ನವದೆಹಲಿ: ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರ ಆಪ್ತ ಸಹಾಯಕರಾಗಿರುವ ಎರಿಕ್ ಗಾರ್ಸೆಟ್ಟಿ ಅವರನ್ನು ಬುಧವಾರ ಯುಎಸ್ ಸೆನೆಟ್ ಭಾರತಕ್ಕೆ ಅಮೆರಿಕಾದ ಮುಂದಿನ ರಾಯಭಾರಿಯಾಗಿ ನೇಮಕಗೊಳಿಸಿದೆ.
ಎರಡು ವರ್ಷಗಳಿಂದ ಖಾಲಿಯಾಗಿದ್ದ ಪ್ರಮುಖ ರಾಜತಾಂತ್ರಿಕ ಸ್ಥಾನವನ್ನು ತುಂಬಲು ಸೆನೆಟ್ 52-42 ಮತಗಳನ್ನು ನೀಡಿತು. ಲಾಸ್ ಏಂಜಲೀಸ್‌ನ ಮಾಜಿ ಮೇಯರ್ ಎರಿಕ್ ನಾಮನಿರ್ದೇಶನವು ಜುಲೈ 2021 ರಿಂದ ಯುಎಸ್ ಕಾಂಗ್ರೆಸ್‌ನಲ್ಲಿ ಬಾಕಿ ಉಳಿದಿತ್ತು.
ಬಿಡೆನ್ ಅವರಿಂದ ಪ್ರತಿಷ್ಠಿತ ರಾಜತಾಂತ್ರಿಕ ಪೋಸ್ಟಿಂಗ್‌ಗೆ ಎರಿಕ್ ನಾಮನಿರ್ದೇಶನಗೊಂಡಿದ್ದರು. ಕಳೆದ ವಾರ, ಸೆನೆಟ್ ವಿದೇಶಿ ಸಂಬಂಧಗಳ ಸಮಿತಿಯು ಅವರ ನಾಮನಿರ್ದೇಶನದ ಪರವಾಗಿ 13-8 ಮತಗಳನ್ನು ನೀಡಿತು.
ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷವು ಬಿಡೆನ್ ಅವರ ನಿಕಟ ಸಹಾಯಕ ಎರಿಕ್ ಅವರನ್ನು ನೇಮಕ ಮಾಡಲು ವಿರೋಧಿಸಿತ್ತು. ಈ ಕಾರಣ ಕಳೆದ ಕಾಂಗ್ರೆಸ್‌ನಲ್ಲಿ ಅವರ ನಾಮನಿರ್ದೇಶನವನ್ನು ಮತಕ್ಕಾಗಿ ಸೆನೆಟ್ ಅಂಗಳಕ್ಕೆ ತರಲಾಗಿಲ್ಲ.
ನಂತರ 52 ವರ್ಷದ ಗಾರ್ಸೆಟ್ಟಿ ಅವರನ್ನು ಅಧ್ಯಕ್ಷ ಬಿಡೆನ್ ಅವರ 2021ರಲ್ಲೂ ಮರು ನಾಮನಿರ್ದೇಶನ ಮಾಡಿದ್ದರು. ಆಗಲೂ ವಿರೋಧ ವ್ಯಕ್ತವಾಗಿ ನೇಮಕ ಮುಂದೂಡಲ್ಪಟ್ಟಿತ್ತು. ಇದೀಗ ಕೊನೆಗೂ ಅವರನ್ನು ಸೆನೆಟ್ ಅನುಮೋದನೆಯೊಂದಿಗೆ ಭಾರತದ ರಾಯಭಾರಿಯಾಗಿ ನೇಮಿಸಲಾಗಿದೆ.
Proud to endorse @JoeBiden for president. He's a close friend who has been an incredible partner in delivering progress for L.A. — on climate, #RaiseTheWageLA and more. We need him to bring our nation and world together during these divided and dangerous times. pic.twitter.com/fVRDazM86o
— Eric Garcetti (@ericgarcetti) January 10, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.