ನವದೆಹಲಿ: ಕಾಶ್ಮೀರದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಕುರಿತು ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿರುವ ಅಭಿಪ್ರಾಯವನ್ನು “ಷಡ್ಯಂತ್ರ ಮತ್ತು ಕಾಲ್ಪನಿಕ” ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ಬಣ್ಣಿಸಿದ್ದಾರೆ.
ಭಾರತದ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ಸುಳ್ಳುಗಳನ್ನು ಹರಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
“ನ್ಯೂಯಾರ್ಕ್ ಟೈಮ್ಸ್ ಭಾರತದ ಬಗ್ಗೆ ಏನನ್ನಾದರು ಪ್ರಕಟಿಸುವಾಗ ತಟಸ್ಥ ನೀತಿಯ ಎಲ್ಲಾ ಸೋಗುಗಳನ್ನು ಬಹಳ ಹಿಂದೆಯೇ ಕೈಬಿಟ್ಟಿದೆ. ಕಾಶ್ಮೀರದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಕುರಿತು ಅದರ ಅಭಿಪ್ರಾಯವು ಷಡ್ಯಂತ್ರ ಮತ್ತು ಕಾಲ್ಪನಿಕವಾಗಿದೆ, ಇದು ಭಾರತ ಮತ್ತು ಅದರ ಪ್ರಜಾಪ್ರಭುತ್ವ ಮೌಲ್ಯಗಳ ಮತ್ತು ಸಂಸ್ಥೆಗಳ ಬಗ್ಗೆ ಸುಳ್ಳು ಪ್ರಚಾರವನ್ನು ಹರಡುವ ಏಕೈಕ ಉದ್ದೇಶದಿಂದ ಪ್ರಕಟಿಸಲ್ಪಟ್ಟಿದೆ” ಎಂದು ಠಾಕೂರ್ ಟ್ವಿಟ್ ಮೂಲಕ ಹೇಳಿದ್ದಾರೆ.
“ಇದು ನ್ಯೂಯಾರ್ಕ್ ಟೈಮ್ಸ್ ಮತ್ತು ಇತರ ಕೆಲವು ಸಮಾನ ಮನಸ್ಸಿನ ವಿದೇಶಿ ಮಾಧ್ಯಮಗಳು ಭಾರತ ಮತ್ತು ನಮ್ಮ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಸುಳ್ಳುಗಳನ್ನು ಹರಡುವುದರ ಮುಂದುವರಿಕೆಯಾಗಿದೆ. ಅಂತಹ ಸುಳ್ಳುಗಳು ಹೆಚ್ಚು ಕಾಲ ಉಳಿಯುವುದಿಲ್ಲ” ಎಂದು ಅವರು ಹೇಳಿದ್ದಾರೆ.
“ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ನಾವು ಜನರು ಬಹಳ ಪ್ರಬುದ್ಧರಾಗಿದ್ದೇವೆ ಮತ್ತು ಇಂತಹ ಕಾರ್ಯಸೂಚಿ ಚಾಲಿತ ಮಾಧ್ಯಮಗಳಿಂದ ನಾವು ಪ್ರಜಾಪ್ರಭುತ್ವದ ವ್ಯಾಕರಣವನ್ನು ಕಲಿಯಬೇಕಾಗಿಲ್ಲ” ಎಂದಿದ್ದಾರೆ.
“ಭಾರತೀಯ ನೆಲದಲ್ಲಿ ನಿಮ್ಮ ನಿರ್ಣಾಯಕ ಕಾರ್ಯಸೂಚಿಯನ್ನು ನಡೆಸುವ ಮನಸ್ಥಿತಿಯನ್ನು ಭಾರತೀಯರು ಅನುಮತಿಸುವುದಿಲ್ಲ” ಎಂದು ಸಚಿವರು ಹೇಳಿದ್ದಾರೆ.
New York Times had long back dropped all pretensions of neutrality while publishing anything about India. NYT's so called opinion piece on freedom of press in Kashmir is mischievous & fictitious published w/ a sole motive to spread a propaganda about India…
1/n
— Anurag Thakur (@ianuragthakur) March 10, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.