News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೇಘಾಲಯ ಸಿಎಂ ಆಗಿ ಸಂಗ್ಮಾ ಪ್ರಮಾಣವಚನ: ಮೋದಿ ಭಾಗಿ

ನವದೆಹಲಿ: ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಮುಖ್ಯಸ್ಥ ಕಾನ್ರಾಡ್ ಸಂಗ್ಮಾ ಅವರು ಇಂದು  ಮೇಘಾಲಯದ ಮುಖ್ಯಮಂತ್ರಿಯಾಗಿ ಸತತ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದರು.

ಫೆಬ್ರವರಿ 27 ರ ಚುನಾವಣೆಯಲ್ಲಿ 26 ಸ್ಥಾನಗಳನ್ನು ಗೆದ್ದ ಸಂಗ್ಮಾ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಇತರ ಸಂಪುಟ ಸಚಿವರುಗಳೊಂದಿಗೆ ಪ್ರಮಾಣ ವಚನ ಸ್ವೀಕರಿಸಿದರು.

ಸಂಗ್ಮಾ ಅವರ ನೇತೃತ್ವದ ಹೊಸ ಮೇಘಾಲಯ ಸರ್ಕಾರ ಎನ್‌ಪಿಪಿ ಪಕ್ಷದಿಂದ ಎಂಟು ಮಂತ್ರಿಗಳನ್ನು ಹೊಂದಿದ್ದರೆ, ಅದರ ಮಿತ್ರಪಕ್ಷಗಳು ನಾಲ್ಕು ಮಂತ್ರಿ ಸ್ಥಾನಗಳನ್ನು ಹೊಂದಲಿವೆ.

ಎನ್‌ಪಿಪಿಯ ಮಿತ್ರ ಪಕ್ಷ ಯುಡಿಪಿ ಇಬ್ಬರು ಸಚಿವರನ್ನು ಹೊಂದಿದ್ದರೆ, ಬಿಜೆಪಿ ಮತ್ತು ಹಿಲ್ ಸ್ಟೇಟ್ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಎಚ್‌ಎಸ್‌ಪಿಡಿಪಿ) ತಲಾ ಒಬ್ಬರನ್ನು ಹೊಂದಿದೆ.

ನಿಯಮದ ಪ್ರಕಾರ 60 ಸದಸ್ಯ ಬಲದ ವಿಧಾನಸಭೆ ಹೊಂದಿರುವ ಮೇಘಾಲಯದಲ್ಲಿ ಸಿಎಂ ಸೇರಿ 12ಕ್ಕಿಂತ ಹೆಚ್ಚು ಸಚಿವರನ್ನು ಹೊಂದುವಂತಿಲ್ಲ.

ಎನ್‌ಪಿಪಿಗೆ ಸರ್ಕಾರ ರಚಿಸಲು ಪ್ರಸ್ತುತ 45 ಶಾಸಕರ ಬೆಂಬಲವಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top