ಬೆಂಗಳೂರು: ನರೇಂದ್ರ ಮೋದಿಜಿ ಅವರ ನೇತೃತ್ವದ ಕೇಂದ್ರ ಸರಕಾರ ಮತ್ತು ರಾಜ್ಯದ ಬಿಜೆಪಿ ಸರಕಾರವು ಸಂಕಲ್ಪದಿಂದ ಸಿದ್ಧಿಗೆ ಮುಂದಾಗಿದೆ. ಅದಕ್ಕಾಗಿ ಡಬಲ್ ಎಂಜಿನ್ ಸರಕಾರಗಳ ಸಾಧನೆಯನ್ನು ಜನರಿಗೆ ತಿಳಿಸಲು ಪ್ರಗತಿ ರಥಗಳನ್ನು ಜನರ ಬಳಿಗೆ ಒಯ್ಯುತ್ತಿದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
“ಬಿಟಿಎಂ ಲೇಔಟ್ನ 2ನೇ ಹಂತದ ಸ್ವಾಮಿ ವಿವೇಕಾನಂದ ಆಟದ ಮೈದಾನ”ದಲ್ಲಿ ಇಂದು ಬಿಜೆಪಿ ಪ್ರಗತಿ ರಥದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಥ ವಾಪಸ್ ಬರುವಾಗ ಸಂಕಲ್ಪ ಸಿದ್ಧಿಯಾಗಲಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಬೇಕಿದೆ. ರಾಜ್ಯ ಸರಕಾರವು ಆರ್ಥಿಕ ಚೇತರಿಕೆ ಮಾತ್ರವಲ್ಲದೆ ಜನಕಲ್ಯಾಣ ಕಾರ್ಯಕ್ರಮಗಳನ್ನು ಮಾಡಿದೆ. ನಮ್ಮ ಕ್ಲಿನಿಕ್, ಶಾಲೆಗಳ ಸುಧಾರಣೆ, ನಗರೋತ್ಥಾನಕ್ಕೆ 6 ಸಾವಿರ ಕೋಟಿ ನೀಡಿದ್ದೇವೆ. ಸಬರ್ಬನ್ ರೈಲಿಗೆ ಅತಿ ಹೆಚ್ಚು ಹಣ ಕೊಡಲಾಗಿದೆ. ಸೆಟಲೈಟ್ ಟೌನ್, ರಿಂಗ್ ರೋಡ್ಗೆ ಹಣ ನೀಡಿದ್ದಾರೆ. ಕೆಲಸವೂ ನಡೆಯುತ್ತಿದೆ. ಇದರದಲ್ಲಿ ಸಂಸದರ ಪಾತ್ರ ಪ್ರಮುಖ ಎಂದು ಮೆಚ್ಚುಗೆ ಸೂಚಿಸಿದರು.
ರೈಲ್ವೆಸ್ಗೆ, ರಾಷ್ಟ್ರೀಯ ಹೆದ್ದಾರಿಗೂ ಗರಿಷ್ಠ ಹಣ ಬಂದಿದೆ. ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಮೋದಿಜಿ ಸರಕಾರವು ಪ್ರಬಲ ದೇಶವಾಗಿ ಹೊರಹೊಮ್ಮಲು ಕಾರಣರಾಗಿದೆ ಎಂದು ವಿವರಿಸಿದರು.
ರಾಜ್ಯ ಸರಕಾರದಿಂದ ರೈತ ವಿದ್ಯಾನಿಧಿ ನೀಡಲಾಗುತ್ತಿದೆ. ನೇಕಾರರು, ಟೇಲರ್, ಆಟೋ ಡ್ರೈವರ್ ಮಕ್ಕಳು ಸೇರಿ ಅನೇಕ ಸಮುದಾಯಕ್ಕೆ ಇದನ್ನು ವಿಸ್ತರಿಸಲಾಗಿದೆ. ಯುವಕರಿಗೆ ಬ್ಯಾಂಕ್ ನೆರವು ಲಭಿಸಿದೆ. ಯುವಕರಿಗೆ ಸ್ವಾಮಿ ವಿವೇಕಾನಂದ ಯೋಜನೆ, ಹೆಣ್ಮಕ್ಕಳಿಗೆ ಪ್ರತ್ಯೇಕ ಯೋಜನೆ, ವಿದ್ಯಾರ್ಥಿನಿಯರ ಶುಲ್ಕ ಮನ್ನಾ, ಉಚಿತ ಪಾಸ್ ನೀಡಲಾಗುತ್ತಿದೆ. ಐಟಿಐ ಟ್ರೈನಿಂಗ್ ಪಡೆಯುವವರಿಗೆ ಸ್ಟೈಫಂಡ್ ಕೊಡಲಾಗುವುದು, ಬಡವರ ಕಲ್ಯಾಣ, ರಾಜ್ಯದ ಅಭಿವೃದ್ಧಿಗಾಗಿ ನಾವು ಶ್ರಮಿಸುತ್ತಿದ್ದೇವೆ. ಜನರೂ ಬಿಜೆಪಿ ಮೇಲೆ ಭರವಸೆ ಇಟ್ಟಿದ್ದಾರೆ. ಇದು ಗೆಲುವಿನ ಸಂಕೇತ. ಕರ್ನಾಟಕದಲ್ಲಿ ಬಿಜೆಪಿ ಸುನಾಮಿ ಏಳಲಿ ಎಂದು ಆಶಿಸಿದರು.
ಬೆಂಗಳೂರು ದಕ್ಷಿಣ ಸಂಸದ ಮತ್ತು ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿಸೂರ್ಯ ಅವರು ಮಾತನಾಡಿ, ಡಬಲ್ ಎಂಜಿನ್ ಸರಕಾರಗಳ ಕೊಡುಗೆಯನ್ನು ತಿಳಿಸಲು ರಥವು ನೆರವಾಗಲಿದೆ. 130ಕ್ಕೂ ಹೆಚ್ಚು ರಥಗಳು ರಾಜ್ಯದೆಲ್ಲೆಡೆ ಸಂಚರಿಸಲಿವೆ ಎಂದು ತಿಳಿಸಿದರು.
ಕೋವಿಡ್, ಅತಿವೃಷ್ಟಿಯ ನಡುವೆಯೂ ಅಭೂತಪೂರ್ವ ವಿಕಾಸ ಸಾಧ್ಯವಾಗಿದೆ. ನೀರಾವರಿ ಯೋಜನೆಗೆ ಶಾಶ್ವತ ಪ್ರಯತ್ನ ಮಾಡಿದ್ದೇವೆ. ನಗರವೊಂದರಲ್ಲೇ 1 ಕೋಟಿ ಲಾಭಾರ್ಥಿಗಳು ನಮ್ಮ ನಗರದಲ್ಲಿದ್ದಾರೆ. ಅಭಿವೃದ್ಧಿಯ ವೇಗದ ವಿಚಾರವನ್ನು ಜನರಿಗೆ ತಿಳಿಸಲಾಗುವುದು ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.