಜೆಟ್ನಲ್ಲಿ 77,009 ಕೋಟಿ ರೂಪಾಯಿ ಆದಾಯ ವೆಚ್ಚ ಮತ್ತು 41,491 ಕೋಟಿ ಬಂಡವಾಳ ವೆಚ್ಚವಾಗಲಿದೆ.
ಮಂಗಳವಾರ ಸದನವು ಜಮ್ಮು ಮತ್ತು ಕಾಶ್ಮೀರ ವಿನಿಯೋಗ (ಸಂಖ್ಯೆ 2) ಮಸೂದೆ 2023 ಮತ್ತು ಜಮ್ಮು ಮತ್ತು ಕಾಶ್ಮೀರ ವಿನಿಯೋಗ ಮಸೂದೆ 2023 ಅನ್ನು ಧ್ವನಿ ಮತಗಳೊಂದಿಗೆ ಅಂಗೀಕರಿಸಿತು. ಜಮ್ಮು ಮತ್ತು ಕಾಶ್ಮೀರ 2023-24 ರ ಬಜೆಟ್ ಅನ್ನು ಮಾರ್ಚ್ 13 ರಂದು ಲೋಕಸಭೆಯಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಮಂಡಿಸಿದರು.
“ಜಮ್ಮು ಮತ್ತು ಕಾಶ್ಮೀರಕ್ಕೆ 2023-24 ರ ಬಜೆಟ್ ಮತ್ತೆ 1 ಲಕ್ಷ ಕೋಟಿ ರೂಪಾಯಿಗಳನ್ನು ದಾಟಲಿದೆ, ಇದು ಜಮ್ಮು ಮತ್ತು ಕಾಶ್ಮೀರವನ್ನು ಅಭಿವೃದ್ಧಿಯ ಮಾದರಿಯನ್ನಾಗಿ ಮಾಡುವ ನಮ್ಮ ಬದ್ಧತೆಯ ಸೂಚಕವಾಗಿದೆ” ಎಂದು ಮಾರ್ಚ್ನಲ್ಲಿ ಮಂಡಿಸಿದ ಲಿಖಿತ ಭಾಷಣದಲ್ಲಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.